ಬಿಜೆಪಿ ಹೂಡಿರುವ ಮಾನಹಾನಿ ಮೊಕದ್ದಮೆ ಹಿನ್ನೆಲೆ ವಿಚಾರಣೆಗೆ ಹಾಜರಾಗಿ ಒಟ್ಟಿಗೆ ಕೋರ್ಟ್ ನಿಂದ ಹೊರಬಿದ್ದ ಸಿಎಂ, ಡಿಸಿಎಂ
ರಾಹುಲ್ ಗಾಂಧಿ ಸಹ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಅವರ ಗೈರುಹಾಜರಿಯ ಬಗ್ಗೆ ಕಾಂಗ್ರೆಸ್ ಪರ ವಕೀಲ ಕೊರ್ಟ್ ಏನು ಹೇಳಿದರೋ ಅಂತ ಮಾಹಿತಿ ಇಲ್ಲ. ಕೋರ್ಟ್ ಆವರಣದಲ್ಲಿ ನಡೆದು ಬರುವಾಗ ವಕೀಲರು ಮುಖ್ಯಮಂತ್ರಿ ಜೊತೆ ಮಾತಾಡಿದರು.
ಬೆಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಮತ್ತು ರಾಹುಲ್ ಗಾಂಧಿ (Rahul Gandhi) ಮಾಡಿದ 40 ಪರ್ಸೆಂಟ್ ಕಮೀಶನ್ ಅರೋಪದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಮಾನನಷ್ಟ ದಾವೆಯನ್ನು ಹೂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಗರದ ಸಿವಿಲ್ ಕೋರ್ಟ್ ಮುಂದೆ ಹಾಜರಾದರು. ವಿಚಾರಣೆ ಮುಗಿಸಿಕೊಂಡು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಒಟ್ಟಿಗೆ ಕೋರ್ಟ್ ನಿಂದ ಹೊರಬರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ರಾಹುಲ್ ಗಾಂಧಿ ಸಹ ಇಂದು ವಿವಾರಣೆಗೆ ಹಾಜರಾಗಬೇಕಿತ್ತು. ಅವರ ಗೈರುಹಾಜರಿಯ ಬಗ್ಗೆ ಕಾಂಗ್ರೆಸ್ ಪರ ವಕೀಲ ಕೊರ್ಟ್ ಏನು ಹೇಳಿದರೋ ಅಂತ ಮಾಹಿತಿ ಇಲ್ಲ. ಕೋರ್ಟ್ ಆವರಣದಲ್ಲಿ ನಡೆದು ಬರುವಾಗ ವಕೀಲರು ಮುಖ್ಯಮಂತ್ರಿ ಜೊತೆ ಮಾತಾಡಿದರು. ನಗರದಲ್ಲಿ ಸಿದ್ದರಾಮಯ್ಯ ಎಲ್ಲೇ ಹೋದರು ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಕೆ ಗೋವಿಂದರಾಜ ಇರುತ್ತಾರೆ. ತಮಗಾಗಿ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಜೊತೆ ಸಿದ್ದರಾಮಯ್ಯ ಮಾತಾಡುತ್ತಾರೆ, ಆದರೆ ಗಲಾಟೆಯಿಂದಾಗಿ ಅವರ ಧ್ವನಿ ಕೇಳಿಸಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವರಾಜೇಗೌಡ ಮಾಡಿದ ಆರೋಪಕ್ಕೆ ಡಿಕೆ ಶಿವಕುಮಾರ್ ಹೆಚ್ಚಿನ ಮಹತ್ವ ನೀಡುತ್ತಿಲ್ಲ, ಬಿಟ್ಹಾಕಿ ಅಂತ ಸನ್ನೆ ಮಾಡುತ್ತಾರೆ!