AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಧಿಗೂ ಮೊದಲೇ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣ: ರೈತರು ಫುಲ್​​ ಖುಷ್​

ಅವಧಿಗೂ ಮೊದಲೇ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣ: ರೈತರು ಫುಲ್​​ ಖುಷ್​

ಶಿವಕುಮಾರ್ ಪತ್ತಾರ್
| Edited By: |

Updated on: Apr 26, 2026 | 9:24 AM

Share

ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಅಳವಡಿಕೆ ಕೆಲಸ ಅವಧಿಗೂ ಮುನ್ನ ಪೂರ್ಣಗೊಂಡಿದೆ. 33 ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದೆ. ಡ್ಯಾಂನ 12 ಗೇಟ್​ಗಳ ಇಳಿಸುವ, ಏರಿಸುವ ಪರೀಕ್ಷೆ ಪೂರ್ಣವಾಗಿದ್ದು, ಉಳಿದ ಗೇಟ್​ಗಳ ಪರೀಕ್ಷೆ ಮಾಡಬೇಕಿದೆ. ಅವಧಿಗೂ ಮೊದಲೇ ಕಾಮಗಾರಿ ಮುಗಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.

ಕೊಪ್ಪಳ, ಏಪ್ರಿಲ್​​ 26: ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಗದಿತ ಸಮಯಕ್ಕೂ ಮೊದಲೇ ಪೂರ್ಣಗೊಂಡಿದೆ. ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ ನಿರ್ಮಾಣವಾಗಿ 8 ದಶಕಗಳ ನಂತರ 33 ಗೇಟ್ ಬದಲಾವಣೆ ಮಾಡಲಾಗಿದೆ. 2024ರ ಆಗಸ್ಟ್ 10ರಂದು ಜಲಾಶಯದ 19ನೇ ಗೇಟ್​ ಕಿತ್ತು ಹೋಗಿತ್ತು. ತಜ್ಞರ ಸಲಹೆಯ ಮೇರೆಗೆ ಜಲಾಶಯದ ಎಲ್ಲಾ ಗೇಟ್​ಗಳ‌ ಬದಲಾವಣೆ ಮಾಡಲಾಗಿದೆ. ಟಿ.ಬಿ.ಡ್ಯಾಂನ 12 ಗೇಟ್​ಗಳ ಇಳಿಸುವ, ಏರಿಸುವ ಪರೀಕ್ಷೆ ಪೂರ್ಣವಾಗಿದ್ದು, ಉಳಿದ ಗೇಟ್​ಗಳ ಪರೀಕ್ಷೆ ಮಾಡಬೇಕಿದೆ. ಮೇ‌ ಅಂತ್ಯಕ್ಕೆ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ಇದೀಗ ಅವಧಿಗೂ ಮೊದಲೇ ಕಾಮಗಾರಿ ಮುಗಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Shivakumar Pattar
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More