ಈ ಸಹಾಯವನ್ನು ನಾವು ಎಂದೂ ಮರೆಯುವುದಿಲ್ಲ, ಭಾರತಕ್ಕೆ ಧನ್ಯವಾದ ತಿಳಿಸಿದ ಜಮೈಕಾ ಹಾಗೂ ಕ್ಯೂಬಾ
ಮೆಲಿಸ್ಸಾ ಚಂಡಮಾರುತವು ಕೆರಿಬಿಯನ್ನಲ್ಲಿ ಭಾರಿ ವಿನಾಶವನ್ನುಂಟುಮಾಡಿತ್ತು. ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಕಷ್ಟದ ಸಮಯದಲ್ಲಿ ಭಾರತ ಸ್ನೇಹದ ಹಸ್ತವನ್ನು ಚಾಚಿದೆ, ಕ್ಯೂಬಾ ಮತ್ತು ಜಮೈಕಾ ಭಾರತಕ್ಕೆ ಧನ್ಯವಾದ ತಿಳಿಸಿವೆ. ಎರಡೂ ದೇಶಗಳು ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿವೆ. ಭಾರತವು ಅಗತ್ಯ ಔಷಧಿಗಳು, ಜನರೇಟರ್‌ಗಳು, ಟೆಂಟ್‌ಗಳು, ಹಾಸಿಗೆ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ.

ಕಿಂಗ್ಸ್ಟನ್, ನವೆಂಬರ್ 08: ಮೆಲಿಸ್ಸಾ ಚಂಡಮಾರುತವು ಕೆರಿಬಿಯನ್ನಲ್ಲಿ ಭಾರಿ ವಿನಾಶವನ್ನುಂಟುಮಾಡಿತ್ತು. ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಕಷ್ಟದ ಸಮಯದಲ್ಲಿ ಭಾರತ ಸ್ನೇಹದ ಹಸ್ತವನ್ನು ಚಾಚಿದೆ, ಕ್ಯೂಬಾ ಮತ್ತು ಜಮೈಕಾ ಭಾರತಕ್ಕೆ ಧನ್ಯವಾದ ತಿಳಿಸಿವೆ. ಎರಡೂ ದೇಶಗಳು ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿವೆ. ಭಾರತವು ಅಗತ್ಯ ಔಷಧಿಗಳು, ಜನರೇಟರ್‌ಗಳು, ಟೆಂಟ್‌ಗಳು, ಹಾಸಿಗೆ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ.
ಕಳೆದ 150 ವರ್ಷಗಳಲ್ಲಿ ಕೆರಿಬಿಯನ್ ಪ್ರದೇಶದಲ್ಲಿ ಅಪ್ಪಳಿಸಿದ ಅತ್ಯಂತ ಅಪಾಯಕಾರಿ ಚಂಡಮಾರುತ ಮೆಲಿಸ್ಸಾ . ಜಮೈಕಾ, ಕ್ಯೂಬಾ ಮತ್ತು ಹೈಟಿಯಲ್ಲಿ ತೀವ್ರ ಪ್ರವಾಹ ಮತ್ತು ಭೂಕುಸಿತಗಳು ಹಲವಾರು ಕಟ್ಟಡಗಳು ಕುಸಿದಿವೆ. ಪಶ್ಚಿಮ ಜಮೈಕಾದಲ್ಲಿ ಐದು ಮಿಲಿಯನ್ ಮೆಟ್ರಿಕ್ ಟನ್ ಅವಶೇಷಗಳು ಸಂಗ್ರಹವಾಗಿದ್ದು, ಇದು ಅರ್ಧ ಮಿಲಿಯನ್ ದೊಡ್ಡ ಟ್ರಕ್‌ಗಳ ತೂಕಕ್ಕೆ ಸಮನಾಗಿದೆ. ಜಮೈಕಾದ GDP ಯ ಸುಮಾರು 30 ಪ್ರತಿಶತ ನಾಶವಾಗಿದೆ.
ಇದಲ್ಲದೆ, ಹೈಟಿ ಮತ್ತು ಜಮೈಕಾದಲ್ಲಿ ಇದುವರೆಗೆ 75 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಲಕ್ಷಾಂತರ ಜನರು ಇನ್ನೂ ಸಹಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತದ ತ್ವರಿತ ನೆರವು ಎರಡೂ ದೇಶಗಳ ಜನರ ಹೃದಯಗಳನ್ನು ಗೆದ್ದಿದೆ.
A special aircraft from 🇮🇳 carrying HADR assistance arrived this evening in 🇨🇺 following the devastation caused by Hurricane Melissa. Guided by the spirit of Vasudhaiva Kutumbakam — the world is one family — India stands in solidarity with the people of Cuba, reaffirming bonds of… pic.twitter.com/vGWtfIkKTy
— India in Cuba (@EOIHavana) November 7, 2025
ಜಮೈಕಾದ ವಿದೇಶಾಂಗ ಸಚಿವೆ ಕಾಮಿನಾ ಜಾನ್ಸನ್-ಸ್ಮಿತ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಮೆಲಿಸ್ಸಾ ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ನೀವು ಮಾಡಿರುವ ಸ್ಮರಣೀಯ ಪ್ರಯತ್ನಕ್ಕಾಗಿ ನನ್ನ ಉತ್ತಮ ಸ್ನೇಹಿತ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಅವರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸುತ್ತೇನೆ ಎಂದು ಸ್ಮಿತ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Sat, 8 November 25




