ಇಡೀ ವಿಶ್ವಕ್ಕೆ ವೈರಸ್ನ ಉಡುಗೊರೆಯಾಗಿ ನೀಡಿರುವ ಚೀನಾ ಕೆಲವು ತಿಂಗಳಿಂದ ಮಹಾಮಾರಿಯ ಪಾಶದಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರುಬಿಟ್ಟಿತ್ತು. ಆದರೆ, ಗುರುವಿಗೆ ತಿರುಮಂತ್ರ ಎಂಬಂತೆ ಕೊರೊನಾ ಇದೀಗ ಮತ್ತೊಮ್ಮೆ ತನ್ನ ತವರೂರಿನಲ್ಲಿ ಕಾಣಿಸಿಕೊಂಡಿದೆ. ಸೆಕೆಂಡ್ ಇನ್ನಿಂಗ್ಸ್ ಆರಂಭಿಸೋಕೆ ಮುಂದಾಗಿದೆ.
ಹೌದು, ಕಳೆದ ಏಪ್ರಿಲ್ ಬಳಿಕೆ ಇಂದು ಮೊದಲ ಬಾರಿಗೆ ಚೀನಾದಲ್ಲಿ 61 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 57 ಸ್ಥಳೀಯವಾಗಿ ವರದಿಯಾಗಿದ್ದು ಉಳಿದ ಪ್ರಕರಣಗಳು ವಿದೇಶದಿಂದ ಬಂದವರಲ್ಲಿ ಪತ್ತೆಯಾಗಿದೆ. ದೇಶದ ಜಿಂಜಿಯಾಂಗ್ (Xinjiang) ಹಾಗೂ ಲಿಯಾವೋನಿಂಗ್ (Liaoning) ಪ್ರದೇಶದಲ್ಲಿ ಅತಿ ಹೆಚ್ಚು ಕೇಸ್ಗಳು ಪತ್ತೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಹಾಗಾಗಿ, ಆರೋಗ್ಯ ಅಧಿಕಾರಿಗಳು ಸೋಂಕಿತ ಪ್ರದೇಶಗಳಲ್ಲಿ ಸಾಮೂಹಿಕ ಕೊವಿಡ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಜೊತೆಗೆ, ಸೋಂಕು ಪತ್ತೆಯಾದ ಪಟ್ಟಣಗಳನ್ನ ಲಾಕ್ಡೌನ್ ಮಾಡಲಾಗಿದೆ. ವಿಪರ್ಯಾಸವೆಂದರೆ, ವೈರಸ್ನ ಮತ್ತೆ ಹಬ್ಬಿಸಿದ ಪ್ರಾಥಮಿಕ ಸೋಂಕಿತ ಯಾರು ಎಂದು ಪತ್ತೆಯಾಗಿಲ್ಲ.
ಕರ್ನಾಟಕದಲ್ಲಿ ಏನಾಗಿದೆ? ಅದೇ ಕರ್ನಾಟಕದಲ್ಲಿ ನಿನ್ನೆಯ ವೇಳೆಗೆ 55,388 ಸಕ್ರಿಯ ಪ್ರಕರಣಗಳಿದ್ದು, ತಮಿಳುನಾಡಿನಲ್ಲಿ 52,273 ಸಕ್ರಿಯ ಕೇಸ್ಗಳಿವೆ. ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ ಪಕ್ಕಾ ಆಗಿದ್ದು, ಇಲ್ಲಿ 1.44 ಲಕ್ಷ ಸಕ್ರಿಯ ಕೇಸ್ಗಳಿವೆ.