ವಾಷಿಂಗ್ಟನ್ ಡಿ.ಸಿ: ಅಮೆರಿಕದಲ್ಲಿ ಕೊವಿಡ್ ಸೋಂಕು ಒಂದು ಪ್ರಮಾಣಕ್ಕೆ ಹಿಡಿತಕ್ಕೆ ಬರುತ್ತಿದೆಯಾದರೂ ಕೊವಿಡ್ ಲಸಿಕೆ ವಿತರಣೆ ಪ್ರಕ್ರಿಯೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ದಿನವೊಂದಕ್ಕೆ ಸರಾಸರಿ 16 ಸಾವಿರ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, 400 ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಕೊವಿಡ್ ಈ ಪ್ರಮಾಣಕ್ಕೆ ಹತೋಟಿಗೆ ಬರಲು ಕೊವಿಡ್ ಲಸಿಕೆಯೇ ಕಾರಣವಾಗಿದ್ದು, ಜನರು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಅಮೆರಿಕ ಸರ್ಕಾರ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿದೆ.
ಜುಲೈ 4ರ ಒಳಗೆ ಅಮೆರಿಕದ ಬಹುತೇಕ ನಾಗರಿಕರಿಗೆ ಕೊವಿಡ್ ಲಸಿಕೆ ವಿತರಣೆ ಆಗಬೇಕು ಎಂಬುದು ಅಧ್ಯಕ್ಷ ಜೋ ಬಿಡೆನ್ ಅವರ ಗುರಿಯಾಗಿದೆ. ಈವರೆಗೂ ಲಸಿಕೆ ಪಡೆಯದ ನಾಗರಿಕರಿಗೂ ಆದಷ್ಟು ಬೇಗನೆ ಲಸಿಕೆ ಹಾಕಬೇಕು ಎಂಬುದು ಅಮೆರಿಕ ಸರ್ಕಾರದ ಗುರಿಯಾಗಿದ್ದು, ಜುಲೈ 4ರ ಒಳಗೆ ಶೇ 70ರಷ್ಟು ವಯಸ್ಕ ನಾಗರಿಕರಿಗೆ ಲಸಿಕೆ ವಿತರಿಸಲು ನಿಶ್ಚಯಿಸಲಾಗಿದೆ. ಬೇಗನೆ ಎಲ್ಲರಿಗೂ ಲಸಿಕೆ ವಿತರಣೆ ಆದಲ್ಲಿ ಮರಳಿ ಸ್ವಾತಂತ್ರ್ಯ ಮತ್ತು ಖುಷಿ ಸಮಾಜದಲ್ಲಿ ಮರಳುತ್ತದೆ. ಆಗ ಎಲ್ಲರೂ ಒಟ್ಟಿಗೆ ಸಂಭ್ರಮಿಸಬಹುದು ಎಂದು ಅಮೆರಿಕ ಆಡಳಿತ ವಿವರಿಸಿದೆ. ಜುಲೈ 4ರ ಒಳಗೆ ಶೇಕಡಾ 70 ರಷ್ಟು ವಯಸ್ಕ ನಾಗರಿಕರಿಗೆ ಕೊವಿಡ್ ಲಸಿಕೆ ವಿತರಣೆ ಆದಲ್ಲಿ 21 ವರ್ಷ ಮೇಲ್ಪಟ್ಟವರಿಗೆ ಬೀರ್ ಇರುವ ಸಂತೋಷಕೂಟದ ಮೂಲಕ ಸಂಭ್ರಮಾಚರಿಸಲು ಅವಕಾಶ ನೀಡಲಾಗುವುದು ಎಂದು ಅಧ್ಯಕ್ಷ ಜೋ ಬಿಡೆನ್ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೊವಿಡ್ ಲಸಿಕೆ ವಿತರಣೆಯನ್ನು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅಮೆರಿಕ ಸರ್ಕಾರ ಕೈಗೊಳ್ಳುತ್ತಿದೆ. ಜನರನ್ನು ಕೊವಿಡ್ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಇಂತಹ ಹಲವು ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಲು ಅಮೆರಿಕ ಸರ್ಕಾರ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: ಕೊವಿಡ್ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತ್ಗೂ 50 ಸಾವಿರ ಅನುದಾನ ಬಿಡುಗಡೆ: ಸಿಎಂ ಯಡಿಯೂರಪ್ಪ
ಲಸಿಕೆ ನೀಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ; ಶೀಘ್ರವೇ ಮಕ್ಕಳಿಗೂ ಲಸಿಕೆ: ವಿ ಕೆ ಪೌಲ್
(American adults are get beer if they will vaccinated by July 4)