48 ಗಂಟೆಗಳಲ್ಲಿ ಒಪ್ಪಂದವಾಗದಿದ್ದರೆ ನರಕ ನೋಡುತ್ತೀರಿ; ಇರಾನ್‌ಗೆ ಟ್ರಂಪ್ ಹೊಸ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಕೇವಲ 48 ಗಂಟೆಗಳ ಸಮಯ ನೀಡುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಮಾರ್ಚ್ 26ರಂದು ಈ ಬಗ್ಗೆ ಮಾತನಾಡಿದ್ದ ಟ್ರಂಪ್ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಥವಾ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇನ್ನು 10 ದಿನಗಳು ಮಾತ್ರ ಉಳಿದಿವೆ ಎಂದು ಇರಾನ್​ಗೆ ಹೇಳಿದ್ದರು. ಆ ಗಡುವಿಗೆ ಕೇವಲ 2 ದಿನಗಳು ಉಳಿದಿರುವುದರಿಂದ ಅವರು ಸಮಯ ಮೀರುತ್ತಿದೆ ಎಂದು ನೆನಪಿಸಿದ್ದಾರೆ.

48 ಗಂಟೆಗಳಲ್ಲಿ ಒಪ್ಪಂದವಾಗದಿದ್ದರೆ ನರಕ ನೋಡುತ್ತೀರಿ; ಇರಾನ್‌ಗೆ ಟ್ರಂಪ್ ಹೊಸ ಎಚ್ಚರಿಕೆ
Donald Trump Warning

Updated on: Apr 04, 2026 | 9:55 PM

ವಾಷಿಂಗ್ಟನ್, ಏಪ್ರಿಲ್ 4: ನಾನು ನೀಡಿದ್ದ ಸಮಯ ಮೀರುತ್ತಿದೆ. ಇರಾನ್ ಮೇಲೆ ಭೀಕರ ದಾಳಿ ನಡೆಸಲು ಕೇವಲ 48 ಗಂಟೆಗಳು ಮಾತ್ರ ಉಳಿದಿವೆ. ಅಷ್ಟರೊಳಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ನರಕ ತೋರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಹೊಸ ಎಚ್ಚರಿಕೆ ನೀಡಿದ್ದಾರೆ.

“ನಾನು ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಅಥವಾ ಹಾರ್ಮುಜ್ ಜಲಸಂಧಿಯನ್ನು ತೆರೆಯಲು 10 ದಿನಗಳನ್ನು ನೀಡಿದ್ದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಗಡುವು ಮುಗಿಯುತ್ತಿದೆ. ಮುಂದಿನ 48 ಗಂಟೆಗಳ ಮೊದಲು ಒಪ್ಪಂದಕ್ಕೆ ಒಪ್ಪದಿದ್ದರೆ ನರಕವನ್ನೇ ತೋರಿಸುತ್ತೇವೆ” ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸುಳ್ಳು ಮತ್ತು ಆಧಾರರಹಿತ; ಕದನ ವಿರಾಮದ ಕುರಿತ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ ಇರಾನ್

ಮಾರ್ಚ್ 26ರಂದು ಡೊನಾಲ್ಡ್ ಟ್ರಂಪ್ ಅಮೆರಿಕದ ಜೊತೆ ಒಪ್ಪಂದ ಮಾಡಿಕೊಳ್ಳಲು ಇರಾನ್​ಗೆ 10 ದಿನ ಗಡುವು ನೀಡಿದ್ದರು. ಇರಾನ್ ಕೋರಿಕೆಯ ಮೇರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us