AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಸಾವು

ಗಾಜಾದ ಆಸ್ಪತ್ರೆಯ ಕೆಳಭಾಗದಲ್ಲಿರುವ ಸುರಂಗ ಸಂಕೀರ್ಣವನ್ನು ಟಾರ್ಗೆಟ್ ಮಾಡಿ ಮೇ 13 ರಂದು ಇಸ್ರೇಲ್ ಭಾರಿ ಬಾಂಬ್ ದಾಳಿ ನಡೆಸಿತು. ಈ ದಾಳಿಯಲ್ಲಿ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಅಡಗಿಕೊಂಡಿದ್ದಂತೆ ಶಂಕಿಸಲಾಗಿದೆ ಮತ್ತು ಇಸ್ರೇಲ್ ಸೇನೆ ಈಗ ಅವರ ಸಾವನ್ನು ದೃಢಪಡಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆಗೆ ಅನುಸಾರವಾಗಿ, ಇಸ್ರೇಲಿ ಸೇನೆಯು ಈಗ ಹಮಾಸ್ ನಾಯಕರಲ್ಲೊಬ್ಬರಾಗಿರುವ ಮೊಹಮ್ಮದ್ ಸಿನ್ವಾರ್ ಸಾವನ್ನು ಅಧಿಕೃತವಾಗಿ ದೃಢಪಡಿಸಿದೆ. ಆದರೆ ಅವರ ಸಾವಿಗೆ ಸಂಬಂಧಿಸಿದ ಯಾವುದೇ ದೃಶ್ಯಗಳು ಅಥವಾ ಚಿತ್ರಗಳು ಇನ್ನೂ ಬಹಿರಂಗವಾಗಿಲ್ಲ

ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಸಾವು
ವೈಮಾನಿಕ ದಾಳಿ-ಸಾಂದರ್ಭಿಕ ಚಿತ್ರImage Credit source: NPR
ನಯನಾ ರಾಜೀವ್
|

Updated on: Jun 01, 2025 | 8:20 AM

Share

ಜೆರುಸಲೇಂ, ಜೂನ್ 1: ಇಸ್ರೇಲ್​ ಮೇ 13ರಂದು ಗಾಜಾದ ಮೇಲೆ ನಡೆಸಿದ್ದ ವೈಮಾನಿಕ ದಾಳಿ(Air Strike) ಯಲ್ಲಿ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇದಕ್ಕು ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಇದೇ ಮಾಹಿತಿ ನೀಡಿದ್ದರು. ಇಸ್ರೇಲಿ ಅಧಿಕಾರಿಗಳ ಪ್ರಕಾರ, ಮೇ 13 ರಂದು ನಡೆದ ವೈಮಾನಿಕ ದಾಳಿಯು ಗಾಜಾದ ಆಸ್ಪತ್ರೆಯ ಕೆಳಗಿರುವ ಸುರಂಗ ಸಂಕೀರ್ಣದ ಮೇಲೆ ಭಾರೀ ಬಾಂಬ್ ದಾಳಿ ನಡೆಸಿತು.ಅಲ್ಲಿ ಸಿನ್ವಾರ್ ಅಡಗಿಕೊಂಡಿದ್ದನೆಂದು ಶಂಕಿಸಲಾಗಿದೆ.

ಇದಕ್ಕಾಗಿಯೇ ಇಲ್ಲಿ ದಾಳಿ ನಡೆಸಲಾಯಿತು. ಪ್ರಧಾನಿ ನೆತನ್ಯಾಹು ನಂತರ, ಈಗ ಇಸ್ರೇಲಿ ಸೇನೆಯು ಮೊಹಮ್ಮದ್ ಸಿನ್ವಾರ್ ಸಾವನ್ನು ದೃಢಪಡಿಸಿದೆ.ಮೊಹಮ್ಮದ್ ಸಿನ್ವಾರ್ ಸಾವಿಗೆ ಸಂಬಂಧಿಸಿದ ಯಾವುದೇ ಫೋಟೋ ಹೊರಬಂದಿಲ್ಲ.

ಇಸ್ರೇಲ್ ರಕ್ಷಣಾ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಮೇ ಆರಂಭದಲ್ಲಿ ಗಾಜಾ ಪಟ್ಟಿಯ ಆಸ್ಪತ್ರೆಯ ಕೆಳಗಿನ ಸುರಂಗದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಉನ್ನತ ಮಿಲಿಟರಿ ಕಮಾಂಡರ್ ಮೊಹಮ್ಮದ್ ಸಿನ್ವಾರ್ ಸಾವನ್ನಪ್ಪಿದ್ದಾನೆ. ಈ ಕಾರ್ಯಾಚರಣೆಯಲ್ಲಿ, ಇತರ ಇಬ್ಬರು ಹಮಾಸ್ ಕಮಾಂಡರ್‌ಗಳು ಸಹ ಕೊಲ್ಲಲ್ಪಟ್ಟರು. ಸಿನ್ವಾರ್ ಹಮಾಸ್‌ನ ಪ್ರಮುಖ ವ್ಯಕ್ತಿಯಾಗಿದ್ದು, ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮ ಮಾತುಕತೆಗಳನ್ನು ಹಾಳು ಮಾಡುತ್ತಿದ್ದ. ಇಸ್ರೇಲ್ ಸೇನೆಯ ಹೇಳಿಕೆಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ.

Benjamin Netanyahu: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು, ಯಾರಿವ್​ ಕೈಗೆ ತಾತ್ಕಾಲಿಕ ಅಧಿಕಾರ

ಇಸ್ರೇಲ್ ಸೇನೆಯ ಹೇಳಿಕೆಗೆ ಮೂರು ದಿನಗಳ ಮೊದಲು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಿನ್ವಾರ್ ಸಾವನ್ನು ದೃಢಪಡಿಸಿದ್ದರು. ಮೊಹಮ್ಮದ್ ಸಿನ್ವಾರ್ ಅವರ ಹಿರಿಯ ಸಹೋದರ ಯಾಹ್ಯಾ ಸಿನ್ವಾರ್ ಹಮಾಸ್ ಮುಖ್ಯಸ್ಥನಾಗಿದ್ದ ಮತ್ತು 2023 ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ, ಕಳೆದ ವರ್ಷ ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ್ದ. ಜುಲೈ 2024 ರಲ್ಲಿ ಮೊಹಮ್ಮದ್ ಸಿನ್ವಾರ್​ಗೆ ಹಮಾಸ್‌ನ ಮಿಲಿಟರಿ ವಿಭಾಗದ ಕಮಾಂಡರ್ ಹುದ್ದೆಯನ್ನು ನೀಡಲಾಯಿತು. ಮೊಹಮ್ಮದ್ ಸಿನ್ವಾರ್ ಹಮಾಸ್‌ನ ಖಾನ್ ಯೂನಿಸ್ ಬ್ರಿಗೇಡ್‌ನ ಕಮಾಂಡರ್ ಕೂಡ ಆಗಿದ್ದ. ಮೊಹಮ್ಮದ್ ಸಿನ್ವಾರ್ ಸಹೋದರ ಯಾಹ್ಯಾ ಸೋಮ್ವಾರ್ ಹಮಾಸ್‌ನ ಮುಖ್ಯಸ್ಥರಾಗಿದ್ದ, ಆತ ಅಕ್ಟೋಬರ್ 16, 2024 ರಂದು ಮೃತಪಟ್ಟಿದ್ದ.

ಗಾಜಾ ಮೇಲಿನ ದಾಳಿಯ ಬಗ್ಗೆ ನೆತನ್ಯಾಹು ಹೇಳಿದ್ದೇನು? ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಜನವರಿ 19 ರಂದು ಕದನ ವಿರಾಮ ಘೋಷಿಸಲಾಯಿತು, ಆದರೆ ನಿಖರವಾಗಿ ಎರಡು ತಿಂಗಳ ನಂತರ, ಮಾರ್ಚ್ 18 ರಂದು, ಇಸ್ರೇಲ್ ಮತ್ತೆ ಗಾಜಾದ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಹಮಾಸ್ ಸಂಪೂರ್ಣವಾಗಿ ನಾಶವಾಗುವವರೆಗೂ ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇತ್ತೀಚೆಗೆ ಘೋಷಿಸಿದ್ದರು. ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್