AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಕಾನೂನಿಗೆ ವಿಧೇಯನಾಗಿರುವ ನಾಗರಿಕ..ಆಂಟಿಗುವಾಕ್ಕೆ ಹೋಗಲು ಅವಕಾಶ ಕೊಡಿ’-ಡೊಮಿನಿಕಾ ಹೈಕೋರ್ಟ್​​ಗೆ ಚೋಕ್ಸಿ ಮನವಿ

2018ರವರೆಗೂ ಭಾರತದಲ್ಲಿ ತನಿಖಾದಳಗಳು ನನ್ನ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. 2018ರಲ್ಲಿ ನಾನು ವೈದ್ಯಕೀಯ ಚಿಕಿತ್ಸೆಗಾಗಿ ಭಾರತದಿಂದ ಅಮೆರಿಕಕ್ಕೆ ಹೋದೆ ಎಂದು ಮೆಹುಲ್​ ಚೋಕ್ಸಿ ಅಫಿಡವಿಟ್​​ನಲ್ಲಿ ಹೇಳಿಕೊಂಡಿದ್ದಾರೆ.

‘ನಾನು ಕಾನೂನಿಗೆ ವಿಧೇಯನಾಗಿರುವ ನಾಗರಿಕ..ಆಂಟಿಗುವಾಕ್ಕೆ ಹೋಗಲು ಅವಕಾಶ ಕೊಡಿ’-ಡೊಮಿನಿಕಾ ಹೈಕೋರ್ಟ್​​ಗೆ ಚೋಕ್ಸಿ ಮನವಿ
ಮೆಹುಲ್ ಚೋಕ್ಸಿ
TV9 Web
| Edited By: |

Updated on: Jun 07, 2021 | 9:13 AM

Share

ಪಂಜಾಬ್ ನ್ಯಾಷನಲ್​ ಬ್ಯಾಂಕ್​ ಹಗರಣದಲ್ಲಿ ಆರೋಪಿಯಾಗಿರುವ ಮೆಹುಲ್​ ಚೋಕ್ಸಿ ಡೊಮಿನಿಕಾ ಕೋರ್ಟ್​​ಗೆ ಅಫಿಡವಿಟ್​ ಸಲ್ಲಿಸಿದ್ದು, ನಾನು ಡೊಮಿನಿಕಾದಿಂದ ಎಲ್ಲಿಯೂ ತಪ್ಪಿಸಿಕೊಂಡು ಹೋಗುವುದಿಲ್ಲ. ನಾನು ಕಾನೂನನ್ನು ಸರಿಯಾಗಿ ಪರಿಪಾಲನೆ ಮಾಡುವ ನಾಗರಿಕ ಎಂದು ಹೇಳಿದ್ದಾರೆ. ಹಾಗೇ, ತಮಗೆ ಆಂಟಿಗುವಾಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​​ನಲ್ಲಿ ಉಲ್ಲೇಖಿಸಿದ್ದಾರೆ. ಮೆಹುಲ್​ ಚೋಕ್ಸಿ ಓರ್ವ ವಜ್ರದ ವ್ಯಾಪಾರಿ. ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣದ ಬಳಿಕ ಭಾರತದಿಂದ ಬಂದು ಆಂಟಿಗುವಾದಲ್ಲೇ ವಾಸವಾಗಿದ್ದರು. ಇಲ್ಲಿನ ಪೌರತ್ವವನ್ನೂ ಪಡೆದಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಡೊಮಿನಿಕಾವನ್ನು ಪ್ರವೇಶಿಸಿ, ಅಲ್ಲಿ ಅರೆಸ್ಟ್​ ಆಗಿದ್ದರು. ಡೊಮಿನಿಕಾವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಇಲ್ಲಿನ ಆಡಳಿತ ಹೇಳುತ್ತಿದೆ. ಆದರೆ ಮೆಹುಲ್​ ಚೋಕ್ಸಿ, ತಾನು ಅಕ್ರಮವಾಗಿ ಪ್ರವೇಶಿಸಿದ್ದಲ್ಲ, ನನ್ನನ್ನು ಕಿಡ್ನ್ಯಾಪ್​ ಮಾಡಲಾಗಿದೆ ಎಂದು ಕೋರ್ಟ್​ಗೆ ಹೇಳಿದ್ದಾರೆ. ಇದೊಂದು ಹನಿಟ್ರ್ಯಾಪ್​ ಎಂದು ಚೋಕ್ಸಿ ಪರ ವಕೀಲರು ಕೋರ್ಟ್​​ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಡೊಮಿನಿಕಾ ಮ್ಯಾಜಿಸ್ಟ್ರೇಟ್​ ಕೋರ್ಟ್​​ ಚೋಕ್ಸಿಯವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಪ್ರಕರಣ ಅಲ್ಲಿನ ಹೈಕೋರ್ಟ್​ ಮೆಟ್ಟಿಲೇರಿದೆ. ಹೈಕೋರ್ಟ್​​ಗೆ ಅಫಿಡವಿಟ್​ ಸಲ್ಲಿಸಿದ ಚೋಕ್ಸಿ, ತಮಗೆ ಆಂಟಿಗುವಾಕ್ಕೆ ಹೋಗಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಪಿಎನ್​​ಬಿ ಹಗರಣದ ಬಗ್ಗೆ ನನ್ನನ್ನು ವಿಚಾರಣೆ ಮಾಡಲು ಭಾರತದ ತನಿಖಾ ದಳಗಳನ್ನು ಇಲ್ಲಿಗೇ ಆಹ್ವಾನಿಸಿದ್ದೇನೆ ಎಂದೂ ಹೇಳಿಕೊಂಡಿದ್ದರು.

2018ರವರೆಗೂ ಭಾರತದಲ್ಲಿ ತನಿಖಾದಳಗಳು ನನ್ನ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. 2018ರಲ್ಲಿ ನಾನು ವೈದ್ಯಕೀಯ ಚಿಕಿತ್ಸೆಗಾಗಿ ಭಾರತದಿಂದ ಅಮೆರಿಕಕ್ಕೆ ಹೋದೆ ಎಂದು ಅಫಿಡವಿಟ್​​ನಲ್ಲಿ ಹೇಳಿಕೊಂಡಿದ್ದಾರೆ. 2018ರ ಮೇ ತಿಂಗಳಲ್ಲಿ ಚೋಕ್ಸಿ ಯುಎಸ್​​ನಿಂದ ಆಂಟಿಗುವಾಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಆದ ಬಳಿಕವಷ್ಟೇ ಸಿಬಿಐ ಮೆಹುಲ್​ ಚೋಕ್ಸಿ ವಿರುದ್ಧ ಕೇಸ್​ ದಾಖಲಿಸಿದ್ದು. ಅದಾದ ಬಳಿಕ 2019ರಲ್ಲಿ ಚೋಕ್ಸಿ ಬಾಂಬೆ ಹೈಕೋರ್ಟ್​​ಗೆ ಕೂಡ ಅಫಿಡವಿಟ್​ ಸಲ್ಲಿಸಿದ್ದರು. ಈಗ ಡೊಮಿನಿಕಾ ಹೈಕೋರ್ಟ್​​ಗೆ ಸಲ್ಲಿಸಿರುವ ಅಫಿಡವಿಟ್​​​ನಲ್ಲಿರುವ ಅಂಶಗಳೇ ಅದರಲ್ಲೂ ಇವೆ.

ಇದನ್ನೂ ಓದಿ: ಯಶ್​ ಕೋಟ್ಯಂತರ ರೂಪಾಯಿ ಹಂಚಿದ ಬೆನ್ನಲ್ಲೇ ರಾಧಿಕಾ ಪಂಡಿತ್​ ಕಡೆಯಿಂದ ಬಂತು ಭರವಸೆಯ ಮಾತು

I am Law abiding citizen told by Fugitive tycoon Mehul Choksi to Dominica High court

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ