ಕೊಡಗು ಜಿಲ್ಲೆಯಾದ್ಯಂತ ಅಬ್ಬರದ ಮಳೆ; ಅನಾರೋಗ್ಯ ಪೀಡಿತನನ್ನು ಸ್ಟ್ರೆಚರ್​ನಲ್ಲಿ ಎತ್ತಿಕೊಂಡು ಪ್ರವಾಹ ದಾಟಿದ ಸ್ಥಳೀಯರು

ಮಡಿಕೇರಿ ತಾಲೂಕಿನ ಬೇಂಗೂರಿನಲ್ಲಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಈ ಹಿನ್ನಲೆ ದೋಣಿಕಡವು-ಕೂಡಕಂಡಿ ಪರಂಬು ಸಂಪರ್ಕ‌ ಬೆಸೆಯುವ ಸೇತುವೆ ಜಲಾವೃತವಾಗಿದ್ದು, ಅನಾರೋಗ್ಯ ಪೀಡಿತನನ್ನು ಸ್ಥಳೀಯರು ಸ್ಟ್ರೆಚರ್​ನಲ್ಲಿ ಎತ್ತಿಕೊಂಡು ಪ್ರವಾಹ ದಾಟಿಸಿದ್ದಾರೆ.

ಕೊಡಗು ಜಿಲ್ಲೆಯಾದ್ಯಂತ ಅಬ್ಬರದ ಮಳೆ; ಅನಾರೋಗ್ಯ ಪೀಡಿತನನ್ನು ಸ್ಟ್ರೆಚರ್​ನಲ್ಲಿ ಎತ್ತಿಕೊಂಡು ಪ್ರವಾಹ ದಾಟಿದ ಸ್ಥಳೀಯರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 08, 2023 | 8:19 AM

ಕೊಡಗು: ಕರಾವಳಿ ಜಿಲ್ಲೆಗಳು ಸೇರಿದಂತೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಅದರಂತೆ ಮಡಿಕೇರಿ(Madikeri) ತಾಲೂಕಿನ ಬೇಂಗೂರಿನಲ್ಲಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಈ ಹಿನ್ನಲೆ ದೋಣಿಕಡವು-ಕೂಡಕಂಡಿ ಪರಂಬು ಸಂಪರ್ಕ‌ ಬೆಸೆಯುವ ಸೇತುವೆ ಜಲಾವೃತವಾಗಿದೆ. ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ನಾಲ್ಕು ದಿನಗಳಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಿಲ್ಲ. ಇನ್ನು ಅನಾರೋಗ್ಯ ಪೀಡಿತನನ್ನು ಸ್ಟ್ರೆಚರ್​ನಲ್ಲಿ ಎತ್ತಿಕೊಂಡು ಸ್ಥಳೀಯರು ಪ್ರವಾಹ ದಾಟಿದ ಘಟನೆ ನಡೆದಿದೆ. ಕೆಪಿ ರಕ್ಷಿತ್ ಎಂಬಾತ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಹೋಗಬೇಕಾಗಿತ್ತು. ಆದರೆ, ಸೇತುವೆ ಮುಳುಗಡೆಯಾದ ಕಾರಣ ಹೋಗಲಾಗಿರಲಿಲ್ಲ. ಇದೀಗ ಸ್ಥಳೀಯರೇ ಸೇರಿ ಸ್ಟ್ರೆಚರ್​ನಲ್ಲಿ ಎತ್ತಿಕೊಂಡು ಹೋಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us