BBC: ಬಿಬಿಸಿ ದ್ವಂದ್ವ ನೀತಿ ಬಹಿರಂಗ; ಬ್ರಿಟನ್​​​ ರಾಜಕೀಯ ಒತ್ತಡಕ್ಕೆ ವಾಹಿನಿಯ ಕಾರ್ಯಕ್ರಮಗಳು ರದ್ದು

David Attenborough | Gary Lineker: ನರೇಂದ್ರ ಮೋದಿ ಕುರಿತು ಬಿಬಿಸಿ ಮಾಡಿದ ಸಾಕ್ಷ್ಯಚಿತ್ರದ ಹಿಂದೆ ರಾಜಕೀಯದ ಕೈವಾಡ ಇಲ್ಲ ಎಂದು ವಾದಿಸಲಾಗಿತ್ತು. ಆದರೆ ಈಗ ನಡೆದಿರುವ ಬೆಳವಣಿಗೆಗಳು ವಾಹಿನಿಯ ದ್ವಂದ್ವ ನೀತಿಯನ್ನು ಬಯಲು ಮಾಡಿವೆ.

BBC: ಬಿಬಿಸಿ ದ್ವಂದ್ವ ನೀತಿ ಬಹಿರಂಗ; ಬ್ರಿಟನ್​​​ ರಾಜಕೀಯ ಒತ್ತಡಕ್ಕೆ ವಾಹಿನಿಯ ಕಾರ್ಯಕ್ರಮಗಳು ರದ್ದು
ಡೇವಿಡ್​ ಅಟೆನ್​ಬರೋ, ನರೇಂದ್ರ ಮೋದಿ, ಗ್ಯಾರಿ ಲಿನೇಕರ್​
Follow us
ಮದನ್​ ಕುಮಾರ್​
|

Updated on:Mar 12, 2023 | 10:10 AM

ಬಿಬಿಸಿ ವಾಹಿನಿಯ (BBC) ಆಂತರಿಕ ವಿಚಾರಗಳು ಈಗ ಬೀದಿಗೆ ಬಂದಿವೆ. ಫುಟ್​ಬಾಲ್​ ಕುರಿತ ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರದ ನಿರೂಪಕ ಗ್ಯಾರಿ ಲಿನೇಕರ್​ (Gary Lineker) ಅವರನ್ನು ತಾತ್ಕಾಲಿಕವಾಗಿ ವಾಹಿನಿಯಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ. ರಾಜಕೀಯ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಾಗಿ ವಾಹಿನಿಯ ವಿರುದ್ಧ ಅದರ ಮುಖ್ಯ ಕಾರ್ಯಕ್ರಮಗಳ ಕೆಲವು ನಿರೂಪಕರೇ ತಿರುಗಿ ಬಿದ್ದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ವಾರಗಳ ಹಿಂದೆ ನರೇಂದ್ರ ಮೋದಿ (Narendra Modi) ಕುರಿತು ಬಿಬಿಸಿ ಮಾಡಿದ್ದ ಸಾಕ್ಷ್ಯಚಿತ್ರವು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಕಾರ್ಯಕ್ರಮಗಳಲ್ಲಿ ರಾಯಕೀಯ ಹಸ್ತಕ್ಷೇಪ ಇಲ್ಲ ಎಂದು ಬಿಬಿಸಿ ವಾದಿಸಿತ್ತು. ಆದರೆ ಈಗ ಬ್ರಿಟನ್​ನಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ಬಿಬಿಸಿ ವಾಹಿನಿಯ ದ್ವಂದ್ವ ನೀತಿ ಬಯಲಾಗಿದೆ.

ಗ್ಯಾರಿ ಲಿನೇಕರ್​ ಟ್ವೀಟ್​ ವಿವಾದ:

ನಿರಾಶ್ರಿತರ ಕುರಿತಂತೆ ಬ್ರಿಟನ್​ ಸರ್ಕಾರದ ನೀತಿಯನ್ನು ವಿರೋಧಿಸಿ ಅನೇಕರು ಧ್ವನಿ ಎತ್ತುತ್ತಿದ್ದಾರೆ. ಆ ಪೈಕಿ ಮಾಜಿ ಫುಟ್​ಬಾಲ್​ ಆಟಗಾರ ಹಾಗೂ ಬಿಸಿಸಿ ವಾಹಿನಿಯ ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರಮದ ನಿರೂಪಕ ಗ್ಯಾರಿ ಲಿನೇಕರ್​ ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಸರ್ಕಾರದ ನೀತಿಯನ್ನು ವಿರೋಧಿಸಿ ಟ್ವೀಟ್​ ಮಾಡಿದರು. ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಅವರು ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರಮವನ್ನು ನಡೆಸಿಕೊಡಬಾರದು ಎಂದು ಬಿಸಿಸಿ ಸೂಚಿಸಿದೆ.

ಇದನ್ನೂ ಓದಿ: ಐಟಿ ಇಲಾಖೆಯಿಂದ ಪರಿಶೀಲನೆ; ನಾವು ಬಿಬಿಸಿ ಪರ ನಿಲ್ಲುತ್ತೇವೆ ಎಂದ ಬ್ರಿಟನ್ ಸರ್ಕಾರ

ಇದನ್ನೂ ಓದಿ
Image
ಮೋದಿ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಸಮಯ ಗಮನಿಸಿ, ಇದು ಆಕಸ್ಮಿಕ ಅಲ್ಲ, ರಾಜಕೀಯ: ಜೈಶಂಕರ್
Image
ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ; ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದ 5 ವಿಷಯಗಳು
Image
ಯಾರೂ ಕಾನೂನಿಗಿಂತ ಮೇಲಲ್ಲ: ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್
Image
BBC Documentary Row: ಬಿಬಿಸಿ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಸೋಶಿಯಲ್​ ಮೀಡಿಯಾ ಬಳಕೆಗೆ ಸಂಬಂಧಿಸಿದಂತೆ ಬಿಬಿಸಿಯ ನಿಯಮಗಳನ್ನು ಗ್ಯಾರಿ ಲಿನೇಕರ್ ಅವರು ಉಲ್ಲಂಘಿಸಿದ್ದಾರೆ ಎಂದು ಅವರನ್ನು ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರಮದಿಂದ ಹೊರಗಿಡಲಾಗಿದೆ. ಅವರ ಟ್ವಿಟರ್​ ಬಳಕೆ ಕುರಿತಂತೆ ವಾಹಿನಿಯು ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಅವರು ಕಾರ್ಯಕ್ರಮವನ್ನು ನಡೆಸಿಕೊಡುವಂತಿಲ್ಲ ಎಂದು ಸೂಚಿಸಿದೆ. ಇದನ್ನು ಖಂಡಿಸಿ ಇತರ ನಿರೂಪಕರು ಕೂಡ ತಮ್ಮ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ​ದ್ದಾರೆ.

ಇದನ್ನೂ ಓದಿ: ಮೋದಿ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಸಮಯ ಗಮನಿಸಿ, ಇದು ಆಕಸ್ಮಿಕ ಅಲ್ಲ, ರಾಜಕೀಯ: ಜೈಶಂಕರ್

ಡೇವಿಡ್​ ಅಟೆನ್​ಬರೋ ಸಂಚಿಕೆಯೂ ರದ್ದು:

ವನ್ಯಜೀವಿಗಳ ಕುರಿತಂತೆ ಸರ್​ ಡೇವಿಡ್​ ಅಟೆನ್​ಬರೋ ಅವರು ಹೊಸ ಸರಣಿಯನ್ನು ನಿರೂಪಿಸಿದ್ದಾರೆ. ಅದರ ಒಂದು ಸಂಚಿಕೆಯನ್ನು ಪ್ರಸಾರ ಮಾಡಲು ಬಿಬಿಸಿ ಹಿಂದೇಟು ಹಾಕಿದೆ. ಈ ಎಪಿಸೋಡ್​ನಲ್ಲಿ ಇರುವ ವಿಚಾರಗಳು ಸರ್ಕಾರಕ್ಕೆ ವಿರುದ್ಧವಾಗಿವೆ ಮತ್ತು ಬ್ರಿಟನ್​ನ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುವಂತಿವೆ ಎಂಬ ಕಾರಣಕ್ಕೆ ಇದರ ಪ್ರಸಾರವನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ: ಯಾರೂ ಕಾನೂನಿಗಿಂತ ಮೇಲಲ್ಲ: ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್

ಗ್ಯಾರಿ ಲಿನೇಕರ್​ ಅವರನ್ನು ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರಮದಿಂದ ಹೊರಗಿಟ್ಟಿರುವುದು ಮತ್ತು ಡೇವಿಡ್​ ಅಟೆನ್​ಬರೋ ಅವರ ಕಾರ್ಯಕ್ರಮದ ಸಂಚಿಕೆಯನ್ನು ರದ್ದು ಮಾಡಿರುವುದು ವಿಶ್ವಾದ್ಯಂತ ಚರ್ಚೆಗೆ ಕಾರಣ ಆಗಿದೆ. ಬಿಬಿಸಿ ಸ್ವತಂತ್ರವಾಗಿ, ವಸ್ತುನಿಷ್ಠವಾಗಿ ಕೆಲಸ ಮಾಡುತ್ತಿಲ್ಲ ಹಾಗೂ ಅದರ ಮೇಲೆ ರಾಜಕೀಯದ ಹಸ್ತಕ್ಷೇಪ ಇದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ ಒದಗಿಸುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:10 am, Sun, 12 March 23

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ