ದ್ವಿರೂಪದ ಬಸ್-ಟ್ರೈನ್ ಸಾರಿಗೆ ವಾಹನ ಸಂಚಾರಕ್ಕೆ ಬಿಡುವ ಮೂಲಕ ಹಿರಿಯ ಜೀವಗಳಿಗೂ ಜಪಾನ್ ಮಣೆ ಹಾಕಿರುವುದು ಶ್ಲಾಘನಾರ್ಹ.
ಅದರಲ್ಲೂ ಜಪಾನ್ನಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ, ಸಣ್ಣಪುಟ್ಟ ಊರುಗಳಲ್ಲಿ ಜನಸಂಖ್ಯೆಯೂ ಕಡಿಮೆಯಾಗುತ್ತಿದೆ. ಹಿರಿಯರ ಬಗ್ಗೆ ಅಪಾರ ಕಾಳಜಿ ವಹಿಸುವ ಜಪಾನ್ ಸರ್ಕಾರ, ತನ್ನ ಹಿರಿಯ ಜೀವಗಳಿಗೆ ಕೊಡುವ ಗೌರವ ಇದಾಗಿದೆ. ದೂರದ ಊರುಗಳಲ್ಲಿ ಹಿರಿಯರಿಗೆ ಊರುಗೋಲು ಆಗಲು ಈ ದ್ವಿ ಸಂಚಾರಿ ವಾಹನವನ್ನು ಬಿಡುಗಡೆ ಮಾಡಿದೆ. ಊರುಗಳಿಗೂ ಬಸ್ ರೂಪದಲ್ಲಿ ಈ ರೈಲು ಸಂಚರಿಸುತ್ತದೆ! ಜೊತೆಗೆ ರೈಲು ಮಾದರಿಯಲ್ಲಿ ಕಾರ್ಯನಿರ್ವಹಿಸಿ ಸುಸೂತ್ರ ಜನ ಸಂಚಾರಕ್ಕೆ ನೆರವಾಗಲಿದೆ. ಕರ್ನಾಟಕ-ಭಾರತ ಸೇರಿದಂತೆ ಅನೇಕ ಕಡೆ ವೃದ್ಧರು-ಅಸಹಾಯಕರು ಹಾಗಿರಲಿ, ಮಾಮೂಲಿ ಜನ ಸಂಚಾರಕ್ಕೇ ಬಸ್ ವ್ಯವಸ್ಥೆ ಇರುವುದಿಲ್ಲ. ಅಂತಹುದರಲ್ಲಿ ಹಿರಿಯ ಜೀವಗಳಿಗೂ ಜಪಾನ್ ಮಣೆ ಹಾಕಿರುವುದು ಶ್ಲಾಘನಾರ್ಹ.
ಈ ಬಸ್-ಟ್ರೈನ್ ಸಾರಿಗೆ ವಾಹನ (Bus Train Dual-Mode Vehicle) 21 ಮಂದಿಯನ್ನು ಕರೆದೊಯ್ಯಬಲ್ಲದು. ಗಂಟೆಗೆ 60 ಕಿ ಮೀ ವೇಗದಲ್ಲಿ ಸಂಚರಿಸುತ್ತದೆ. ಉತ್ತಮವಾಗಿರುವ ರಸ್ತೆಗಳ ಮೇಲೆ 100 ಕಿ ಮೀ ವೇಗವನ್ನೂ ಕ್ರಮಿಸಬಲ್ಲದು. ಇದರಲ್ಲಿ ಡೀಸೆಲ್ ಇಂಧನ ಬಳಕೆಯಾಗಲಿದೆ. ಜಪಾನ್ನ ದಕ್ಷಿಣ ಭಾಗದಲ್ಲಿರುವ ಶಿಕೋಕು ದ್ವೀಪ ಪ್ರದೇಶಗಳಲ್ಲಿ ಈ ವಾಹನಗಳು ಇಂದಿನಿಂದ ಸಂಚರಿಸಲಿವೆ.
CPI ಕುದುರೆ ಸವಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್|Police |TV9Kannada