ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಕಾಲಿಟ್ಟ ಚೀನಾ ಸೇನೆ; ಮಿಲಿಟರಿ ಮೂಲಸೌಕರ್ಯ ಬಲಪಡಿಸಲು ಕಾರ್ಯಾಚರಣೆ

ಭಾರತೀಯ ಸೇನೆಯೂ ಸಹ ಸುಮ್ಮನೆ ಕುಳಿತಿಲ್ಲ. ಕಳೆದ ವರ್ಷದ ಸಂಘರ್ಷದ ಬಳಿಕ ಗಡಿಭಾಗದಲ್ಲಿ ಭಾರತ ಕೂಡ ಸೇನಾ ಬಲವನ್ನು ಹೆಚ್ಚಿಸಿದೆ. ಯುದ್ಧ ಟ್ಯಾಂಕ್​​ಗಳನ್ನು ಶಸ್ತ್ರಾಸ್ತ್ರಗಳ ವಾಹನಗಳನ್ನೂ ನಿಯೋಜಿಸಿ, ಚೀನಾ ಸೈನಿಕರಿಗೆ ಕೌಂಟರ್​ ಕೊಟ್ಟಿದೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಕಾಲಿಟ್ಟ ಚೀನಾ ಸೇನೆ; ಮಿಲಿಟರಿ ಮೂಲಸೌಕರ್ಯ ಬಲಪಡಿಸಲು ಕಾರ್ಯಾಚರಣೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jul 27, 2021 | 2:35 PM

ದೆಹಲಿ: ಪೂರ್ವ ಲಡಾಖ್​​ನ ವಾಸ್ತವ ನಿಯಂತ್ರಣಾ ಗಡಿ ರೇಖೆ ಬಳಿ ಚೀನಾ ತನ್ನ ಸೇನಾಬಲವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಕಳೆದ ಏಪ್ರಿಲ್​-ಮೇ ತಿಂಗಳಿಂದಲೂ ಇಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಿರಂತರವಾಗಿ ಸಂಘರ್ಷ ಆಗುತ್ತಲೇ ಬರುತ್ತಿದ್ದು, ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದುಕೊಳ್ಳಲಾಗಿತ್ತು. ಆದರೆ ಚೀನಾ ಇಲ್ಲಿ ನಿರಂತರವಾಗಿ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಲೇ ಇದೆ. ವಾಯುನೆಲೆಗಳನ್ನು ವರ್ಧಿಸುತ್ತಿದೆ ಅಷ್ಟೇ ಅಲ್ಲ, ವಾಯು ರಕ್ಷಣಾ ಘಟಕಗಳನ್ನು ನಿರ್ಮಾಣ ಮಾಡುತ್ತಿದೆ. ಹೊಸ ವಾಯುನೆಲೆಗಳನ್ನು ಕಟ್ಟುವ ಜತೆ ಹೆಲಿಕಾಪ್ಟರ್​​ ಹಾರಾಟ ವ್ಯಾಪ್ತಿಯನ್ನು ಹೆಚ್ಚಿಸುವತ್ತ ಗಮನಕೊಟ್ಟಿದೆ. ರನ್​ವೇಗಳೂ ಸಿದ್ಧವಾಗುತ್ತಿವೆ. ಕಳೆದ ಒಂದು ವರ್ಷಗಳಿಂದಲೂ ಚೀನಾ ಇದೇ ಕೆಲಸ ನಡೆಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಹಾಗಂತ ಭಾರತೀಯ ಸೇನೆಯೂ ಸಹ ಸುಮ್ಮನೆ ಕುಳಿತಿಲ್ಲ. ಕಳೆದ ವರ್ಷದ ಸಂಘರ್ಷದ ಬಳಿಕ ಗಡಿಭಾಗದಲ್ಲಿ ಭಾರತ ಕೂಡ ಸೇನಾ ಬಲವನ್ನು ಹೆಚ್ಚಿಸಿದೆ. ಯುದ್ಧ ಟ್ಯಾಂಕ್​​ಗಳನ್ನು ಶಸ್ತ್ರಾಸ್ತ್ರಗಳ ವಾಹನಗಳನ್ನೂ ನಿಯೋಜಿಸಿ, ಚೀನಾ ಸೈನಿಕರಿಗೆ ಕೌಂಟರ್​ ಕೊಟ್ಟಿದೆ. ಆದರೆ ಕುತಂತ್ರಿ ಚೀನಾ ತನ್ನ ಕಾರ್ಯಚಟುವಟಿಕೆಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೂ ವಿಸ್ತರಿಸಿದೆ. ಕಳೆದ ಕೆಲವು ತಿಂಗಳಿಂದಲೂ ಚೀನಾ ಮತ್ತು ಪಾಕಿಸ್ತಾನ ಸೈನಿಕರ ನಡುವೆ ಸಹಕಾರ ಹೆಚ್ಚಿದೆ. ಇವೆರಡೂ ದೇಶಗಳು ಸೇರಿ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಮಿಲಿಟರಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿವೆ. ಭೂ ಮೇಲ್ಮೈನಿಂದ, ಗಾಳಿಯಲ್ಲಿ ಹಾರಾಡುತ್ತಿರುವ ಯುದ್ಧ ವಿಮಾನಗಳನ್ನು ಧ್ವಂಸಗೊಳಿಸುವ ಕ್ಷಿಪಣಿ ವ್ಯವಸ್ಥೆಯನ್ನು ರೂಪಿಸಲು ಮುಂದಾಗಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಹಾಗೇ, ಚೀನಾದ ಏರ್​ಕ್ರಾಫ್ಟ್​ಗಳಿಗೆ ಪಾಕಿಸ್ತಾನದ ಸ್ಕರ್ಡು ವಾಯುನೆಲೆಯಲ್ಲಿ ಇಂಧನ ತುಂಬಲಾಗುತ್ತಿದೆ. ಈ ಸ್ಕರ್ಡು ಏರ್​ಬೇಸ್​ ಲಡಾಖ್​​ನ ಲೇಹ್​ ವಾಯುನೆಲೆಯಿಂದ 100 ಕಿಮೀ ದೂರದಲ್ಲಿದೆ.

ಇದನ್ನೂ ಓದಿ: ಯಡಿಯೂರಪ್ಪಗೆ ವಯಸ್ಸು 75 ವರ್ಷ, ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ – ಕಾಂಗ್ರೆಸ್ ಎಂಎಲ್ಸಿ ಸಿ.ಎಂ. ಇಬ್ರಾಹಿಂ

China helping Pakistan toset  up missile defence system in POK

Published On - 2:23 pm, Tue, 27 July 21

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು