AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ!

ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ!

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Apr 19, 2026 | 10:43 AM

Share

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ರೋಸ್ ಆನಿಯನ್ (ಗುಲಾಬಿ ಈರುಳ್ಳಿ) ಎಂಬ ವಿಶೇಷ ಈರುಳ್ಳಿ ತಳಿಯನ್ನು ಬೆಳೆಯಲಾಗುತ್ತದೆ. ತನ್ನ ವಿಶಿಷ್ಟವಾದ ಗಾಢ ಕೆಂಪು ಬಣ್ಣ, ತೀಕ್ಷ್ಣವಾದ ಖಾರ ಹಾಗೂ ದೀರ್ಘಕಾಲದ ಬಾಳಿಕೆಗೆ (Shelf life) ಇದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಹೀಗೆ ಬೆಳೆದ ಗುಲಾಬಿ ಈರುಳ್ಳಿಯನ್ನು ಹೆಚ್ಚಾಗಿ ಮಲೇಶಿಯಾ, ಥೈಲ್ಯಾಂಡ್, ಸಿಂಗಾಪೂರ್ ಸೇರಿ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ರೋಸ್ ಆನಿಯನ್ ಬೆಳೆಗಾರರು ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರ, ಏಪ್ರಿಲ್ 19: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ರೋಸ್ ಆನಿಯನ್ (ಗುಲಾಬಿ ಈರುಳ್ಳಿ) ಎಂಬ ವಿಶೇಷ ಈರುಳ್ಳಿ ತಳಿಯನ್ನು ಬೆಳೆಯಲಾಗುತ್ತದೆ. ತನ್ನ ವಿಶಿಷ್ಟವಾದ ಗಾಢ ಕೆಂಪು ಬಣ್ಣ, ತೀಕ್ಷ್ಣವಾದ ಖಾರ ಹಾಗೂ ದೀರ್ಘಕಾಲದ ಬಾಳಿಕೆಗೆ (Shelf life) ಇದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಹೀಗೆ ಬೆಳೆದ ಗುಲಾಬಿ ಈರುಳ್ಳಿಯನ್ನು ಹೆಚ್ಚಾಗಿ ಮಲೇಶಿಯಾ, ಥೈಲ್ಯಾಂಡ್, ಸಿಂಗಾಪೂರ್ ಸೇರಿ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ರೋಸ್ ಆನಿಯನ್ ಬೆಳೆಗಾರರು ಕಂಗಾಲಾಗಿದ್ದಾರೆ.

ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲೂಕುಗಳಲ್ಲಿ ರೈತರು ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಗುಲಾಬಿ ಈರುಳ್ಳಿಯನ್ನು ವಿದೇಶಗಳಿಗೆ ರಫ್ತು ಮಾಡುವ ವರ್ತಕರು ಖರೀದಿಸುತ್ತಿಲ್ಲ. ಯುದ್ಧದ ನೆಪ ಹೇಳಿ ಖರೀದಿ ನಿಲ್ಲಿಸಿರುವುದರಿಂದ ಸಾವಿರಾರು ಟನ್ ರೋಸ್ ಆನಿಯನ್ ಹೊಲಗಳಲ್ಲೇ ಕೊಳೆಯುತ್ತಿದ್ದು, ರೈತರು ಅತಂತ್ರರಾಗಿದ್ದಾರೆ. ಶಿಡ್ಲಘಟ್ಟ ತಾಲೂಕಿನ ನಲ್ಲೋಜಿನಹಳ್ಳಿ ಗ್ರಾಮದ ಅನಿತಮ್ಮ ಎಂಬ ರೈತ ಮಹಿಳೆ ಮೂರು ಎಕರೆ ಪ್ರದೇಶದಲ್ಲಿ ರೋಸ್ ಆನಿಯನ್ ಬೆಳೆಯಲು 1.20 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದಾರೆ. ಸಾಮಾನ್ಯವಾಗಿ ಒಂದು 60-70 ಕೆ.ಜಿ ತೂಕದ ಈರುಳ್ಳಿ ಮೂಟೆಗೆ 1200 ರಿಂದ 1500 ರೂಪಾಯಿ ದೊರೆಯುತ್ತಿತ್ತು. ಆದರೆ, ಪ್ರಸ್ತುತ 100 ರೂಪಾಯಿಗೆ ಸಹ ಖರೀದಿದಾರರಿಲ್ಲದೆ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಮಕ್ಕಳ ಶಿಕ್ಷಣ, ಕೃಷಿ ಖರ್ಚು ನಿರ್ವಹಿಸಲು ಅಸಾಧ್ಯವಾಗಿದೆ. ಕೇಂದ್ರ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸುವಂತೆ ರೈತ ಸಮುದಾಯ ಆಗ್ರಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 19, 2026 10:42 AM
Follow Us