ಸ್ಟಿಂಗ್​ ಕೇಸ್ MLC ಚುನಾವಣೆ ಮೇಲೆ ಪರಿಣಾಮ:ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ

Edited By:

Updated on: Nov 03, 2026 | 2:38 PM

ಬೇಸರ ವ್ಯಕ್ತಪಡಿಸಿರೋ ಬಗ್ಗೆ ಮಾತನಾಡಿರೋ ಕೆ.ಎನ್ ರಾಜಣ್ಣ, ಸಿದ್ದರಾಮಯ್ಯ ಪ್ರಚಾರಕ್ಕೂ ಬರಲ್ಲ ಅಂತಾ ಹೇಳ್ತಿರೋದು ಪಕ್ಷದ ಮೇಲೆ ದುಷ್ಪರಿಣಾಮ ಬಿರುತ್ತೆ ಎಂದಿದ್ದಾರೆ. ಸ್ಟಿಂಗ್ ಆಪರೇಷನ್ ವಿಧಾನ ಪರಿಷತ್‌ ಚುನಾವಣೆ ಮೇಲೆ ಎಫೆಕ್ಟ್ ಬಿದ್ದಿದೆ. ಪರಿಷತ್ ವ್ಯಾಪ್ತಿಯಲ್ಲಿ ನಾವು ಕಾಂಗ್ರೆಸ್‌ನ 26 ಶಾಸಕರಿದ್ದೇವೆ. ನಾವಿದ್ದು ಸೋತಿದ್ದೇವೆ ಅಂದ್ರೆ 26 ಶಾಸಕರು ರಾಜೀನಾಮೆ ಕೊಡ್ಬೇಕು ಎಂದಿದ್ದಾರೆ. ಇದು ಕಾಂಗ್ರಸ್​​ನಲ್ಲಿ ಸಂಚಲನ ಸೃಷ್ಟಿಸಿದ್ದು, ಬೇಕಿದ್ರೆ ರಾಜಣ್ಣ ರಾಜೀನಾಮೆ ನೀಡಲಿ ಎಂದು ಸಚಿವ ಹೆಚ್​​​​ಸಿ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, (ನವೆಂಬರ್ 03): ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರೋ ಸ್ಟಿಂಗ್ ಆಪರೇಷನ್ ವಿಚಾರವೀಗ ಹೈಕಮಾಂಡ್ ಅಂಗಳಕ್ಕೂ ಮುಟ್ಟಿದೆ. ಖುದ್ದು ಸಿದ್ದರಾಮಯ್ಯನವರೇ ರಾಹುಲ್ ಗಾಂಧಿ ಭೇಟಿಯಾಗಿ ಸ್ಟಿಂಗ್ ವಿಚಾರವಾಗಿ ರಾಹುಲ್ ಗಾಂಧಿಗೆ ವರದಿ ನೀಡಿ 45 ನಿಮಿಷ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ರಾಹುಲ್ ಮುಂದೆ ಬೇಸರ ವ್ಯಕ್ತಪಡಿಸಿರೋ ಬಗ್ಗೆ ಮಾತನಾಡಿರೋ ಕೆ.ಎನ್ ರಾಜಣ್ಣ, ಸಿದ್ದರಾಮಯ್ಯ ಪ್ರಚಾರಕ್ಕೂ ಬರಲ್ಲ ಅಂತಾ ಹೇಳ್ತಿರೋದು ಪಕ್ಷದ ಮೇಲೆ ದುಷ್ಪರಿಣಾಮ ಬಿರುತ್ತೆ ಎಂದಿದ್ದಾರೆ. ಸ್ಟಿಂಗ್ ಆಪರೇಷನ್ ವಿಧಾನ ಪರಿಷತ್‌ ಚುನಾವಣೆ ಮೇಲೆ ಎಫೆಕ್ಟ್ ಬಿದ್ದಿದೆ. ಪರಿಷತ್ ವ್ಯಾಪ್ತಿಯಲ್ಲಿ ನಾವು ಕಾಂಗ್ರೆಸ್‌ನ 26 ಶಾಸಕರಿದ್ದೇವೆ. ನಾವಿದ್ದು ಸೋತಿದ್ದೇವೆ ಅಂದ್ರೆ 26 ಶಾಸಕರು ರಾಜೀನಾಮೆ ಕೊಡ್ಬೇಕು ಎಂದಿದ್ದಾರೆ. ಇದು ಕಾಂಗ್ರಸ್​​ನಲ್ಲಿ ಸಂಚಲನ ಸೃಷ್ಟಿಸಿದ್ದು, ಬೇಕಿದ್ರೆ ರಾಜಣ್ಣ ರಾಜೀನಾಮೆ ನೀಡಲಿ ಎಂದು ಸಚಿವ ಹೆಚ್​​​​ಸಿ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More