‘ಮೋದಿ ವಿರುದ್ಧ CJPಯ ಪ್ರತಿಭಟನೆಗೆ ಅಮೆರಿಕಾದ ದಾನಿಗಳಿಂದ ಹಣಕಾಸಿನ ನೆರವು’: ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಕಾಕ್ರೋಚ್​​ ಜನತಾ ಪಾರ್ಟಿಗೆ ಅಮೆರಿಕದ ದಾನಿಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂದು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪಡೆದವರನ್ನು ಗುರುತಿಸಿ, ಅವರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆದು, ತಮ್ಮ ದೇಶಗಳಿಗೆ ಮರಳಿದ ಬಳಿಕ ರಾಜಕೀಯ ಚಳವಳಿಗಳನ್ನು ಆರಂಭಿಸಲು ಹಣಕಾಸು ಒದಗಿಸಲಾಗುತ್ತದೆ. ಹೀಗಾಗಿ CJP ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ಯುವ ಭಾರತೀಯರಿಗೆ ಆಕೆ ಕರೆ ನೀಡಿದ್ದಾರೆ.

ಮೋದಿ ವಿರುದ್ಧ CJPಯ ಪ್ರತಿಭಟನೆಗೆ ಅಮೆರಿಕಾದ ದಾನಿಗಳಿಂದ ಹಣಕಾಸಿನ ನೆರವು: ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ
ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಕರೆ

Updated on: Oct 14, 2026 | 5:01 PM

ವಾಷಿಂಗ್ಟನ್, ಅಕ್ಟೋಬರ್​​ 14: ಭಾರತದ ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್​​ ಜನತಾ ಪಾರ್ಟಿ (CJP) ವಿರುದ್ಧ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ ಮಾಡಿದ್ದು, ಮೋದಿ ಅವರನ್ನು ವಿರೋಧಿಸುವ ಅಮೆರಿಕ ಮೂಲದ ದಾನಿಗಳಿಂದ ಈ ಸಂಘಟನೆಗೆ ಹಣಕಾಸಿನ ನೆರವು ದೊರೆಯುತ್ತಿದೆ ಎಂದಿದ್ದಾರೆ. ಅಲ್ಲದೆ CJP ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಯುವ ಭಾರತೀಯರಿಗೆ ಕರೆ ನೀಡಿದ್ದಾರೆ. ಇದು ಮೌನವಾಗಿರುವ ಸಮಯವಲ್ಲ ಎಂದಿರುವ ಮೇರಿ ಮಿಲ್ಬೆನ್, ಯುವ ಭಾರತೀಯರು ಧ್ವನಿ ಎತ್ತಬೇಕು ಎಂದಿದ್ದಾರೆ.

ಗಾಯಕಿ ಮೇರಿ ಮಿಲ್ಬೆನ್ ಹೇಳಿದ್ದೇನು?

CJP ನಾಯಕ ಅಭಿಜೀತ್ ದೀಪ್ಕೆ ಮತ್ತು ಅವರ ಪಕ್ಷಕ್ಕೆ ಮೋದಿ ಹಾಗೂ ಅವರ ನಾಯಕತ್ವವನ್ನು ವಿರೋಧಿಸುವ ಅಮೆರಿಕದ ದಾನಿಗಳಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂದಿರುವ 41 ವರ್ಷದ ಗಾಯಕಿ ಮಿಲ್ಬೆನ್, ಎಕ್ಸ್​​ ಪೋಸ್ಟ್​​ನಲ್ಲಿಪ್ರಧಾನಿ ಮೋದಿ ಮತ್ತು ಅವರ ರಾಜಕೀಯ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ. ಯುವ ದೇಶಪ್ರೇಮಿಗಳೇ, ಭಯಪಡಬೇಡಿ. 25 ವರ್ಷಗಳಿಂದ ಸೇವೆ ಸಲ್ಲಿಸಿರುವ, ಅದರಲ್ಲಿ 12 ವರ್ಷ ಪ್ರಧಾನಿಯಾಗಿ ಕಾರ್ಯನಿರ್ವಹಿಸಿರುವ ಮತ್ತು ಸತತ ಮೂರು ಅವಧಿಗೆ ಆಯ್ಕೆಯಾಗಿರುವ ನಿಮ್ಮ ಪ್ರಧಾನಿ ನನ್ನ ದೇಶದಿಂದ ಬರುವ ಶಕ್ತಿಗಳಿಗೆ ಮಣಿಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾನರ್‌ಗಳು ಬೇರೆ, ಕಾರಣ ಒಂದೇ: ಜೈಲುಪಾಲಾದ ಸಿಜೆಪಿ ನಾಯಕರ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ, ಪ್ರತಿಭಟನಾ ಐಕ್ಯತೆಗೆ ಕರೆ

ವಿಶ್ವದಾದ್ಯಂತ ಸಂಪ್ರದಾಯವಾದಿ ನಾಯಕರನ್ನು ಗುರಿಯಾಗಿಸಿ ಅಮೆರಿಕದ ದಾನಿಗಳ ಗುಂಪೊಂದು ಕಾರ್ಯನಿರ್ವಹಿಸುತ್ತದೆ ಎಂದೂ ಮಿಲ್ಬೆನ್ ಆರೋಪಿಸಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪಡೆದವರನ್ನು ಗುರುತಿಸಿ, ಅವರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆದು, ತಮ್ಮ ದೇಶಗಳಿಗೆ ಮರಳಿದ ಬಳಿಕ ರಾಜಕೀಯ ಚಳವಳಿಗಳನ್ನು ಆರಂಭಿಸಲು ಹಣಕಾಸು ಒದಗಿಸಲಾಗುತ್ತದೆ. ಇಂತಹ ಪ್ರಯತ್ನಗಳು ಯಶಸ್ವಿಯಾಗದಿದ್ದರೂ, ಆಯಾ ದೇಶಗಳ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಪರಿಣಾಮ ಬೀರಿವೆ ಎಂದು ಅವರು ತಿಳಿಸಿದ್ದಾರೆ.

ಯಾರು ಈ ಮೇರಿ ಮಿಲ್ಬೆನ್ ?

ಮೇರಿ ಮಿಲ್ಬೆನ್ ಅಮೆರಿಕದ ಗಾಯಕಿ ಮತ್ತು ನಟಿಯಾಗಿದ್ದು, ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಗೂ ಭಕ್ತಿಗೀತೆ ಓಂ ಜೈ ಜಗದೀಶ್ ಹರೇ ಹಾಡುವ ಮೂಲಕ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾರತದ ರಾಷ್ಟ್ರಗೀತೆಯನ್ನೂ ಹಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:00 pm, Wed, 14 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us