ಒಂದೇ ವರ್ಷದಲ್ಲಿ ಬಲಾಢ್ಯ ಇಸ್ರೇಲ್​ಗೆ ಎದುರಾಗಲಿದೆ ಮತ್ತೊಂದು ಕಂಟಕ!

ಜೆರುಸಲೆಂ/ಟೆಲ್​ ಅವೀವ್: ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಮಾರ್ಪಡುತ್ತಿರುವ ಇಸ್ರೇಲ್ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತ್ರಿಶಂಕು ಸ್ಥಿತಿ ತಲುಪಿದೆ. ಹಿಂದಿನ ಪ್ರಧಾನಿ ಬೆಂಝಮಿನ್​ ನೆತನ್ಯಾಹು ಅವರಾಗಲಿ ಅಥವಾ ಪ್ರಮುಖ ಪ್ರತಿಪಕ್ಷವಾದ ಬ್ಲ್ಯೂ ಅಂಟ್​ ವೈಟ್​ ಪಕ್ಷವಾಗಲಿ ಅಧಿಕಾರದ ಪೀಠಕ್ಕೆ ಹತ್ತಿರವಾಗಿ, ರಾಷ್ಟ್ರದ ಚುಕ್ಕಾಣಿ ಹಿಡಿಯುವಲ್ಲಿ ಮುಗ್ಗರಿಸಿದೆ. ಹೀಗಾಗಿ ಒಂದೇ ವರ್ಷದಲ್ಲಿ ಇಸ್ರೇಲ್ ಮೂರನೆಯ ಬಾರಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್​ 17 ರಂದು ನಡೆದು ಸಂಸದೀಯ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಕಂಡುಬಂದಿದೆ. ಪರಿಸ್ಥಿತಿ ನಿಭಾಯಿಸಲು ಅಧ್ಯಕ್ಷ […]

ಒಂದೇ ವರ್ಷದಲ್ಲಿ ಬಲಾಢ್ಯ ಇಸ್ರೇಲ್​ಗೆ ಎದುರಾಗಲಿದೆ ಮತ್ತೊಂದು ಕಂಟಕ!
Follow us
ಸಾಧು ಶ್ರೀನಾಥ್​
|

Updated on:Oct 28, 2019 | 12:17 PM

ಜೆರುಸಲೆಂ/ಟೆಲ್​ ಅವೀವ್: ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಮಾರ್ಪಡುತ್ತಿರುವ ಇಸ್ರೇಲ್ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತ್ರಿಶಂಕು ಸ್ಥಿತಿ ತಲುಪಿದೆ. ಹಿಂದಿನ ಪ್ರಧಾನಿ ಬೆಂಝಮಿನ್​ ನೆತನ್ಯಾಹು ಅವರಾಗಲಿ ಅಥವಾ ಪ್ರಮುಖ ಪ್ರತಿಪಕ್ಷವಾದ ಬ್ಲ್ಯೂ ಅಂಟ್​ ವೈಟ್​ ಪಕ್ಷವಾಗಲಿ ಅಧಿಕಾರದ ಪೀಠಕ್ಕೆ ಹತ್ತಿರವಾಗಿ, ರಾಷ್ಟ್ರದ ಚುಕ್ಕಾಣಿ ಹಿಡಿಯುವಲ್ಲಿ ಮುಗ್ಗರಿಸಿದೆ. ಹೀಗಾಗಿ ಒಂದೇ ವರ್ಷದಲ್ಲಿ ಇಸ್ರೇಲ್ ಮೂರನೆಯ ಬಾರಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ.

ಸೆಪ್ಟೆಂಬರ್​ 17 ರಂದು ನಡೆದು ಸಂಸದೀಯ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಕಂಡುಬಂದಿದೆ. ಪರಿಸ್ಥಿತಿ ನಿಭಾಯಿಸಲು ಅಧ್ಯಕ್ಷ ರುವೆನ್​ ರವ್ಲೀನ್​ ಅವರು ಸರ್ಕಾರ ರಚಿಸುವುದಕ್ಕೆ 28 ದಿನಗಳ ಗಡುವು ವಿಧಿಸಿ, ನೆತನ್ಯಾಹುಗೆ ಆಹ್ವಾನ ನೀಡಿದ್ದರು. ಆ ಗಡುವು ಮುಗಿಯುತ್ತಾ ಬಂದಿದ್ದು, ನೆತನ್ಯಾಹು ಸುಗಮವಾಗಿ ಅಧಿಕಾರಕ್ಕೆ ಬರಲು ತೊಡಕಾಗಿದೆ.

ಸರ್ಕಾರ ರಚನೆಗೆ 120 ಸದಸ್ಯ ಬಲದ ಸಂಸತ್ತಿನಲ್ಲಿ ಮ್ಯಾಜಿಕ್​ ನಂಬರ್​ 61 ಆಗಿದೆ. ಬ್ಲ್ಯೂ ಅಂಟ್​ ವೈಟ್​ ಪಕ್ಷದ ಮಾಜಿ ಸೇನಾಧಿಕಾರಿ ಬೆನ್ನಿ ಗಂಝ್​ ಅವರಿಗೆ 54 ಸದಸ್ಯರ ಬೆಂಬಲ ಇದೆ. ಅದೇ ನೆತನ್ಯಾಹು ಪಕ್ಷಕ್ಕೆ 56 ಸದಸ್ಯರ ಬೆಂಬಲವಿದೆ. ಹಾಗಾಗಿ, ಅಧ್ಯಕ್ಷ ರುವೆನ್ ನೆತನ್ಯಾಹುಗೆ ಸರ್ಕಾರ ರಚನೆಗೆ ಸೂಚಿಸಿದ್ದರು.

ಆದ್ರೆ ಸರ್ಕಾರ ರಚನೆ ನಿಟ್ಟಿನಲ್ಲಿ ನೆತನ್ಯಾಹು, ಬೆನ್ನಿ ಗಂಝ್ ಬೆಂಬಲ ಗಳಿಸಲು ಯತ್ನಿಸಿದರಾದರೂ ಇದುವರೆಗೂ ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ಬೆನ್ನಿ ಗಂಝ್, ನೆತನ್ಯಾಹು ಜೊತೆ ಕೈಜೋಡಿಸಲು ಸುತರಾಂ ಒಪ್ಪಿಲ್ಲ. ಹಾಗಾಗಿ ಅನಿವಾರ್ಯವಾಗಿ ಇಸ್ರೇಲ್​ ಒಂದೇ ವರ್ಷದಲ್ಲಿ ಮೂರನೆಯ ಬಾರಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಿಸುವಂತಾಗಿದೆ.

Published On - 4:48 pm, Wed, 23 October 19

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!