ಆಸ್ಟ್ರೇಲಿಯದಲ್ಲಿ 380 ಮಿಲಿಯನ್ ವರ್ಷ ಹಿಂದಿನ ಮೀನಿನ ಹೃದಯ ಪತ್ತೆಯಾದರೆ ಚೀನಾದದಲ್ಲಿ ಡೈನೊಸಾರ್ ಮೊಟ್ಟೆಗಳನ್ನು ಶೋಧಿಸಲಾಗಿದೆ!

ಮೊಟ್ಟೆಗಳ ಗಾತ್ರ ಮತ್ತು ಮೊಟ್ಟೆಯ ಚಿಪ್ಪಿನ ಯುನಿಟ್ ಗಳ ಬಿಗಿ ಜೋಡಣೆ ಮತ್ತು ವಿಶಿಷ್ಟ ಗೋಳಾಕಾರದ ಆಕಾರವನ್ನು ಆಧಾರವಾಗಿಟ್ಟಕೊಂಡು ಅವು ಡೈನೊಸಾರ್ ಗಳ ಮೊಟ್ಟೆಗಳೆಂಬ ನಿರ್ಣಯಕ್ಕೆ ಬರಲಾಗಿದೆ ಎಂದು ಪ್ಯಾಲಿಯಂಟಾಲಜಿಸ್ಟ್‌ಗಳು ವಿವರಿಸಿದ್ದಾರೆ

ಆಸ್ಟ್ರೇಲಿಯದಲ್ಲಿ 380 ಮಿಲಿಯನ್ ವರ್ಷ ಹಿಂದಿನ ಮೀನಿನ ಹೃದಯ ಪತ್ತೆಯಾದರೆ ಚೀನಾದದಲ್ಲಿ ಡೈನೊಸಾರ್ ಮೊಟ್ಟೆಗಳನ್ನು ಶೋಧಿಸಲಾಗಿದೆ!
ಕ್ಯಾಲ್ಸೈಟ್ ಹರಳುಗಳ ಸಮೂಹದಿಂದ ಆವೃತಗೊಂಡಿರುವ ಡೈನೋಸಾರ್ ಮೊಟ್ಟೆ
TV9kannada Web Team

| Edited By: Arun Belly

Sep 18, 2022 | 8:01 AM

ಶುಕ್ರವಾರ ನಾವು ನಿಮಗೆ 380 ಮಿಲಿಯನ್ ವರ್ಷಗಳಷ್ಟು ಹಳೆಯ ಮೀನಿನ ಪಳಯುಳಿಕೆಯಲ್ಲಿ ಅದರ ಹೃದಯವನ್ನು ಆಸ್ಟ್ರೇಲಿಯಾದ ವಿಜ್ಞಾನಗಳು ಪತ್ತೆಮಾಡಿದ್ದನ್ನು ಹೇಳಿದ್ದೆವು. ಶನಿವಾರ ನಮಗೆ ಲಭ್ಯವಾಗಿರುವ ವರದಿಯೊಂದರ ಪ್ರಕಾರ ಕ್ಯಾಲ್ಸೈಟ್ ಹರಳುಗಳ (calcite crystals) ಸಮೂಹದಿಂದ ಆವೃತಗೊಂಡಿರುವ ಗುಂಡುಕಲ್ಲಿನ ಗಾತ್ರದ ಡೈನೋಸಾರ್ ಮೊಟ್ಟೆಗಳನ್ನು ಚೀನಾದ ಸಂಶೋಧಕರು ಪತ್ತೆ ಮಾಡಿದ್ದಾರೆ. ಚೀನಾದ ಅನ್ಹುಯಿ ಪ್ರಾಂತ್ಯದ (Anhui Province) ಕಿಯಾನ್ಶಾನ್ ಜಲಾನಯನ ಪ್ರದೇಶದಲ್ಲಿ ಮೊಟ್ಟೆಗಳ ಎರಡು ಪಳೆಯುಳಿಕೆಗಳು ಪತ್ತೆಯಾಗಿವೆ ಎಂದು ಜರ್ನಲ್ ಆಫ್ ಪ್ಯಾಲಿಯೋಜಿಯೋಗ್ರಫಿಯಲ್ಲಿ ಪ್ರಕಟವಾಗಿರುವ ಹೊಸ ಸಂಶೋಧನಾ ಪ್ರಬಂಧದಲ್ಲಿ ಚೀನಾದ ವಿಜ್ಞಾನಿಗಳು ವಿವರಣೆ ನೀಡಿದ್ದಾರೆ.

ಹೆಚ್ಚು ಕಡಿಮೆ ದುಂಡಾಕಾರದ ಮೊಟ್ಟೆಗಳು ಡೈನೋಸಾರ್‌ಗಳ ಯುಗದ ಅಂತಿಮ ಕಾಲ ಎಂದು ಪರಿಗಣಿಸಲಾಗಿರುವ ಕ್ರಿಟೇಶಿಯಸ್ ಅವಧಿಯವು ಮತ್ತು ಇವು ಹೊಸ ಜಾತಿಯ ಡೈನೋಸಾರ್‌ಗಳಿಂದ ಉತ್ಪತ್ತಿಯಾಗಿರುವಂಥವು ಎಂದು ನಂಬಲಾಗಿದೆ. ಮೊಟ್ಟೆಗಳ ಗಾತ್ರ ಮತ್ತು ಮೊಟ್ಟೆಯ ಚಿಪ್ಪಿನ ಯುನಿಟ್ ಗಳ ಬಿಗಿ ಜೋಡಣೆ ಮತ್ತು ವಿಶಿಷ್ಟ ಗೋಳಾಕಾರದ ಆಕಾರವನ್ನು ಆಧಾರವಾಗಿಟ್ಟಕೊಂಡು ಅವು ಡೈನೊಸಾರ್ ಗಳ ಮೊಟ್ಟೆಗಳೆಂಬ ನಿರ್ಣಯಕ್ಕೆ ಬರಲಾಗಿದೆ ಎಂದು ಪ್ಯಾಲಿಯಂಟಾಲಜಿಸ್ಟ್‌ಗಳು ವಿವರಿಸಿದ್ದಾರೆ

‘ಹೊಸ ಓಸ್ಪೀಸ್ ಶಿಕ್ಸಿಂಗೋಲಿಥಸ್ ಕಿಯಾನ್ಶಾನೆನ್ಸಿಸ್ ಕಿಯಾನ್ಶಾನ್ ಜಲಾನಯನ ಪ್ರದೇಶದಿಂದ ಓಜೆನಸ್ ಶಿಕ್ಸಿಂಗೋಲಿಥಸ್ ನ ಮೊದಲ ಸಂಶೋಧನೆಯನ್ನು ಪ್ರತಿನಿಧಿಸುತ್ತದೆ,’ ಎಂದು ಪ್ರಬಂಧದಲ್ಲಿ ಲೇಖಕರು ಬರೆದಿದ್ದಾರೆ.

‘ಚೀನಾ ಮೇಲ್ಭಾಗದ ಕ್ರಿಟೇಶಿಯಸ್‌ನಲ್ಲಿರುವ ಡೈನೋಸಾರ್ ಮೊಟ್ಟೆಗಳು ಭಾರಿ ಪ್ರಮಾಣ, ವಿಭಿನ್ನ ಬಗೆ ಮತ್ತು ವ್ಯಾಪಕ ಹಬ್ಬುವಿಕೆ ಮೂಲಕ ನಿರೂಪಿಸಲ್ಪಟ್ಟಿವೆ. ಸರಿ ಸುಮಾರು 16 ಓಫ್ಯಾಮಿಲಿಗಳು ಮತ್ತು 35 ಓಜೆನೆರಾಗಳು ಚೀನಾದಲ್ಲಿ ವರದಿಯಾಗಿವೆ” ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಷ್ಟು ಮಾತ್ರವಲ್ಲದೆ, ಹವಾಮಾನದ ಪ್ರಭಾವದಿಂದಾಗಿ, ಮೊಟ್ಟೆಯ ಚಿಪ್ಪುಗಳ ಹೊರಭಾಗ ಮತ್ತು ಅದಕ್ಕೆ ಅನುಗುಣವಾದ ಎರಡನೇ ಮೊಟ್ಟೆಯ ಚಿಪ್ಪಿನ ಯುನಿಟ್ ಗಳು ಹೊಸದಾಗಿ ಪತ್ತೆಯಾದ ಡೈನೋಸಾರ್ ಮೊಟ್ಟೆಗಳಲ್ಲಿ ಸಂರಕ್ಷಿಸಲ್ಪಟ್ಟಿಲ್ಲ ಎನ್ನುವುದನ್ನು ತಜ್ಞರು ವಿವರಿಸಿದ್ದಾರೆ.

ಪತ್ತೆಯಾಗಿರುವ ಮೊಟ್ಟೆಗಳಲ್ಲಿ ಒಂದು ಭಾಗಶಃ ಹಾನಿಗೊಳಗಾಗಿರುವುದರಿಂದ ಅದರಲ್ಲಿದ್ದ ಕ್ಯಾಲ್ಸೈಟ್ ಹರಳುಗಳ ಸಮೂಹ ಕಣ್ಣಿಗೆ ಬಿದ್ದಿವೆ. ಎರಡೂ ‘ಹೆಚ್ಚುಕಡಿಮೆ ಗೋಳಾಕಾರದ’, 4.1 ಇಂಚು ಮತ್ತು 5.3 ಇಂಚು ನಡುವಿನ ಉದ್ದ ಮತ್ತು 3.8 ಇಂಚು ಮತ್ತು 5.2 ಇಂಚುಗಳ ನಡುವಿನ ಅಗಲವನ್ನು ಹೊಂದಿದ್ದು, ಇವು ಗುಂಡುಕಲ್ಲಿನ ಗಾತ್ರದಷ್ಟಿವೆ.

ಸಂಶೋಧಕರ ಪ್ರಕಾರ, ಮೊಟ್ಟೆಗಳು ಶಿಕ್ಸಿಂಗೋಲಿಥಸ್ ಕಿಯಾನ್‌ಶಾನೆನ್ಸಿಸ್ ಎಂಬ ಹೊಸ ‘ಒಸ್ಪೆಸಿಸ್‘ ಅನ್ನು ಪ್ರತಿನಿಧಿಸುತ್ತವೆ. ಹೊಸದಾಗಿ ಪತ್ತೆಯಾದ ಮೊಟ್ಟೆಗಳು ಆರ್ನಿಥೋಪಾಡ್‌ಗಳಿಗೆ ಜಾತಿಗೆ ಸೇರಿದ, ಸಸ್ಯಗಳನ್ನು ಸೇವಿಸಿ ಬದುಕುತ್ತಿದ್ದ ಎರಡು ಪಾದಗಳ ಡೈನೋಸಾರ್ಗಳಿಗೆ ಸೇರಿವೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada