
ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ (Taliban) ಶುರುವಾದ ಬೆನ್ನಲ್ಲೇ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಅಲ್ ಖೈದಾ ಉಗ್ರಸಂಘಟನೆ (Al-Qaeda) ಯ ಪ್ರಮುಖ ಉಗ್ರ, ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್ (Osama bin Laden) ಸಹಾಯಕನಾಗಿದ್ದ ಅಮಿನ್ ಉಲ್ ಹಕ್ (Amin-ul-Haq) ಇದೀಗ ಅಫ್ಘಾನ್ಗೆ ವಾಪಸ್ ಬಂದಿದ್ದಾನೆ ಎನ್ನಲಾಗಿದೆ. ಅಮಿನ್ ಉಲ್ ಹಕ್ ತನ್ನ ಹುಟ್ಟೂರಾದ ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯಕ್ಕೆ, ಕಾರಿನಲ್ಲಿ ಬಂದಿರುವ ವಿಡಿಯೋ ವೈರಲ್ ಆಗಿದೆ.
ಅಮಿನ್ ಉಲ್ ಹಕ್ ನಂಗರ್ಹಾರ್ಗೆ ಬಂದಿರುವ ವಿಡಿಯೋವನ್ನು ಅಫ್ಘಾನಿಸ್ತಾನ ಪತ್ರಕರ್ತ ಬಿಲಾಲ್ ಸರ್ವಾರಿ ಶೇರ್ ಮಾಡಿಕೊಂಡಿದ್ದಾರೆ. ಅಲ್ ಖೈದಾದ ಅತ್ಯುಗ್ರ, 80ರ ದಶಕದಲ್ಲಿ ಒಸಾಮಾ ಬಿನ್ ಲಾಡೆನ್ ಆಪ್ತ ಸಹಾಯಕ ಹಾಗೂ ಸೆಕ್ಯೂರಿಟಿ ಇನ್ಚಾರ್ಜ್ ಆಗಿದ್ದ ಡಾ. ಅಮಿನ್ ಉಲ್ ಹಕ್ ತನ್ನ ಹುಟ್ಟೂರಾದ ನಂಗರ್ಹಾರ್ ಪ್ರಾಂತ್ಯಕ್ಕೆ ಆಗಮಿಸಿದ್ದಾನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಪ್ರಾಂತ್ಯ ಅದಾಗಲೇ ತಾಲಿಬಾನಿಗಳ ಕೈವಶವಾಗಿದೆ. ಒಸಾಮಾ ಬಿನ್ ಲಾಡೆನ್ನನ್ನು ಅಮೆರಿಕ ಸೇನೆ ಪಾಕಿಸ್ತಾನದ 2011 ರಲ್ಲಿ ಅಬೋಟಾಬಾದ್ನಲ್ಲಿ ಹತ್ಯೆ ಮಾಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಿಟ್ಟುಹೋದ 200ಕ್ಕೂ ಹೆಚ್ಚು ವಿಮಾನ, ಹೆಲಿಕಾಪ್ಟರ್ಗಳು ತಾಲಿಬಾನ್ ವಶಕ್ಕೆ
ಶಾಲೆ ಆರಂಭ ಮಾಡುವುದಕ್ಕೆ ಆತುರ ಬೇಡ; ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಿ: ಫನಾ ಅಧ್ಯಕ್ಷ ಹೇಳಿಕೆ