ಅಮೆರಿಕದ ಹಿರಿಯ ವ್ಯಕ್ತಿಯೊಬ್ಬರು ಲಾಟರಿಯಲ್ಲಿ ಆಕಸ್ಮಿಕವಾಗಿ ಎರಡೆರಡು ಬಾರಿ ಜಾಕ್ಪಾಟ್ ಹೊಡೆದ ಕತೆಯಿದು!
ತಮ್ಮ ಪ್ರಮಾದ ಜಾಕ್ ಪಾಟ್ ಹೊಡಿಸಲಿದೆ ಅನ್ನೋದರ ಬಗ್ಗೆ ಅವರು ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಒಂದೇ ನಂಬರ್ 51359 ನ ಮೂರು ಟಿಕೆಟ್ ಗಳ ಕಾಂಬಿನೇಶನ್ ತಮಗೆ 150,000 ಡಾಲರ್ (ಸುಮಾರು ರೂ.1,22,82,030) ಜಾಕ್ ಪಾಟ್ ಗೆದ್ದುಕೊಟ್ಟಾಗ ದಂಪತಿಗೆ ತಮ್ಮ ಅದೃಷ್ಟ ನಂಬಲಾಗಲಿಲ್ಲ.
ಅದೃಷ್ಟವೆಂದರೆ ಇದು ಮಾರಾಯ್ರೇ! ಏನು ಗೊತ್ತಾ? ಅಮೆರಿಕದ ಮೇರಿಲ್ಯಾಂಡ್ ನ ಟಾಸನ್ ಪ್ರದೇಶದ ನಿವಾಸಿಯೊಬ್ಬರು ತಾನು ಜರೂರಾಗಿ ಮಾಡಿಸಿಕೊಳ್ಳಬೇಕಿದ್ದ ಶಸ್ತ್ರಚಿಕಿತ್ಸೆಗೆ (surgery) ತಯಾರಾಗುತ್ತಿದ್ದಾಗ ಲಾಟರಿ ಹೊಡೆದಿದೆ. ಅವರ ಆದೃಷ್ಟದ ವಿಶೇಷತೆ ಅಂದರೆ ಪ್ರಮಾದ್ ವಶಾತ್ (mistakenly) ಒಂದೇ ತೆರನಾದ ಮೂರು ಟಿಕೆಟ್ ಗಳನ್ನು ಅವರು ಖರೀದಿಸಿದ್ದರು ಮತ್ತು ಆ ಮೂರಕ್ಕೂ ಲಾಟರಿ ಹೊಡೆದಿದೆ! ಯುಕೆ ಪತ್ರಿಕೆ ಮಿರರ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಹೆಸರು ಹೇಳಿಕೊಳ್ಳಲಿಚ್ಛಸದ ಟಾಸನ್ ನಿವಾಸಿ (resident of Towson) ಹಲವು ಟಿಕೆಟ್ ಗಳನ್ನು ಖರೀದಿಸಿ ಎಲ್ಲ ಟಿಕೆಟ್ ಗಳಿಗೂ ಬಹುಮಾನ ಗೆದ್ದಿದ್ದಾರೆ. ವರದಿಯ ಪ್ರಕಾರ ಟಾಸನ್ ನಿವಾಸಿ ಆಕಸ್ಮಿಕವಾಗಿ ಒಂದೇ ಡ್ರಾಗೆ ಸಂಬಂಧಿಸಿದ ಮೂರು ಟಿಕೆಟ್ ಗಳನ್ನು ಕಳೆದವಾರ ಖರೀದಿಸಿದ್ದರು.
ಏನಾಗಿದೆಯೆಂದರೆ, ಮಧ್ಯಾಹ್ನದ ಹೊತ್ತಿಗೆ ಬೆಳಗ್ಗೆ ಒಂದು ಟಿಕೆಟ್ ಖರೀದಿಸಿದ್ದನ್ನು ಮರೆತಿದ್ದ ಅವರು ಸಾಯಂಕಾಲ ಪಿಕ್ 5 ಲಾಟರಿ ಸೆಂಟರ್ ಗೆ ಹೋಗಿ ಮತ್ತೊಂದು ಟಿಕೆಟ್ ಖರೀದಿಸಿದ್ದಾರೆ.
ಏತನ್ಮಧ್ಯೆ, ತನ್ನ ಪತಿ ಒಂದೇ ಡ್ರಾದ ಟಿಕೆಟ್ ಗಳನ್ನು ಎರಡೆರಡು ಬಾರಿ ಖರೀದಿಸಿದ್ದ ಬಗ್ಗೆ ಗೊತ್ತಿರದ ಅವರ ಪತ್ನಿ ಲಾಟರಿ ಸೆಂಟರ್ ಗೆ ಹೋಗಿ ತಾನೂ ಒಂದು ಟಿಕೆಟ್ ಖರೀದಿಸಿದ್ದಾರೆ. ನಂತರ ಗಂಡ-ಹೆಂಡತಿಗೆ ಒಂದೇ ಡ್ರಾದ ಮೂರು ಟಿಕೆಟ್ ಗಳನ್ನು ಖರೀದಿಸಿದ್ದು ಗೊತ್ತಾಗಿ ದುಡ್ಡು ವೇಸ್ಟ್ ಆಯ್ತು ಅಂತ ಪರಿತಪಿಸಿ ಬೈದಾಡಿಕೊಂಡಿದ್ದಾರೆ.
ತಮ್ಮ ಪ್ರಮಾದ ಜಾಕ್ ಪಾಟ್ ಹೊಡಿಸಲಿದೆ ಅನ್ನೋದರ ಬಗ್ಗೆ ಅವರು ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಒಂದೇ ನಂಬರ್ 51359 ನ ಮೂರು ಟಿಕೆಟ್ ಗಳ ಕಾಂಬಿನೇಶನ್ ತಮಗೆ 150,000 ಡಾಲರ್ (ಸುಮಾರು ರೂ.1,22,82,030) ಜಾಕ್ ಪಾಟ್ ಗೆದ್ದುಕೊಟ್ಟಾಗ ದಂಪತಿಗೆ ತಮ್ಮ ಅದೃಷ್ಟ ನಂಬಲಾಗಲಿಲ್ಲ.
ಯುಪಿಐ ಗೆ ನೀಡಿರುವ ನಂದರ್ಶನದಲ್ಲಿ ಈ ಅನಾಮಧೇಯ ವ್ಯಕ್ತಿ, ‘ಆಕಸ್ಮಿಕವಾಗಿ ನಾನು ಒಂದು ಬಾರಿ ಮೂರು ಟಿಕೆಟ್‌ಗಳನ್ನು ಖರೀದಿಸಿದಾಗ, ಆ ಮೂರು ಸಂಖ್ಯೆಗಳೂ ಜಾಕ್ ಪಾಟ್ ಹೊಡೆಯಬಹುದೆಂಬ ನಂಬಿಕೆಯೇ ನನ್ನಲ್ಲಿರಲಿಲ್ಲ,’ ಅಂತ ಹೇಳಿದ್ದಾರೆ.
ಆಶ್ಚರ್ಯದ ಸಂಗತಿಯೆಂದರೆ, ಮೇರಿಲ್ಯಾಂಡ್ನ ಈ ವೃದ್ಧ ಲಾಟರಿಯಲ್ಲಿ ದೊಡ್ಡ ಮೊತ್ತವೊಂದನ್ನು ಗೆದ್ದಿರುವುದು ಇದೇ ಮೊದಲ ಸಲವೇನಲ್ಲ. ವರದಿಯೊಂದರ ಪ್ರಕಾರ, ಅವರು ಒಂದೆರಡು ವರ್ಷಗಳ ಹಿಂದೆ ಫೋರ್-ಬಾಲ್ ಆಟದಲ್ಲಿ ದೊಡ್ಡ ಬಹುಮಾನವನ್ನು ಗೆದ್ದಿದ್ದರು. ಅದಕ್ಕೂ ಗಮ್ಮತ್ತಿನ ಮತ್ತು ಸೋಜಿಗದ ಸಂಗತಿಯೆಂದರೆ ಆಗಲೂ ಅವರಿಗೆ ಬಹುಮಾನ ಬಹುಮಾನ ದಕ್ಕಿದ್ದು ಒಂದು ಆಕಸ್ಮಿಕವೇ.
ಡ್ರಾ ನಡೆಯುತ್ತಿದ್ದ ಸಂದರ್ಭದಲ್ಲಿ ಟಾಸನ್ ನಿವಾಸಿ ತನ್ನ ಮಗಳು ಹುಟ್ಟಿದ ವರ್ಷ 1979 ರ ಮೇಲೆ ಬಾಜಿ ಕಟ್ಟಲು ಮುಂದಾಗಿದ್ದರು. ಆದರೆ ಬುಕ್ಕಿಂಗ್ ಕ್ಲರ್ಕ್ ಅವರು ಹೇಳಿದ್ದ ನಂಬರನ್ನು ತಪ್ಪಾಗಿ ಗ್ರಹಿಸಿ 1997 ನಂಬರಿನ ಟಿಕೆಟ್ ಕೊಟ್ಟಿದ್ದ. ಅವತ್ತು ಯಾವ ನಂಬರ್ ಟಿಕೆಟ್ ಜಾಕ್ ಪಾಟ್ ಹೊಡೀತು ಅಂತ ಅವರು ನೋಡಿದಾಗ ಅದು 1997 ಆಗಿತ್ತು.
‘ನನ್ನ ಮಗಳ ಹುಟ್ಟುವರ್ಷ ಆಗಿರುವ 1979ರ ಮೇಲೆ ನಾನು ಬಾಜಿ ಕಟ್ಟಲು ಹೋಗಿದ್ದೆ. ಆದರೆ ಸ್ಟೋರ್ ನವರು ನಾನು ಹೇಳಿದ್ದನ್ನು ತಪ್ಪಾಗಿ ಕೇಳಿಸಿಕೊಂಡು 1997 ನಂಬರಿನ ಟಿಕೆಟ್ ಕೊಟ್ಟರು. ನಾನು ಮನೆಗ ವಾಪಸ್ಸು ಬಂದಾಗ ಅವತ್ತು ಜಾಕ್ ಪಾಟ್ ಹೊಡೆದ ನಂಬರ್ ಯಾವುದು ಗೊತ್ತಾ? 1997!,’ ಎಂದು ಅವರು ಪತ್ರಿಕೆಗೆ ಹೇಳಿದ್ದಾರೆ.
ಈಗ ಗೆದ್ದಿರುವ ಜಾಕ್ ಪಾಟ್ ಹಣ ಏನು ಮಾಡುತ್ತೀರಿ ಅಂತ ಕೇಳಿದಾದ ಅದರ ಸ್ವಲ್ಪ ಭಾಗವನ್ನು ಮಗಳಿಗೆ ಕೊಡಲು ನಿಶ್ಚಯಿಸಿದ್ದೇನೆ ಅಂತ ಅವರು ಹೇಳಿದರು.