AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಹಿಂದಿ ಕವಿತೆ ಕೇಳಿ ಭಾವುಕರಾದ ಪ್ರಧಾನಿ ಮೋದಿ

ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಹಿಂದಿ ಕವಿತೆ ಕೇಳಿ ಭಾವುಕರಾದ ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on: Aug 31, 2026 | 6:07 PM

Share

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಜ್ಬೆಕಿಸ್ತಾನ್ ಭೇಟಿ ವೇಳೆ ವಿಶಿಷ್ಟ ಸಾಂಸ್ಕೃತಿಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್‌ನ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಮುದಾಯದೊಂದಿಗಿನ ಸಂವಾದದ ಸಮಯದಲ್ಲಿ ಉಜ್ಬೆಕ್ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಬರೆದ ಕವನಗಳನ್ನು ವಾಚಿಸಿ ಹಾಡಿದರು. ಆ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರ 3 ಕವನಗಳನ್ನು ಹಿಂದಿ ಮತ್ತು ಉಜ್ಬೆಕ್ ಭಾಷೆಗಳಲ್ಲಿ ಪ್ರಸ್ತುತಪಡಿಸಿದರು. ಇದು ಸಭಿಕರಿಂದ ಅಪಾರ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡಿದ್ದಲ್ಲದೆ, ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂವಾದದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು.

ತಾಷ್ಕೆಂಟ್, ಆಗಸ್ಟ್ 31: ಉಜ್ಬೆಕಿಸ್ತಾನ್ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಜ್ಬೆಕ್ ವಿದ್ಯಾರ್ಥಿಗಳು ಸರ್​​ಪ್ರೈಸ್ ನೀಡಿದರು. ಬಹುತೇಕ ಭಾರತೀಯರಿಗೆ ಕೂಡ ಪ್ರಧಾನಿ ನರೇಂದ್ರ ಮೋದಿ ಕವಿತೆ ರಚಿಸುತ್ತಾರೆಂಬ ವಿಷಯ ಗೊತ್ತಿಲ್ಲ. ಉಜ್ಬೆಕಿಸ್ತಾನದ ಕಾಲೇಜು ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ರಾಜಕೀಯಕ್ಕೆ ಬರುವುದಕ್ಕಿಂತ ಹಲವು ವರ್ಷಗಳ ಮುಂಚೆ ಬರೆದಿದ್ದ ಕವನಗಳನ್ನು ಹಿಂದಿ ಹಾಗೂ ಉಜ್ಬೆಕ್ ಭಾಷೆಗಳಲ್ಲಿ ಹಾಡಿ ಪ್ರಧಾನಿ ಮೋದಿಯವರನ್ನು ಅಚ್ಚರಿಗೊಳಿಸಿದರು. ತಾವು ಬರೆದ ಹಿಂದಿ ಕವಿತೆಗಳನ್ನು ಉಜ್ಬೆಕಿಸ್ತಾನದ ಮಕ್ಕಳ ಬಾಯಲ್ಲಿ ಕೇಳಿ ಮೋದಿ ಕೂಡ ಭಾವುಕರಾದರು.

ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್‌ನ ವಿದ್ಯಾರ್ಥಿಗಳು ಮೋದಿಯವರ ಕವಿತೆ ವಾಚನ ಮಾಡಿದರು. ಮೋದಿ ರಚಿಸಿದ ‘ಅಭಿ ತೋ ಸೂರಜ್ ಉಗಾ ಹೈ’, ‘ನಯೇ ಭಾರತ್ ಕೆ ನಯೇ ಸಂಕಲ್ಪ’, ‘ಮಾನವತಾ ಕೋ ಕಹೀ ನಾ ಲಗ್ ಜಾಯೇ ದಾಗ್’ ಕವನವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us