AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ ಕುಲಕರ್ಣಿ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ  ವರ್ಗಾವಣೆ

ವಿನಯ್ ಕುಲಕರ್ಣಿ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ

Ramesha M
| Edited By: |

Updated on: Apr 16, 2026 | 7:28 PM

Share

ಕರ್ನಾಟಕದ ಜಿಲ್ಲಾ, ಸಿವಿಲ್, ಹಿರಿಯ ಸಿವಿಲ್ ನ್ಯಾಯಾಧೀಶಯರು ಸೇರಿದಂತೆ ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಪ್ರತಿವರ್ಷ ನಡೆಯುವ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಂತೆ ವರ್ಗಾವಣೆ ಮಾಡಿ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದು, ಜೂನ್ 1ರಿಂದ ಹೊಸ ಕಾರ್ಯಭಾರ ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನು ನಿನ್ನೆ (ಏಪ್ರಿಲ್ 15) ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಪ್ರಕರಣ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಅವರನ್ನೂ ಸಹ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು, (ಏಪ್ರಿಲ್ 16): ಕರ್ನಾಟಕದ ಜಿಲ್ಲಾ, ಸಿವಿಲ್, ಹಿರಿಯ ಸಿವಿಲ್ ನ್ಯಾಯಾಧೀಶರು ಸೇರಿದಂತೆ ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಪ್ರತಿವರ್ಷ ನಡೆಯುವ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಂತೆ ವರ್ಗಾವಣೆ ಮಾಡಿ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದು, ಜೂನ್ 1ರಿಂದ ಹೊಸ ಕಾರ್ಯಭಾರ ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನು ನಿನ್ನೆ (ಏಪ್ರಿಲ್ 15) ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಕೊಲೆ ಪ್ರಕರಣ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಅವರನ್ನೂ ಸಹ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: ಯಾರಿಗೆ ಜೀವಾವಧಿ? ಯಾರಿಗೆ ರಿಯಾಯಿತಿ? ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಫೈನಲ್

ಧಾರವಾಡದ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ಸೇರಿದಂತೆ 17 ಅಪರಾಧಿಗಳ ಶಿಕ್ಷೆ ಪ್ರಮಾಣ ಪ್ರಕಟಿಸುವ ಒಂದು ದಿನ ಮುನ್ನವೇ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ವರ್ಗಾವಣೆಗೊಂಡಿದ್ದಾರೆ. ಸಂತೋಷ್ ಗಜಾನನ ಭಟ್ ಅವರೇ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ್ದು, ವಿನಯ್ ಕುಲಕರ್ಣಿ ಸೇರಿದಂತೆ ಇತರೆ 17 ಜನರನ್ನು ದೋಷಿ ಎಂದು ತೀರ್ಪು ನೀಡಿದ್ದರು. ಅಲ್ಲದೇ ಇಂದು (ಏಪ್ರಿಲ್ 16) ಶಿಕ್ಷೆ ಪ್ರಮಾಣದ ಬಗ್ಗೆ ವಿಚಾರಣೆ ನಡೆಸಿದ್ದು, ನಾಳೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಮುಂದೂಡಿದ್ದರು. ಇದರ ಮಧ್ಯೆ ಅವರು ವರ್ಗಾವಣೆಯಾಗಿದ್ದು, ನಾಳೆ ಅಪರಾಧಿಗಳಿಗೆ ಅವರು ಶಿಕ್ಷೆ ಪ್ರಮಾಣ ಪ್ರಕಟಿಸುತ್ತಾರಾ ಇಲ್ವಾ ಅಂತ ಸಹಜವಾಗಿಯೇ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಆದ್ರೆ, ಈ ವರ್ಗಾವಣೆಯಲ್ಲಿ ಯಾವುದೇ ಅನುಮಾನಗಳಿಲ್ಲ. ಇದೊಂದು ಸಹಜ ವರ್ಗಾವಣೆಯಾಗಿದ್ದು, ಪ್ರತಿ ವರ್ಷ ಏಪ್ರಿಲ್​ ತಿಂಗಳಲ್ಲಿ ಜಡ್ಜ್​​ಗಳ ವರ್ಗಾವಣೆ ಪ್ರಕ್ರಿಯೆ ನಡೆಯುತ್ತೆ. ಇದರಿಂದ ಸಹಜವಾಗಿಯೇ ಎಲ್ಲಾ ಪ್ರಕರಣಗಳ ಪ್ರಕ್ರಿಯೆಗಳನ್ನು ಹೇಗೆ ಈವರೆಗೆ ನಡೆಸುತ್ತಿದ್ದರೋ ಜೂನ್ 1ರವರೆಗೂ ಹಾಗೇ ನಡೆಸಬಹುದು. ಹೀಗಾಗಿ ನಾಳೆ (ಏಪ್ರಿಲ್ 17) ಕೊಲೆ ಕೇಸ್ ಸಂಬಂಧ ವಿನಯ್ ಕುಲಕರ್ಣಿ ಸೇರಿದಂತೆ 17 ಅಪರಾಧಿಗಳಿಗೆ ಜಡ್ಜ್ ಸಂತೋಷ್ ಗಜಾನನ ಭಟ್ ಅವರೇ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ.

Follow Us