ಜ್ಯುವೆಲ್ಲರಿ ಶಾಪ್​ನಿಂದ ಮಗು ಕಿಡ್ನ್ಯಾಪ್: ಮತ್ತೆ ತಾಯಿ ಮಡಿಲು ಸೇರಿದ್ದು ಹೇಗೆ?

[lazy-load-videos-and-sticky-control id=”FANt6j6Frx0″] ಚಿಕ್ಕಮಗಳೂರು: ಸಂತಸ ತುಂಬಿದ ಮನೆಯಲಿ ಇದ್ದಕ್ಕಿದ್ದಂತೆ ದುಃಖ ಮಡುಗಟ್ಟಿತ್ತು. ಹೆತ್ತು ಹೊತ್ತು ಸಾಕಿ ಸಲುಹಿದ ಕಂದನನ್ನ ಕಿವಿ ಚುಚ್ಚಿಸೋ ಕಾರ್ಯಕ್ರಮದ ದಿನವೇ ಖದೀಮರು ಕಿಡ್ನಾಪ್ ಮಾಡಿದ್ರು. ಹೆತ್ತಮ್ಮನ ಮಡಿಲು ಖಾಲಿಯಾಗಿತ್ತು.. ಆದ್ರೀಗ, 9 ತಿಂಗಳ ಆ ಎಳೆ ಕಂದ ಮತ್ತೆ ಅಮ್ಮನ ಮಡಿಲು ಸೇರಿದೆ. ಜ್ಯುವೆಲ್ಲರಿ ಶಾಪ್​ನಿಂದ ಮಗು ಕಿಡ್ನ್ಯಾಪ್.. ಕನಸಿನ ಕೂಸಿಗಾಗಿ ಹೆತ್ತ ತಾಯಿ ನರಳಿದ್ಲು.. ಎಲ್ಲಿ ಹೋಯ್ತು ನನ್ನ ಕಂದ? ಏನಾಯ್ತು ನನ್ನ ಕಂದ ಅಂತಾ ಪರಿತಪಿಸಿದ್ಲು.. ಊಟ, ನಿದ್ದೆ ಬಿಟ್ಟಿದ್ಲು.. […]

ಜ್ಯುವೆಲ್ಲರಿ ಶಾಪ್​ನಿಂದ ಮಗು ಕಿಡ್ನ್ಯಾಪ್: ಮತ್ತೆ ತಾಯಿ ಮಡಿಲು ಸೇರಿದ್ದು ಹೇಗೆ?
Follow us
ಸಾಧು ಶ್ರೀನಾಥ್​
|

Updated on:Sep 17, 2020 | 12:01 PM

[lazy-load-videos-and-sticky-control id=”FANt6j6Frx0″]

ಚಿಕ್ಕಮಗಳೂರು: ಸಂತಸ ತುಂಬಿದ ಮನೆಯಲಿ ಇದ್ದಕ್ಕಿದ್ದಂತೆ ದುಃಖ ಮಡುಗಟ್ಟಿತ್ತು. ಹೆತ್ತು ಹೊತ್ತು ಸಾಕಿ ಸಲುಹಿದ ಕಂದನನ್ನ ಕಿವಿ ಚುಚ್ಚಿಸೋ ಕಾರ್ಯಕ್ರಮದ ದಿನವೇ ಖದೀಮರು ಕಿಡ್ನಾಪ್ ಮಾಡಿದ್ರು. ಹೆತ್ತಮ್ಮನ ಮಡಿಲು ಖಾಲಿಯಾಗಿತ್ತು.. ಆದ್ರೀಗ, 9 ತಿಂಗಳ ಆ ಎಳೆ ಕಂದ ಮತ್ತೆ ಅಮ್ಮನ ಮಡಿಲು ಸೇರಿದೆ.

ಜ್ಯುವೆಲ್ಲರಿ ಶಾಪ್​ನಿಂದ ಮಗು ಕಿಡ್ನ್ಯಾಪ್.. ಕನಸಿನ ಕೂಸಿಗಾಗಿ ಹೆತ್ತ ತಾಯಿ ನರಳಿದ್ಲು.. ಎಲ್ಲಿ ಹೋಯ್ತು ನನ್ನ ಕಂದ? ಏನಾಯ್ತು ನನ್ನ ಕಂದ ಅಂತಾ ಪರಿತಪಿಸಿದ್ಲು.. ಊಟ, ನಿದ್ದೆ ಬಿಟ್ಟಿದ್ಲು.. ಅದೇ ಅಮ್ಮನಿಗೆ ಇಂದೆಂದೂ ಕಾಣದ ಖುಷಿ.. ನನ್ನ ಕರುಳಿನ ಕುಡಿ ಮಡಿಲು ಸೇರಿತು ಅನ್ನೋ ಸಂತಸ.. ತಾಯಿಯ ತೋಳಲ್ಲಿ ಸಂತಸದಿಂದ ನಲಿದಾಡ್ತಿರೋ ಮಗು.. ಹೆತ್ತಮ್ಮನಿಗೆ ಹೇಳಲಾರದ ಖುಷಿ.!

ಈ ದಂಪತಿಯ ಹೆಸರು ರಾಜು ಹಾಗೂ ಪ್ರೇಮಾ. ಚಿಕ್ಕಮಗಳೂರು ಜಿಲ್ಲೆಯ ಬಾಳಯ್ಯನ ಹೊಸೂರು ಗ್ರಾಮದ ನಿವಾಸಿಗಳು. ಇವರ 9 ತಿಂಗಳ ಕಂದನಿಗೆ ಕಿವಿ ಚುಚ್ಚಿಸುವ ಸಲುವಾಗಿ ಅಜ್ಜಂಪುರದಲ್ಲಿರುವ ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದಾರೆ. ಕಿವಿ ಚುಚ್ಚಿಸಿದ ಬಳಿಕ ಮನೆಯವರ ಗಮನವೆಲ್ಲಾ ಓಲೆ ಖರೀದಿಯತ್ತ ತಿರುಗಿದ್ರೆ.

ಇತ್ತ ತಾಯಿ ಮಗುವನ್ನ ಅಲ್ಲೇ ಬಿಟ್ಟು ರೆಸ್ಟ್ ರೂಮ್‌ಗೆ ತೆರಳಿದ್ದಾರೆ ಅಷ್ಟೇ. ಅಷ್ಟರಲ್ಲಿ ಮಗು ನಾಪತ್ತೆಯಾಗಿದ್ದೆ. ಅಂಗಡಿಗೆ ಬಂದಿದ್ದ ತಂದೆ, ತಾಯಿ, ಅಜ್ಜಿ ಎಲ್ಲರೂ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ಮಗು ಸುಳಿವೆ ಸಿಕ್ಕಿಲ್ಲ.

ಸಂಬಂಧಿಕರೆ ಮಗುವನ್ನ ಕದ್ದೊಯ್ದಿದ್ದರು.. ಕೊನೆಗೆ ಮಗುವಿನ ಪೋಷಕರು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ದೂರು ದಾಖಲಿಸಿದ್ದಾರೆ. ಕಿವಿ ಚುಚ್ಚಿಸೋ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರಾದ ಆನಂದ್ ಮತ್ತು ಪ್ರದೀಪ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಜ್ಜಂಪುರ ಪೊಲೀಸರು ತನಿಖೆ ಆರಂಭಿಸಿ ನಾಪತ್ತೆಯಾಗಿದ್ದ ಮಗುವನ್ನ ಪತ್ತೆ ಹಚ್ಚಿದ್ದಾರೆ. ಕಳೆದುಹೋಗಿದ್ದ ಮಗು ತಾಯಿ ಮಡಿಲು ಸೇರುವಂತೆ ಮಾಡಿದ್ದಾರೆ.

ಕಿವಿ ಚುಚ್ಚಿಸೋ ಕಾರ್ಯಕ್ರಮಕ್ಕೆ ಬಂದಿದ್ದ ಹಾಸನ ಮೂಲದ ಪ್ರದೀಪ್, ಚಿತ್ರದುರ್ಗದ ಆನಂದ್ ಇಬ್ಬರು ಸೇರಿ ಮಗುವನ್ನ ಕಿಡ್ನಾಪ್ ಮಾಡಿದ್ದಾರೆ. ಅತ್ತ ಪೊಲೀಸರು ಚಿತ್ರದುರ್ಗಕ್ಕೆ ಹೋಗಿ ಆನಂದ್ ಬಗ್ಗೆ ವಿಚಾರಿಸಿದ್ದಾರೆ. ಈ ವಿಷ್ಯ ತಿಳಿದ ಖದೀಮರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯಾದಪುರ ಗ್ರಾಮದ ದೇವಾಲಯವೊಂದರಲ್ಲಿ ಮಗುವನ್ನ ಬಿಟ್ಟು ಹೋಗಿದ್ದಾರೆ.

ಅದೇನೆ ಇರಲಿ, ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಹೆತ್ತಮ್ಮನಿಂದ ದೂರ ಆಗಿದ್ದ ಕೂಸು ಮತ್ತೆ ಅಮ್ಮನ ಮಡಿಲು ಸೇರಿದೆ. ಅಮ್ಮನಿಗೂ ಕಂದ ಸಿಕ್ಕಿದ ಅನ್ನೋ ಸಂತಸ ಮೂಡಿದೆ.

Published On - 6:40 am, Thu, 17 September 20

ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್