Greta Thunberg: ಆಹಾರ ಉತ್ಪಾದನೆ ಹಾಗೂ ಸ್ವೀಕರಿಸುವ ವಿಧಾನದಲ್ಲಿ ಬದಲಾವಣೆ ಅಗತ್ಯ: ಗ್ರೇಟಾ ಥನ್ಬರ್ಗ್
ವಾತಾವರಣ, ಪರಿಸರ ಹಾಗೂ ಆರೋಗ್ಯ ಸಮಸ್ಯೆಗಳು ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಕೊವಿಡ್-19, ಎಬೋಲಾ, ವೆಸ್ಟ್ ನೈಲ್ ಫಿವರ್, ಸಾರ್ಸ್, ಮರ್ಸ್, ಹೆಚ್ಐವಿ-ಏಡ್ಸ್ನಂತಹ ವೈರಾಣುವಿನಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ.
ಸ್ವೀಡನ್: ಜಗತ್ತಿನಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಿದೆ. ವಾತಾವರಣ, ಪರಿಸರ ತೊಂದರೆಗೆ ಒಳಗಾಗುತ್ತಿದೆ. ಆರೋಗ್ಯ ಸಮಸ್ಯೆಗಳು ತಲೆದೋರುತ್ತಿದೆ. ಹೀಗಾಗಿ ಆಹಾರ ಉತ್ಪಾದನೆ ಮತ್ತು ಸ್ವೀಕರಿಸುವ ವಿಧಾನದಲ್ಲಿ ಬದಲಾವಣೆ ಆಗಬೇಕು ಎಂದು ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಶನಿವಾರ ತಿಳಿಸಿದ್ದಾರೆ.
ವಾತಾವರಣ, ಪರಿಸರ ಹಾಗೂ ಆರೋಗ್ಯ ಸಮಸ್ಯೆಗಳು ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಕೊವಿಡ್-19, ಎಬೋಲಾ, ವೆಸ್ಟ್ ನೈಲ್ ಫಿವರ್, ಸಾರ್ಸ್, ಮರ್ಸ್, ಹೆಚ್ಐವಿ-ಏಡ್ಸ್ನಂತಹ ವೈರಾಣುವಿನಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ಜೀವವೈವಿಧ್ಯ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ಒಂದರಲ್ಲಿ ಥನ್ಬರ್ಗ್ ಹೇಳಿದ್ದಾರೆ.
ನಾವು ಬೆಳೆ ಬೆಳೆಯುತ್ತಿರುವ ಕ್ರಮ, ಕಾಡು ಕಡಿದು, ಜೀವವಿಧಾನ ನಾಶ ಮಾಡುತ್ತಿರುವುದು ಇತ್ಯಾದಿಗಳಿಂದ ಪ್ರಾಣಿಗಳಿಂದ ಪ್ರಾಣಿಗೆ ಹಾಗೂ ಮನುಷ್ಯರಿಗೆ ರೋಗ ಹರಡಲು ಕಾರಣವಾಗುತ್ತಿದ್ದೇವೆ ಎಂದು 18 ವರ್ಷ ವಯಸ್ಸಿನ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನಾ ವೈರಾಣು ಕೂಡ ಪ್ರಾಣಿಯಿಂದ ಮಾನವರಿಗೆ ಹರಡಿರುವ ಸಾಧ್ಯತೆ ದಟ್ಟವಾಗಿದೆ. ಈಗಿರುವ ಕ್ರಮದಂತೆಯೇ ಮುಂದುವರಿದರೆ ಜೀವವೈವಿದ್ಯವನ್ನು ಹಾಳುಗೆಡಹುತ್ತಾ, ವಿವಿಧ ಸಸ್ಯ, ಪ್ರಾಣಿ ಸಂಕುಲ ನಾಶ ಮಾಡುತ್ತಾ ಹೋಗಲಿದ್ದೇವೆ ಎಂದು ಗ್ರೇಟಾ ಹೇಳಿದ್ದಾರೆ.
ಅವುಗಳೆಲ್ಲಾ ನಮ್ಮ ಜೀವನಕ್ಕೆ ಅಗತ್ಯವಾದ ವ್ಯವಸ್ಥೆಯಾಗಿದೆ. ನಾವು ಅವುಗಳನ್ನು ಕಳೆದುಕೊಂಡರೆ ನಮ್ಮನ್ನು ನಾವು ಕೂಡ ಕಳೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ಧಾರೆ. ವಾತಾವರಣದ ಬಗ್ಗೆಯೂ ಮಾತನಾಡಿ, ಅನಿಲ ಸೂಸುವಿಕೆ ಪ್ರಮಾಣ ಕಡಿಮೆ ಮಾಡುವಂತೆಯೂ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ
Karnataka Covid Update: ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ; ಕರ್ನಾಟಕದಲ್ಲಿ ಇಂದು 25,979 ಜನರಿಗೆ ಸೋಂಕು
Published On - 8:20 pm, Sun, 23 May 21