ಇಬ್ಬರು ಯುವತಿಯರ ರೇಪ್ ಮಾಡಿ ಇಬ್ಬರನ್ನೂ ಭಯಾನಕವಾಗಿ ಕೊಂದ್ದಿದ ಅರಿಜೋನ ವ್ಯಕ್ತಿ 30-ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ!
ಹಂತಕ ಬ್ರಾಸ್ಸೋಳನ್ನು ಮೊದಲು ಸೈಕಲ್ ಮೇಲಿಂದ ಬೀಳಿಸಿದ ಬಳಿಕ ಅವಳನ್ನು ತಿವಿದು ಕೊಂದು ದೇಹವನ್ನು ರಸ್ತೆಯಿಂದಾಚೆ ಎಳೆದೊಯ್ದಿದ್ದಾನೆ ಎಂದು ಸಿಬಿಎಸ್ ಅಂಗಸಂಸ್ಥೆಯಾಗಿರುವ ಕೋಲ್ಡ್-ಟಿವಿ ವರದಿ ಮಾಡಿದೆ. ದ್ವಿಚಕ್ರ ವಾಹನಗಳಿಗೆ ಮೀಸಲಾದ ರಸ್ತೆಯೊಂದರಲ್ಲಿ ಶಿರಚ್ಛೇದಗೊಂಡ ಬೆತ್ತಲೆ ದೇಹ ಪತ್ತೆಯಾಗಿತ್ತು.
ಸುಮಾರು 30 ವರ್ಷಗಳ ಹಿಂದೆ ಇಬ್ಬರ ಯುವತಿಯರ ಮೇಲೆ ಅಮೆರಿಕಾದ ಅರಿಜೋನಾ ಫೀನಿಕ್ಸ್ ಕೆನಲ್ ಸಿಸ್ಟಂ (Phoenix canal system) ಬಳಿ ಲೈಂಗಿಕ ದೌರ್ಜನ್ಯ (sexual assault ) ನಡೆಸಿ ಅವರರನ್ನು ತಿವಿದು ಕೊಂದ ಆರೋಪದಲ್ಲಿ ಈಗ ಬಂಧಿಯಾಗಿರುವ ವ್ಯಕ್ತಿಯ ವಿಚಾರಣೆ ಸೋಮವಾರದಿಂದ ನ್ಯಾಯಾಲಯವೊಂದರಲ್ಲಿ ಆರಂಭವಾಗಲಿದೆ. 49-ವರ್ಷ-ವಯಸ್ಸಿನ ಪ್ಯಾಟ್ರಿಕ್ ಮಿಲ್ಲರ್ (Patrick Miller) ವಿರುದ್ಧ ಎರಡು ಕೊಲೆ, ಅಪಅಹರಣ ಮತ್ತು ಲೈಂಗಿಕ ಅತ್ಯಾಚಾರದ ಆರೋಪಗಳನ್ನು ಮಾಡಲಾಗಿದೆ.
ಮಿಲ್ಲರ್ ದೋಷಿಯೆಂದು ಸಾಬೀತಾದರೆ ಅವನಿಗೆ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಬೇಕೆಂದು ಸರ್ಕಾರೀ ವಕೀಲರು ವಾದಿಸಿದ್ದಾರೆ. ಮಾರಿಕೋಪಾ ಕೌಂಟಿಯ ಸುಪೀರಿಯರ್ ಕೋರ್ಟ್ ನ್ಯಾಯಾಧೀಶರು ಮಿಲ್ಲರ್ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ನವೆಂಬರ್ 1992 ರಲ್ಲಿ 22 ವರ್ಷದ ಏಂಜೆಲಾ ಬ್ರಾಸ್ಸೊ ಮತ್ತು ಸೆಪ್ಟೆಂಬರ್ 1993 ರಲ್ಲಿ 17 ವರ್ಷದ ಮೆಲಾನಿ ಬರ್ನಾಸ್ ಅವರನ್ನು ಕೊಂದ ಆರೋಪ ಮಿಲ್ಲರ್ ಮೇಲಿದೆ.
ಬ್ರಾಸ್ಸೋ ಮತ್ತು ಬರ್ನಾಸ್ ಇಬ್ಬರೂ ಉತ್ತರ ಫೀನಿಕ್ಸ್‌ನ ಅರಿಜೋನಾ ಕಾಲುವೆಗುಂಟ ತಮ್ಮ ಬೈಸಿಕಲ್‌ಗಳ ಮೇಲೆ ಸವಾರಿ ಮಾಡುತ್ತಿದ್ದಾಗ ಕಣ್ಮರೆಯಾಗಿದ್ದರು.
ಹಂತಕ ಬ್ರಾಸ್ಸೋಳನ್ನು ಮೊದಲು ಸೈಕಲ್ ಮೇಲಿಂದ ಬೀಳಿಸಿದ ಬಳಿಕ ಅವಳನ್ನು ತಿವಿದು ಕೊಂದು ದೇಹವನ್ನು ರಸ್ತೆಯಿಂದಾಚೆ ಎಳೆದೊಯ್ದಿದ್ದಾನೆ ಎಂದು ಸಿಬಿಎಸ್ ಅಂಗಸಂಸ್ಥೆಯಾಗಿರುವ ಕೋಲ್ಡ್-ಟಿವಿ ವರದಿ ಮಾಡಿದೆ. ದ್ವಿಚಕ್ರ ವಾಹನಗಳಿಗೆ ಮೀಸಲಾದ ರಸ್ತೆಯೊಂದರಲ್ಲಿ ಶಿರಚ್ಛೇದಗೊಂಡ ಬೆತ್ತಲೆ ದೇಹ ಪತ್ತೆಯಾಗಿತ್ತು.
ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅರಿಜೋನಾದ ರಿಪಬ್ಲಿಕ್ ಪತ್ರಿಕೆಯ ಕ್ರೈಮ್ ವರದಿಗಾರ ವಿಲಿಯಂ ಹರ್ಮನ್, ‘ಇದೊಂದು ಅತ್ಯಂತ ಭಯಾನಕವಾದ ಕಥಾನಕ. ಕೊಲೆಗಾರ ಎಷ್ಟೇ ನಿರ್ದಯಿ ಕಟುಕನಾಗಿದ್ದರೂ ಯುವತಿಯನ್ನು ಇಷ್ಟು ಭೀಕರವಾಗಿ ಕೊಲ್ಲುತ್ತಿರಲಿಲ್ಲ,’ ಎಂದು ಹೇಳಿದ್ದಾರೆ.
ಹತ್ತು ತಿಂಗಳು ನಂತರ ಕೊಲೆಯಾದ ಇನ್ನೊಬ್ಬ ಯುವತಿ ಬರ್ನಾಸ್ ಳ ದೇಹ ಕಾಲುವೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ರುಂಡ ದೇಹದಿಂದ ಬೇರೆಯಾಗಿರಲಿಲ್ಲ. ಅವಳ ಸೈಕಲ್ ಕಾಣೆಯಾಗಿತ್ತು ಎಂದ ಕೋಲ್ಡ್-ಟಿವಿ ವರದಿ ಮಾಡಿದೆ.
ನಂತರದ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ಎರಡೂ ಕೊಲೆಗಳ ಡಿಎನ್ ಎ ಸಾಕ್ಷ್ಯ ಸಂಗ್ರಹಿಸಿದಾಗ ಎರಡರ ನಡುವೆ ಲಿಂಕ್ ಇರೋದು ಪತ್ತೆಯಾಗಿದೆ.
ಎರಡು ಕೊಲೆಗಳ ಆರೋಪದಲ್ಲಿ ಫೀನಿಕ್ಸ್ ಪೊಲೀಸರು ಮಿಲ್ಲರ್ ನನ್ನು 2015ರಲ್ಲಿ ಬಂಧಿಸಿದ್ದರು. ಕೊಲೆಗಳು ನಡೆದ ಜಾಗದಲ್ಲಿ ತಾನು ವಾಸವಾಗಿರುವುದನ್ನು ಅವನು ಒಪ್ಪಿಕೊಂಡನಾದರೂ ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅವನು ಪೊಲೀಸರಿಗೆ ಹೇಳಿದ್ದ.
ಮಿಲ್ಲರ್ ವಿಚಾರಣೆಯನ್ನು ಎದುರಿಸಲು ಮಾನಸಿಕ ಸಮರ್ಥನಾಗಿದ್ದಾನೆ ಎಂಬ ಅಂಶವನ್ನು ಸುಮಾರು 9 ತಿಂಗಳ ಹಿಂದೆ ಪೊಲೀಸರಿಗೆ ಮನವರಿಕೆಯಾಗಿತ್ತು. ಮಿಲ್ಲರ್ ಫಿನಿಕ್ಸ್ ಏರಿಯಾದಲ್ಲಿ ಸಾಕಷ್ಟು ಜನಪ್ರಿಯನಾಗಿದ್ದಾನೆ ಸಿಬಿಎಸ್ ನ ಮತ್ತೊಂದು ಅಂಗ ಸಂಸ್ಥೆ ಕೆಪಿಹೆಚ್ ಒ-ಟಿವಿ ವರದಿ ಮಾಡಿದೆ. ಪ್ರದೇಶದ ಓಣಿಗಳಲ್ಲಿ ಅವನೊಂದು ಹಳೆಯ ಪೊಲೀಸ್ ಕ್ರೂಸರ್ ನಲ್ಲಿ ಓಡಾಡುತ್ತಿದ್ದ. ವಾಹನದ ಮುಂಭಾಗದಲ್ಲಿ ಜಾಂಬೀ ಹಂಟರ್ ಎಂದು ಬರೆದುಕೊಂಡಿದ್ದ ಮತ್ತು ಹಿಂದಿನ ಸೀಟಿನಲ್ಲಿ ಜಾಂಬೀಯ ಪ್ರತಿಕೃತಿಯೊಂದನ್ನು ಇಟ್ಟುಕೊಂಡಿರುತ್ತಿದ್ದ.
ಅವನ ವಿಚಿತ್ರ ವಾಹನ ಮತ್ತು ಅವನೊಂದಿಗೆ; ಪೊಲೀಸರೂ ಸೇರಿದಂತೆ ಯಾರೇ ಸೆಲ್ಫೀ ಇಲ್ಲವೇ ಫೋಟೋ ತೆಗೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರೂ ಅವನು ಖುಷಿಯಿಂದ ಒಪ್ಪಿಕೊಳ್ಳುತ್ತಿದ್ದ ಎಂದು ಅವನ ಸ್ನೇಹಿತರು ಹೇಳಿದ್ದಾರೆ.