ಮರಿ ಮೊಮ್ಮಗಳ ಜೊತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಗಲಿಕೆಯ ಬೆನ್ನಲ್ಲೇ, ಈ ಹಿರಿಯ ದಂಪತಿ ತಮ್ಮ ಮರಿ ಮೊಮ್ಮಗಳೊಂದಿಗೆ ಕಾಲ ಕಳೆದಿದ್ದ ಹಳೆಯ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಅನಾರೋಗ್ಯದ ನಡುವೇ ಚೆನ್ನಮ್ಮನವರು ಮರಿ ಮೊಮ್ಮಗಳ ಜೊತೆ ಕಾಲ ಕಳೆಯುತ್ತಿರುವ ಮುದ್ದಾದ ದೃಶ್ಯಗಳು ಇದರಲ್ಲಿವೆ.
ಬೆಂಗಳೂರು, ಜುಲೈ 23: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದ ಬಳಿಕ ಈ ಇಳಿವಯಸ್ಸಿನಲ್ಲಿಯೂ ದಂಪತಿಯ ನಡುವಿದ್ದ ಪ್ರೀತಿ ಮತ್ತು ಅನ್ಯೋನ್ಯತೆಯ ಕುರಿತಾದ ವಿಚಾರಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿವೆ. ಪತ್ನಿಯ ಪಾರ್ಥಿವ ಶರೀರದ ಎದುರು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ದೊಡ್ಡಗೌಡರ ವಿಡಿಯೋಗಳೂ ಸಾಕಷ್ಟು ಜನರ ಕಣ್ಣಂಚಲ್ಲಿ ನೀರು ತರಿಸಿತ್ತು. ಈ ನಡುವೆ ದೇವೇಗೌಡ ಮತ್ತು ಚೆನ್ನಮ್ಮ ದಂಪತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅನಾರೋಗ್ಯದ ನಡುವೇ ಚೆನ್ನಮ್ಮನವರು ಮರಿ ಮೊಮ್ಮಗಳ ಜೊತೆ ಕಾಲ ಕಳೆಯುತ್ತಿರುವ ಮುದ್ದಾದ ದೃಶ್ಯಗಳು ಇದರಲ್ಲಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 23, 2026 12:11 PM
Follow Us

