ಹಮಾಸ್ನೊಂದಿಗೆ ಕದನ ವಿರಾಮ ಮಾತುಕತೆ ವಿಫಲ: ಗಾಜಾ ಮೇಲೆ ಇಸ್ರೇಲ್ ದಾಳಿ, 110 ಮಂದಿ ಸಾವು
ಹಮಾಸ್ ಭಯೋತ್ಪಾದಕರೊಂದಿಗಿನ ಗಾಜಾ ಕದನ ವಿರಾಮ ಮಾತುಕತೆ ವಿಫಲವಾದ ಕಾರಣ ಇಸ್ರೇಲ್ ಆಕ್ರೋಶಗೊಂಡಿದೆ. ಇಸ್ರೇಲ್ ಸೇನೆಯು ಗಾಜಾದ ಮೇಲೆ ವಿನಾಶಕಾರಿ ದಾಳಿಯನ್ನು ಪ್ರಾರಂಭಿಸಿದೆ. ಶನಿವಾರ ಗಾಜಾದಲ್ಲಿ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 110 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಅಲ್ಜಜೀರಾ ವರದಿ ಮಾಡಿದೆ. ಅದರಲ್ಲಿ 34 ಜನರು ದಕ್ಷಿಣ ರಫಾದಲ್ಲಿ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಗಾಜಾ ಹ್ಯುಮನಿಟೇರಿಯನ್ ಫೌಂಡೇಷನ್ (GHF) ಹೊರಗೆ ಆಹಾರ ಸಹಾಯಕ್ಕಾಗಿ ಕಾಯುತ್ತಿದ್ದರು. ಇಸ್ರೇಲ್ ಸೈನ್ಯವು ಯಾವುದೇ ಎಚ್ಚರಿಕೆ ನೀಡದೆ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಮಾಸ್ ಭಯೋತ್ಪಾದಕರೊಂದಿಗಿನ ಗಾಜಾ ಕದನ ವಿರಾಮ ಮಾತುಕತೆ ವಿಫಲವಾದ ಕಾರಣ ಇಸ್ರೇಲ್(Israel) ಆಕ್ರೋಶಗೊಂಡಿದೆ. ಇಸ್ರೇಲ್ ಸೇನೆಯು ಗಾಜಾದ ಮೇಲೆ ವಿನಾಶಕಾರಿ ದಾಳಿಯನ್ನು ಪ್ರಾರಂಭಿಸಿದೆ. ಶನಿವಾರ ಗಾಜಾದಲ್ಲಿ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 110 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಅಲ್ಜಜೀರಾ ವರದಿ ಮಾಡಿದೆ.
ಅದರಲ್ಲಿ 34 ಜನರು ದಕ್ಷಿಣ ರಫಾದಲ್ಲಿ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಗಾಜಾ ಹ್ಯುಮನಿಟೇರಿಯನ್ ಫೌಂಡೇಷನ್ (GHF) ಹೊರಗೆ ಆಹಾರ ಸಹಾಯಕ್ಕಾಗಿ ಕಾಯುತ್ತಿದ್ದರು. ಇಸ್ರೇಲ್ ಸೈನ್ಯವು ಯಾವುದೇ ಎಚ್ಚರಿಕೆ ನೀಡದೆ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಮೆರಿಕ, ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಪ್ರಯತ್ನಗಳು ವಿಫಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಇಸ್ರೇಲ್ ಸೈನ್ಯವು ಮೊದಲಿಗಿಂತ ಹೆಚ್ಚು ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಿದೆ.
ಗಾಜಾದ ಸಂಪೂರ್ಣ ಜನಸಂಖ್ಯೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಇಸ್ರೇಲ್ ಯೋಜಿಸಿದೆ. ಹಮಾಸ್ ಮತ್ತು ಪ್ಯಾಲೆಸ್ಟೀನಿಯನ್ನರು ಇಸ್ರೇಲ್ ಅನ್ನು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ, ಇದು ಬಲವಂತದ ಸ್ಥಳಾಂತರದ ಪ್ರಯತ್ನ ಎಂದು ಕರೆದಿದ್ದಾರೆ.
ರಫಾದ ಅಲ್-ಶಕೌಶ್ ಪ್ರದೇಶದಲ್ಲಿ ದಾಳಿಯಲ್ಲಿ ಜೀವ ಉಳಿಸಿಕೊಂಡವರು ಮತ್ತು ಪ್ರತ್ಯಕ್ಷದರ್ಶಿಗಳು ಇಸ್ರೇಲಿ ಪಡೆಗಳು ಗಾಜಾ ನೆರವು ಕೇಂದ್ರದ ಮುಂದೆ ಜನಸಮೂಹದ ಮೇಲೆ ನೇರವಾಗಿ ಗುಂಡು ಹಾರಿಸಿದೆ ಎಂದು ಹೇಳಿದ್ದಾರೆ. ಅಲ್ಲಿ ರಕ್ತದ ಕೋಡಿಯೇ ಹರಿದಿದೆ.\
ಮತ್ತಷ್ಟು ಓದಿ: ಇಸ್ರೇಲಿ ಮಹಿಳೆಯರ ಮೃತದೇಹಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಗಳಿಗೆ ಗುಂಡೇಟು, ಹಮಾಸ್ ಉಗ್ರರ ಕ್ರೂರ ಮುಖ
ಇತ್ತೀಚೆಗಷ್ಟೇ, ಹಮಾಸ್(Hamas) ಉಗ್ರರು ಉತ್ತೆಯಾಳಾಗಿರಿಸಿಕೊಂಡಿದ್ದ ಜನರನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು ಎನ್ನುವ ವಿಚಾರ ಬಹಿರಂಗಗೊಂಡಿತ್ತು. ಹಮಾಸ್ ಉಗ್ರರು ಇಸ್ರೇಲಿ ಮಹಳೆಯರ ಮೃತದೇಹಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿಗುತ್ತಿದ್ದರು, ಖಾಸಗಿ ಭಾಗಗಳಿಗೆ ಗುಂಡು ಹಾರಿಸುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಇಸ್ರೇಲ್ ಮತ್ತು ಹಮಾಸ್ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ರಕ್ತಸಿಕ್ತ ದಾಳಿಯ ನಂತರ ಪ್ರಾರಂಭವಾದ ಈ ಹೋರಾಟ ಇರಾನ್ ತಲುಪಿದೆ.ಇಲ್ಲಿಯವರೆಗೆ ಎರಡೂ ಕಡೆಯಿಂದ ಸಾವಿರಾರು ಜನರು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರ ದಾಳಿಯ ಬಗ್ಗೆ ಇಸ್ರೇಲಿ ಪ್ರತ್ಯಕ್ಷದರ್ಶಿಗಳು ಈಗ ಹಮಾಸ್‌ನ ಕ್ರೌರ್ಯದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




