ಅಲ್ಜೀರಿಯಾದಲ್ಲಿ ಪುನಃ ತಲೆದೋರಿದ ಕಾಳ್ಳಿಚ್ಚಿಗೆ ಕನಿಷ್ಟ 38 ಜನ ಬಲಿ ಮತ್ತು 200 ಕ್ಕೂ ಹೆಚ್ಚು ಜನರಿಗೆ ಸುಟ್ಟಗಾಯಗಳು

ಅಲ್ಜೀರಿಯಾದ ಉತ್ತರ ಭಾಗದ ಹಲವಾರು ಭಾಗಗಳಲ್ಲೂ ಬೆಂಕಿ ತಾಂಡವಾಡುತ್ತಿದೆ ಎಂದು ಅಗ್ನಿ ಶಾಮಕ ದಳ ಹೇಳಿದೆ. ಈ ಭಾಗದಲ್ಲಿ ಬೀಸುತ್ತಿರುವ ಬಿಸಿಗಾಳಿಯಿಂದ ಬೆಂಕಿ ಬೇರೆ ಕಡೆಗೂ ಹಬ್ಬಲಿದೆ ಮತ್ತು ಅದನ್ನು ನಂದಿಸಲು ತಮ್ಮಲ್ಲಿ ಸಮರ್ಪಕ ಉಪಕರಣಗಳಿಲ್ಲ ಎಂದು ದಳದ ಸಿಬ್ಬಂದಿ ಹೇಳಿದ್ದಾರೆ.

ಅಲ್ಜೀರಿಯಾದಲ್ಲಿ ಪುನಃ ತಲೆದೋರಿದ ಕಾಳ್ಳಿಚ್ಚಿಗೆ ಕನಿಷ್ಟ 38 ಜನ ಬಲಿ ಮತ್ತು 200 ಕ್ಕೂ ಹೆಚ್ಚು ಜನರಿಗೆ ಸುಟ್ಟಗಾಯಗಳು
ಅಲ್ಜೀರಿಯಾದಲ್ಲಿ ಕಾಳ್ಗಿಚ್ಚು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2022 | 8:08 AM

ಅಲ್ಜೀರ್ಸ್: ಬರಗಾಲ ಮತ್ತು ಮೈಯಲ್ಲಿ ಬೊಬ್ಬೆ ತರಿಸುವ ಬಿಸಿಗಾಳಿಯಿಂದ ತತ್ತರಿಸಿರುವ ಅಲ್ಜೀರಿಯಾದದಲ್ಲಿ (Algeria) ಗುರುವಾರ ತಲೆದೋರಿದ ಕಾಳ್ಗಿಚ್ಚಿಗೆ ಕನಿಷ್ಟ 38 ಜನ ಬಲಿಯಾಗಿ 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉತ್ತರ ಆಫ್ರಿಕಾದ (north Africa) ಈ ರಾಷ್ಟ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾರಣಾಂತಿಕ ಕಾಳ್ಗಿಚ್ಚು ಪ್ರತಿವರ್ಷದ ಪೀಡೆಯಾಗಿ ಜನರನ್ನು ಬಾಧಿಸುತ್ತಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಲ್ಜೀರಿಯಾದ ಪೂರ್ವಭಾಗ ಮತ್ತು ಟುನೀಶಿಯಾ ಗಡಿಗೆ ಹತ್ತಿರವಿರುವ ಎಲ್ ಟರ್ಫ್ ಪ್ರಾಂತ್ಯದಲ್ಲಿ ಕಾಳ್ಗಿಚ್ಚು ಹಬ್ಬಿದ್ದು ಅಲ್ಲೇ ಕನಿಷ್ಟ 38 ಜನ ಸತ್ತಿದ್ದಾರೆ. ಕಾಳ್ಗಿಚ್ಚಿಗಿಂತ ಹರಡುವ ಮೊದಲು ಅಲ್ಲಿನ ಜನ 48 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕುದ್ದು ಬಳಲಿ ಬೆಂಡಾಗುತ್ತಿದ್ದರು.

ಈ ಪ್ರಾಂತ್ಯದಲ್ಲಿ 200ಕ್ಕೂ ಹೆಚ್ಚು ಜನ ಸುಟ್ಟಗಾಯ ಮತ್ತು ಹಬ್ಬುತ್ತಿರುವ ದಟ್ಟ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅಲ್ಜೀರಿಯಾದ ಹಲವಾರು ಮಾಧ್ಯಮಗಳು ವರದಿ ಮಾಡಿವೆ.

ಎಲ್ ಟರ್ಫ್ ನಲ್ಲಿರುವ ಪತ್ರಕರ್ತರೊಬ್ಬರು ಅಲ್ಲಿನ ದೃಶ್ಯಾವಳಿಯನ್ನು ವಿನಾಶಕಾರಿ ಎಂದು ಬಣ್ಣಿಸಿ, ‘ಬೆಂಕಿಯ ಬಿರುಗಾಳಿಯೊಂದು ಕೆಲವೇ ಕ್ಷಣಗಳಲ್ಲಿ ಎಲ್ಲವನ್ನು ನಾಶಮಾಡಿಬಿಟ್ಟಿತು. ಸತ್ತವರಲ್ಲಿ ಹೆಚ್ಚಿನ ಜನ ವನ್ಯಜೀವಿ ಧಾಮವೊಂದಕ್ಕೆ ಭೇಟಿ ನೀಡಿದ್ದಾಗ ಅಗ್ನಿಯಿಂದ ಸುತ್ತುವರಿಯಲ್ಪಟ್ಟು ಅದಕ್ಕೆ ಆಹುತಿಯಾದರು,’ ಎಂದು ಹೇಳಿದ್ದಾರೆ.

ಟೊಂಗ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಗೆಯನ್ನು ನಂದಿಸಲು ಅಗ್ನಿಶಾಮಕ ದಳ ಮತ್ತು ಇತರ ತುರ್ತು ಸೇವೆಗಳ ಸಿಬ್ಬಂದಿ ಹರ ಸಾಹಸಪಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಸುಮಾರು ಒಂದು ಲಕ್ಷ ಜನ ವಾಸವಾಗಿರುವ ನಗರ ಪ್ರದೇಶದ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ 8 ಜನ ಸಜೀವ ದಹನಗೊಂಡರು ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಜೀರಿಯ ಪ್ರಧಾನ ಮಂತ್ರಿ ಅಯ್ಮನ್ ಬೆನಬ್ದೆರೆಹಮಾನೆ ಅವರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸರ್ಕಾರ ಪ್ರಾಯೋಜಿತ ಟೆಲಿವಿಷನ್ ವರದಿ ಮಾಡಿದೆ.

ಪರ್ವತಗಳಿಂದ ಆವೃತವಾಗಿರುವ ಸೌಕ್ ಅಹ್ರಾಸ್ ನಲ್ಲೂ ಬೆಂಕಿ ತನ್ನ ಅಟ್ಟಹಾಸ ಮೆರೆಯುತ್ತಿದೆ ಎಂದು ಪತ್ರಕರ್ತರೊಬ್ಬರು ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸುಮಾರು 5 ಲಕ್ಷ ಜನಸಂಖ್ಯೆಯ ಈ ಪ್ರದೇಶದಲ್ಲಿ ಕಾಡಿಗೆ ಹತ್ತಿರುವಿರುವ ಆಸ್ಪತ್ರೆಯೊದರಿಂದ ಸುಮಾರು 100 ಮಹಿಳೆಯರು ಮತ್ತು 17 ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಹೊರತರಲಾಯಿತೆಂದು ಅವರು ಹೇಳಿದ್ದಾರೆ.

ಜನ ತಮ್ಮ ಕೈಗಳಲ್ಲಿ ಮಕ್ಕಳನ್ನು ಹೊತ್ತುಕೊಂಡು ಬೆಂಕಿಯಿಂದ ಧಗಧಗಿಸುತ್ತಿರುವ ಮನೆಗಳಿಂದ ಹೊರಗೆ ಧಾವಿಸಿ ಸುರಕ್ಷಿತ ಸ್ಥಳಗಳ ಕಡೆ ಓಡುತ್ತಿರುವುವ ದೃಶ್ಯಗಳನ್ನು ಅಲ್ಜೀರಿಯಾದ ಟಿವಿಗಳು ಬಿತ್ತರಿಸಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಕನಿಷ್ಟ 350 ಜನ ತಮ್ಮ ಮನೆಗಳನ್ನು ತೊರೆದಿದ್ದಾರೆ.

ಅಲ್ಜೀರಿಯಾದ ಉತ್ತರ ಭಾಗದ ಹಲವಾರು ಭಾಗಗಳಲ್ಲೂ ಬೆಂಕಿ ತಾಂಡವಾಡುತ್ತಿದೆ ಎಂದು ಅಗ್ನಿ ಶಾಮಕ ದಳ ಹೇಳಿದೆ. ಈ ಭಾಗದಲ್ಲಿ ಬೀಸುತ್ತಿರುವ ಬಿಸಿಗಾಳಿಯಿಂದ ಬೆಂಕಿ ಬೇರೆ ಕಡೆಗೂ ಹಬ್ಬಲಿದೆ ಮತ್ತು ಅದನ್ನು ನಂದಿಸಲು ತಮ್ಮಲ್ಲಿ ಸಮರ್ಪಕ ಉಪಕರಣಗಳಿಲ್ಲ ಎಂದು ದಳದ ಸಿಬ್ಬಂದಿ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿ ಕಳೆದ ವರ್ಷ ಕಾಳ್ಳಿಚ್ಚು ನಡೆಸಿದ ವಿನಾಶಕಾರಿ ದೃಶ್ಯಗಳನ್ನು ನೆನಪಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. 2021ರಲ್ಲಿ ಅದು 90 ಜನರನ್ನು ಬಲಿತೆಗೆದುಕೊಂಡಿತ್ತು ಮತ್ತು ಸುಮಾರರು 100,000 ಹೆಕ್ಟೇರ್ ಗಳಷ್ಟು ಅರಣ್ಯ ಮತ್ತು ಕೃಷಿಭೂಮಿಯನ್ನು ನಾಶಗೊಳಿಸಿತ್ತು. ಬೆಂಕಿಯನ್ನು ನಂದಿಸಲು ಯೋಗ್ಯ ಮತ್ತು ಸಮರ್ಪಕ ಉಪಕರಣಗಳಲ್ಲದೆ ಬೆಂಕಿ ನಂದಿಸಲು ಉಪಯೋಗಿಸುವ ವಿಮಾನದ ಏರ್ಪಾಟು ಮಾಡಿಕೊಳ್ಳದಿದ್ದುದಕ್ಕೆ ಸರ್ಕಾರ ಖಂಡನೆಗೊಳಗಾಗಿತ್ತು.

ಸರ್ಕಾರ ರಷ್ಯಾದಿಂದ ಬೆರೀವ್ ಬಿಇ 200 ವಾಟರ್ ಬಾಂಬರ್ ವಿಮಾನವನ್ನು ಬಾಡಿಗೆ ಪಡೆದಿರುವುದು ಸತ್ಯ. ಅದರೆ ಅದು ಎಂಜಿನ್ ವೈಫಲ್ಯಕ್ಕೊಳಗಾಗಿದ್ದು ಶನಿವಾರದವರೆಗೆ ರಿಪೇರಿಯಾಗಲಾರದುನ ಎಂದು ಅಲ್ಜೀರಿಯಾದ ಆಂತರಿಕ ವ್ಯವಹಾರಗಳ ಸಚಿವ ಕಾಮೆಲ್ ಬೆಲ್ದಜೌದ್ ಹೇಳಿದ್ದಾರೆ.

ನಾಗರಿಕ ಸಂರಕ್ಷಣೆ ಸೇವೆ ಮತ್ತು ಸೇನೆಯ ಬಳಿ ಹಲವಾರು ಬೆಂಕಿ ನಂದಿಸುವ ಹೆಲಿಕಾಪ್ಟರ್ ಗಳಿವೆ ಎಂದು ಹೇಳಲಾಗಿದೆ.

ಸುಮಾರು 4 ಮಿಲಿಯನ್ ದಶಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಆಫ್ರಿಕಾ ಖಂಡದ ಅತಿ ದೊಡ್ಡ ರಾಷ್ಟ್ರದಲ್ಲಿ ಬೆಂಕಿ ನಂದಿಸುವ ಉಪಕರಣ ಮತ್ತು ವಿಮಾನಗಳನ್ನು ಹೊಂದುವ ತೀವ್ರ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಹೆಸರು ಹೇಳಿಕೊಳ್ಳಲಿಚ್ಛಿಸದ ತಜ್ಞರೊಬ್ಬರು ಎ ಎಫ್ ಪಿ ಜೊತೆ ಮಾತಾಡುವಾಗ 80 ರ ದಶಕದಲ್ಲಿ 22 ಗ್ರುಮ್ಮನ್ ಫೈರ್ ಪೈಟಿಂಗ್ ವಿಮಾನಗಳು ಅಲ್ಜೀರಿಯಾದಲ್ಲಿದ್ದವು. ಅದರೆ ಯಾವುದೇ ಬದಲೀ ವ್ಯವಸ್ಥೆ ಮಾಡಿಕೊಳ್ಳದೆ ಅವುಗಳನ್ನು ಅಗ್ಗದ ದರಗಳಿಗೆ ಮಾರಿಕೊಳ್ಳಲಾಯಿತು ಎಂದು ಹೇಳಿದ್ದಾರೆ.

ಸ್ಪ್ಯಾನಿಷ್ ಸಂಸ್ಥೆ ಲೈಸ್ ದಿಂದ 7 ಫೈರ್ ಫೈಟಿಂಗ್ ವಿಮಾನಗಳನ್ನು ಖರೀದಿಸಲು ಅಲ್ಜೀರಿಯಾ ಒಪ್ಪಂದ ಮಾಡಿಕೊಂಡಿತ್ತು. ಆದರೆ ಜೂನ್ ನಲ್ಲಿ ತಲೆದೋರಿದ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಆ ಡೀಲ್ ರದ್ದಾಯಿತು ಎಂದು ತಜ್ಞ ವೆಬ್ಸೈಟ್ ಮಿನಾ ಡಿಫೆನ್ಸ್ ಹೇಳಿದೆ.

ಆಗಸ್ಟ್ ಆರಂಭದಿಂದ ಅಲ್ಜೀರಿಯಾದಲ್ಲಿ 106 ಕಾಳ್ಗಿಚ್ಚಿನ ಪ್ರಕರಣಗಳು ವರದಿಯಾಗಿದ್ದು 800 ಹೆಕ್ಟೇರ್ ಗಳಷ್ಟು ಅರಣ್ಯ ಮತ್ತು 1,800 ಹೆಕ್ಟೇರ್ ಗಳಷ್ಟು ಕಾಡುಪ್ರದೇಶ ಹಾಳಾಗಿದೆ ಎಂದು ಬೆಲ್ದಜೌದ್ ಹೇಳಿದ್ದಾರೆ.

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!