ಉಗ್ರರ ಜತೆ ಪಾಕ್ ಸೇನಾ ವಕ್ತಾರ ಪೋಸ್, ಮತ್ತೆ ಜಗಜ್ಜಾಹೀರಾಯ್ತು ಪಾಕ್​ ಅಸಲಿ ಮುಖ

ಉಗ್ರರ ಜತೆ ಪಾಕ್ ಸೇನಾ ವಕ್ತಾರ ಪೋಸ್, ಮತ್ತೆ ಜಗಜ್ಜಾಹೀರಾಯ್ತು ಪಾಕ್​ ಅಸಲಿ ಮುಖ

ಪಾಕಿಸ್ತಾನಕ್ಕೆ ಭಾರತದ ನೆಮ್ಮದಿ ಹಾಳು ಮಾಡೋದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಅಂತಾ ಕಾಣುತ್ತೆ. ಈ ವಿಷಯ ಪದೇ ಪದೆ ಪ್ರೂವ್ ಆಗ್ತಿದೆ ಕೂಡ. ಇದೀಗ ಭಾರತದ ವಿರುದ್ಧ ಹಗೆ ಸಾಧಿಸಲು ಪಾಕ್ ಸೇನಾಧಿಕಾರಿಗಳು ಉಗ್ರರ ಜೊತೆಗೂ ಕೈಜೋಡಿಸಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ರಣಹೇಡಿ ಪಾಕಿಸ್ತಾನ ಸರ್ಕಾರಕ್ಕೆ ಭಾರತವನ್ನ ನೇರಾನೇರ ಫೇಸ್ ಮಾಡೋಕೆ ತಾಕತ್ ಇಲ್ಲ. ಈ ಕಾರಣಕ್ಕೆ ಹಿಂಬಾಗಿಲ ಮೂಲಕ ಭಾರತದ ವಿರುದ್ಧ ಹಗೆ ಸಾಧಿಸಲು ಪದೇ ಪದೆ ಪ್ರಯತ್ನಿಸ್ತಾನೆ ಇರುತ್ತೆ. ಅದ್ರಲ್ಲೂ, ಗಡಿಯಲ್ಲಿ […]

sadhu srinath

|

Dec 30, 2019 | 7:33 AM

ಪಾಕಿಸ್ತಾನಕ್ಕೆ ಭಾರತದ ನೆಮ್ಮದಿ ಹಾಳು ಮಾಡೋದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಅಂತಾ ಕಾಣುತ್ತೆ. ಈ ವಿಷಯ ಪದೇ ಪದೆ ಪ್ರೂವ್ ಆಗ್ತಿದೆ ಕೂಡ. ಇದೀಗ ಭಾರತದ ವಿರುದ್ಧ ಹಗೆ ಸಾಧಿಸಲು ಪಾಕ್ ಸೇನಾಧಿಕಾರಿಗಳು ಉಗ್ರರ ಜೊತೆಗೂ ಕೈಜೋಡಿಸಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ರಣಹೇಡಿ ಪಾಕಿಸ್ತಾನ ಸರ್ಕಾರಕ್ಕೆ ಭಾರತವನ್ನ ನೇರಾನೇರ ಫೇಸ್ ಮಾಡೋಕೆ ತಾಕತ್ ಇಲ್ಲ. ಈ ಕಾರಣಕ್ಕೆ ಹಿಂಬಾಗಿಲ ಮೂಲಕ ಭಾರತದ ವಿರುದ್ಧ ಹಗೆ ಸಾಧಿಸಲು ಪದೇ ಪದೆ ಪ್ರಯತ್ನಿಸ್ತಾನೆ ಇರುತ್ತೆ. ಅದ್ರಲ್ಲೂ, ಗಡಿಯಲ್ಲಿ ಚಳಿ ಹಾಗೂ ಹಿಮದ ಆರ್ಭಟ ಹೆಚ್ಚಾಗಿರುವ ಇಂತಹ ಸಂದರ್ಭವನ್ನೇ ಬಳಸಿಕೊಂಡು ಉಗ್ರರನ್ನ ಒಳ ನುಸುಳುವಂತೆ ಮಾಡಲು ಭಾರಿ ಸರ್ಕಸ್ ಮಾಡ್ತಿದೆ. ಮತ್ತೊಂದ್ಕಡೆ ಪಾಕ್ ಸೇನಾಧಿಕಾರಿಗಳು ಉಗ್ರ ಸಂಘಟನೆಗಳ ಸದಸ್ಯರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಭಾರಿ ಅನುಮಾನ ಮೂಡಿಸಿದೆ.

ಉಗ್ರರ ಜೊತೆ ಪೋಸ್ ಕೊಟ್ಟ ಪಾಕ್ ಸೇನಾ ವಕ್ತಾರ..! ಕುಖ್ಯಾತ ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಆಶ್ರಯ ಕಲ್ಪಿಸುತ್ತಿರುವ ಪಾಕ್​ಗೆ ವಿಶ್ವಸಂಸ್ಥೆ ಸೇರಿದಂತೆ ಪ್ರಪಂಚದ ನಾನಾ ದೇಶಗಳು ಛೀಮಾರಿ ಹಾಕಿಯಾಗಿದೆ. ಆದ್ರೂ ತನ್ನ ಬುದ್ಧಿ ಬದಲಿಸಿಕೊಳ್ಳದ ಪಾಪಿಗಳು, ಮೊಂಡುತನ ಮುಂದುವರಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಪಾಕ್ ಸೇನೆ ವಕ್ತಾರ ಆಸೀಫ್ ಗಫೂರ್, ಜೈಷ್-ಎ-ಮಹಮದ್ ಜೊತೆ ಆಪ್ತ ಸಂಬಂಧ ಹೊಂದಿರುವುದು ಬಟಾಬಯಲಾಗಿದೆ. ಕರಾಚಿಯಲ್ಲಿನ ಜಾಮಿಯಾ ರಶಿದಿಯಾ ಮದರಸಾಗೆ ಇತ್ತೀಚೆಗೆ ಭೇಟಿ ನೀಡಿದ್ದ ಆಸೀಫ್‍ ಕುಖ್ಯಾತ ಉಗ್ರರೊಂದಿಗಿರುವ ಫೋಟೋಗಳು ವೈರಲ್ ಆಗಿವೆ. ಹೀಗೆ ಮದರಸಾಗೆ ಭೇಟಿ ನೀಡಿದ್ದ ಗಫೂರ್​ಗೆ ಉಗ್ರರಿಂದ ಭವ್ಯ ಸ್ವಾಗತವೂ ಸಿಕ್ಕಿದೆ.

ಒಂದೆಡೆ ಉಗ್ರಗಾಮಿ ಸಂಘಟನೆಗಳು, ಮತ್ತೊಂದೆಡೆ ಭಯೋತ್ಪಾದಕರಿಗೆ ಪಾಕಿಸ್ತಾನಿ ಸೇನೆಯ ನೇರ ನೆರವು ಹಾಗೂ ಖಲೀಸ್ತಾನಿ ಉಗ್ರರು ಭಾರತದ ಮೇಲೆ ವಕ್ರದೃಷ್ಟಿ ಬೀರಿರುವ ಕಾರಣ ಭದ್ರತಾಪಡೆಗಳು ಕಟ್ಟೆಚ್ಚರ ವಹಿಸಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಮತ್ತೊಂದ್ಕಡೆ ಭಾರತದ ನೌಕಾದಳ, 24 ಸಬ್​ಮರೀನ್​ಗಳನ್ನು ಅಭಿವೃದ್ಧಿಪಡಿಸಲು ಪ್ಲ್ಯಾನ್ ರೂಪಿಸಿದೆ. 24 ಸಬ್​ಮರೀನ್​ಗಳ ಪೈಕಿ 6 ಜಲಾಂತರ್ಗಾಮಿಗಳು ನ್ಯೂಕ್ಲಿಯರ್ ಸಾಮರ್ಥ್ಯ ಹೊಂದಿರಲಿವೆ ಅಂತಾ ನೌಕಾದಳದ ಮೂಲಗಳು ತಿಳಿಸಿವೆ.

ಒಟ್ನಲ್ಲಿ ದಿವಾಳಿಯಾದರೂ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ತನ್ನ ದೇಶದ ಪ್ರಜೆಗಳು ತೀವ್ರ ಸಂಕಷ್ಟದಲ್ಲಿದ್ದರೆ ಪಾಕ್ ಸರ್ಕಾರ ಮಾತ್ರ ಈ ರೀತಿಯ ಕುತಂತ್ರಗಳನ್ನ ಹೆಣೆಯುತ್ತಿದೆ. ಆ ಮೂಲಕ ಭಾರತದ ಮೇಲೆ ಹಗೆ ತೀರಿಸಿಕೊಳ್ಳಲು ಪಾಪಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಭಾರತೀಯ ಸೇನೆಯ ಶಕ್ತಿಯ ಮುಂದೆ ಇದೆಲ್ಲಾ ಠುಸ್ ಪಟಾಕಿ ಆಗೋದು ಗ್ಯಾರಂಟಿ.

Follow us on

Related Stories

Most Read Stories

Click on your DTH Provider to Add TV9 Kannada