ವೇಯ್ಟರ್​ಗಳು ಕಿಟ್ ಧರಿಸಿ ಊಟ ಬಡಿಸಿದ್ರು! ಎಲ್ಲಿ?

ವೇಯ್ಟರ್​ಗಳು ಕಿಟ್ ಧರಿಸಿ ಊಟ ಬಡಿಸಿದ್ರು! ಎಲ್ಲಿ?

ಕೊರೊನಾ ಸೋಂಕಿನಿಂದಾಗಿ ರಕ್ಷಣೆ ಪಡೆಯಲು ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್​ಗಳನ್ನ ಧರಿಸಲಾಗುತ್ತೆ. ಆದ್ರೆ, ಮದುವೆ ಸಮಾರಂಭದಲ್ಲೂ ವೇಯ್ಟರ್​ಗಳು ಕಿಟ್ ಧರಿಸಿ ಊಟ ಬಡಿಸಿರೋದು ಅಚ್ಚರಿ ಮೂಡಿಸಿದೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದ ಕೋಟಿ ಕ್ಯಾಟರರ್ಸ್​ನ ಸಿಬ್ಬಂದಿ ಪಿಪಿಇ ಕಿಟ್​ಗಳನ್ನ ಧರಿಸಿ, ಮದುವೆ ಬಂದಿದ್ದ ಸುಮಾರು 150 ರಿಂದ 200 ಜನರಿಗೆ ಊಟ ಬಡಿಸಿದ್ದಾರೆ. ಸ್ಯಾನಿಟೈಸರ್ ಕೊಡುವ ಗೊಂಬೆ! ಕೊರೊನಾ ಸೋಂಕು ಬಂದ್ಮೇಲೆ ಸ್ಯಾನಿಟೈಸರ್ ಬಳಸೋದು ಕಡ್ಡಾಯವಾಗ್ಬಿಟ್ಟಿದೆ. ಅಂಗಡಿಗಳಿಗೆ ನೂರಾರು ಗ್ರಾಹಕರು ಬರ್ತಿರೋದ್ರಿಂದ ಅವರಿಗೆಲ್ಲಾ ಸ್ಯಾನಿಟೈಸ್ ನೀಡೋದು ಕಷ್ಟ. […]

Ayesha Banu

| Edited By:

Jul 27, 2020 | 2:49 PM

ಕೊರೊನಾ ಸೋಂಕಿನಿಂದಾಗಿ ರಕ್ಷಣೆ ಪಡೆಯಲು ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್​ಗಳನ್ನ ಧರಿಸಲಾಗುತ್ತೆ. ಆದ್ರೆ, ಮದುವೆ ಸಮಾರಂಭದಲ್ಲೂ ವೇಯ್ಟರ್​ಗಳು ಕಿಟ್ ಧರಿಸಿ ಊಟ ಬಡಿಸಿರೋದು ಅಚ್ಚರಿ ಮೂಡಿಸಿದೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದ ಕೋಟಿ ಕ್ಯಾಟರರ್ಸ್​ನ ಸಿಬ್ಬಂದಿ ಪಿಪಿಇ ಕಿಟ್​ಗಳನ್ನ ಧರಿಸಿ, ಮದುವೆ ಬಂದಿದ್ದ ಸುಮಾರು 150 ರಿಂದ 200 ಜನರಿಗೆ ಊಟ ಬಡಿಸಿದ್ದಾರೆ.

ಸ್ಯಾನಿಟೈಸರ್ ಕೊಡುವ ಗೊಂಬೆ! ಕೊರೊನಾ ಸೋಂಕು ಬಂದ್ಮೇಲೆ ಸ್ಯಾನಿಟೈಸರ್ ಬಳಸೋದು ಕಡ್ಡಾಯವಾಗ್ಬಿಟ್ಟಿದೆ. ಅಂಗಡಿಗಳಿಗೆ ನೂರಾರು ಗ್ರಾಹಕರು ಬರ್ತಿರೋದ್ರಿಂದ ಅವರಿಗೆಲ್ಲಾ ಸ್ಯಾನಿಟೈಸ್ ನೀಡೋದು ಕಷ್ಟ. ಹೀಗಾಗಿಯೇ. ತಮಿಳುನಾಡಿನಲ್ಲಿ ಬಟ್ಟೆ ಅಂಗಡಿಯೊಂದು ಗೊಂಬೆಗೆ ಸೀರೆಯುಡಿಸಿ ಸ್ಯಾನಿಟೈಸರ್ ನೀಡಿದ್ದು, ಗ್ರಾಹಕರಿಗೆ ನೆರವಾಗ್ತಿದೆ. ಇನ್ನೂ ದೈಹಿಕ ಅಂತರದ ಬಗ್ಗೆಯೂ ಈ ಗೊಂಬೆ ಅರಿವು ಮೂಡಿಸುತ್ತೆ.

ಕೊರೊನಾ ಪಾಪ್ ಜಾಗೃತಿ! ಕೊರೊನಾ ವೈರಸ್​ನಿಂದಾಗಿ ಕೈ ಶುಚಿಯಾಗಿಟ್ಟುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಅಂತಾ ಸರ್ಕಾರಗಳು ಹೇಳುತ್ತಲೇ ಇವೆ. ಇದ್ರ ಮಧ್ಯೆ ದೂರದರ್ಶನ ಕೂಡ ಹೆಚ್ಚು ಜಾಗೃತಿ ಮೂಡಿಸಿದ್ದು, ಕೆ ಪಾಪ್ ಸಾಂಗ್​ ಪ್ಲೇ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಕೊರಿಯನ್ ಸಾಂಗ್​ ಪ್ಲೇ ಮಾಡಿದ್ದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಪಾಪ್ ಸಾಂಗ್ ಮೂಲಕ ಕೊರೊನಾ ಜಾಗೃತಿಗೆ ಫಿದಾ ಆಗಿದ್ದಾರೆ.

‘ಮಿ.ಪ್ರೆಸಿಡೆಂಟ್ ನನ್ನ ಗಂಡನನ್ನ ಉಳಿಸಿ’ ಪೆರು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಕೆಲ ಸೋಂಕಿತರ ಸ್ಥಿತಿ ಹೇಳತೀರದಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಪತಿಯನ್ನ ಉಳಿಸಿಕೊಡಿ ಅಂತಾ ಅಧ್ಯಕ್ಷ ಮಾರ್ಟಿನ್ ವಿಚ್ಕರ್ರಾ ಬಳಿ ಮಹಿಳೆ ಅಂಗಲಾಚಿದ್ದಾಳೆ. ಅಧ್ಯಕ್ಷರು ತೆರಳುತ್ತಿದ್ದ ರಸ್ತೆಯಲ್ಲಿ ಕಣ್ಣೀರಿಡುತ್ತಾ ಓಡೋಡಿ ಸಹಾಯ ಕೇಳಿದರೂ ಸಹ, ಯಾರೂ ಸ್ಪಂದಿಸಿಲ್ಲ. ಕೊನೆಗೆ ಪತಿ ಸಾವನ್ನಪ್ಪಿದ್ದಾನೆ.

ಸ್ಟೇಷನ್ ಎದುರು ‘ಚೀತಾ’ ರೈಡ್! ಕೊರೊನಾ ಲಾಕ್​ಡೌನ್ ಬಂದ್ಮೇಲೆ ರಸ್ತೆಯಲ್ಲಿ ಜನ ಓಡಾಡೋದೇ ಕಡಿಮೆ. ಹೀಗಾಗಿ, ಕಾಡುಪ್ರಾಣಿಗಳು ನಾಡಿನಲ್ಲಿ ಬಿಂದಾಸ್ ಆಗಿ ಓಡಾಡಲು ಆರಂಭಿಸಿವೆ. ಉತ್ತರಾಕಂಡ್​ನ ದೇವ ಪ್ರಯಾಗದಲ್ಲಿ ಪೊಲೀಸ್ ಸ್ಟೇಷನ್ ಎದುರು ಒಂದು ಚಿರತೆ ಓಡಾಟ ನಡೆಸಿದೆ. ಚೀತಾ ವಾಹನದಲ್ಲಿ ಓಡಾಡುತ್ತಿದ್ದ ಪೊಲೀಸರೂ ಕೂಡ, ಸ್ಟೇಷನ್ ಎದರು ಜಾನುವಾರುಗಳನ್ನ ಅಟ್ಟಾಡಿಸಿಕೊಂಡು ಬಂದ ಚಿರತೆ ಕಂಡು ಸ್ಟೇಷನ್ ಒಳಗೆ ಓಡಿ ಹೋಗಿದ್ದಾರೆ.

ಮನೆಗೆ ಕರಡಿ ದಾಳಿ! ಕೊರೊನಾ ವೈರಸ್ ಅಟ್ಟಹಾಸದಿಂದಾಗಿ ಹಲವರು ಸಿಟಿ ಮನೆಗಳನ್ನ ಬಿಟ್ಟು ಹಳ್ಳಿ ಕಡೆ ದಾಂಗುಡಿ ಹಿಡ್ತಿದ್ದಾರೆ. ಇದ್ರ ಬೆನ್ನಲ್ಲೇ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕರಡಿಯೊಂದು ಎಂಟ್ರಿ ಕೊಟ್ಟಿದೆ. ಬೀಗ ಹಾಕಿದ್ದ ಬಾಗಿಲನ್ನ ಹೊಡೆದು ಕರಡಿ ಬಂದಿರೋ ಸೀನ್ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ನೋಡುಗರನ್ನ ಬೆಚ್ಚಿಸುವಂತೆ ಮಾಡಿದೆ.

Follow us on

Related Stories

Most Read Stories

Click on your DTH Provider to Add TV9 Kannada