ಸ್ಟಿಂಗ್ ಆಪರೇಷನ್ ಕೇಸಿಗೆ ಮತ್ತೊಂದು ಸ್ಫೋಟಕ ತಿರುವು: ಕುತೂಹಲ ಮೂಡಿಸಿದ ಸಿಸಿಬಿ ನಡೆ
ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಪ್ರಕರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದ್ದು, ಸ್ಟಿಂಗ್ ಮೂಲಕನೇ ನನ್ನ ಬ್ಲ್ಯಾಕ್ಮೇಲ್ ಮಾಡಲಾಗ್ತಿದೆ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯರೇ ಹೇಳಿದ್ದಾರೆ. ಈ ಸಂಬಂಧ ಸಿಸಿಬಿ ಇಂಚಿಂಚೂ ತನಿಖೆ ಮಾಡಿದ್ದು.ಈ ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನಿಡಿದೆ. ಸ್ಟಿಂಗ್ ಆಪರೇಷನ್ನಲ್ಲಿ ಬರುವ ಅಷ್ಟೂ ವಿಚಾರ ಕಟ್ಟುಕಥೆ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಆದರೂ ಸಹ ಮತ್ತೊಮ್ಮೆ ಸಿದ್ದರಾಮಯ್ಯ ಹೇಳಿಕೆ ದಾಖಲಿಸಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಸ್ಟಿಂಗ್ ಟೀಂನಿಂದ ಬ್ಲ್ಯಾಕ್ ಮೇಲ್ ನಡೆದಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸೈಬರ್ ಪೊಲೀಸರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಬೆಂಗಳೂರು, (ಅಕ್ಟೋಬರ್ 30): ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಪ್ರಕರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದ್ದು, ಸ್ಟಿಂಗ್ ಮೂಲಕನೇ ನನ್ನ ಬ್ಲ್ಯಾಕ್ಮೇಲ್ ಮಾಡಲಾಗ್ತಿದೆ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯರೇ ಹೇಳಿದ್ದಾರೆ. ಈ ಸಂಬಂಧ ಸಿಸಿಬಿ ಇಂಚಿಂಚೂ ತನಿಖೆ ಮಾಡಿದ್ದು.ಈ ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನಿಡಿದೆ. ಸ್ಟಿಂಗ್ ಆಪರೇಷನ್ನಲ್ಲಿ ಬರುವ ಅಷ್ಟೂ ವಿಚಾರ ಕಟ್ಟುಕಥೆ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಆದರೂ ಸಹ ಮತ್ತೊಮ್ಮೆ ಸಿದ್ದರಾಮಯ್ಯ ಹೇಳಿಕೆ ದಾಖಲಿಸಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಸ್ಟಿಂಗ್ ಟೀಂನಿಂದ ಬ್ಲ್ಯಾಕ್ ಮೇಲ್ ನಡೆದಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸೈಬರ್ ಪೊಲೀಸರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
2011ರಲ್ಲಿ ಮಾತನಾಡುತ್ತಾ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, 2023ರಲ್ಲಿ ವಿಡಿಯೋ ಬಯಲಾಗಿದೆ. ಹೀಗಾಗಿ 2023ರಿಂದಲೂ ಈವರೆಗೂ ಯಾಕೆ ಸುಮ್ಮನಿದ್ದರು? ಎರಡೂವರೆ ವರ್ಷದಲ್ಲಿ ಏನಾದ್ರೂ ಬ್ಲ್ಯಾಕ್ಮೇಲ್ ಮಾಡಿದ್ರಾ? ಅಥವಾ ಹಣಕ್ಕಾಗಿ ಏನಾದ್ರೂ ಡಿಮ್ಯಾಂಡ್ ಮಾಡಲಾಗಿತ್ತಾ? ರಾಜಕೀಯವಾಗಿ ಏನಾದ್ರೂ ಬೆದರಿಕೆ ಹಾಕಲಾಗಿತ್ತಾ? ವಿಡಿಯೋ ಸಂಬಂಧ ಯಾರಾದ್ರೂ ಚರ್ಚೆ ಮಾಡಿದ್ದಾರಾ? ಈ ಎಲ್ಲಾ ಆಯಾಮದಲ್ಲೂ ತನಿಖಗೆ ಮುಂದಾಗಿದ್ದಾರೆ. ಈಗಾಗಲೇ ಅನುಮಾನ ಇರುವ ಪ್ರತಿಯೊಬ್ಬರ ವಿಚಾರಣೆ ಮಾಡಲಾಗಿದೆ. ದೂರು ಪಡೆದ ಬಳಿಕ ಸಿದ್ದರಾಮಯ್ಯನವರಿಂದ ಒಮ್ಮೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದ್ರೆ, ಆರಂಭದಲ್ಲಿ ಯಾವ ಹೆಸರನ್ನು ಹೇಳಿಲ್ಲ. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯನವರ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

