ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ಕದನ ವಿರಾಮದಿಂದ ಹಿಂದೆ ಸರಿಯುತ್ತೇವೆ; ಇರಾನ್ ಎಚ್ಚರಿಕೆ

ಕದನವಿರಾಮ ಕೇವಲ ಇಸ್ರೇಲ್-ಅಮೆರಿಕ-ಇರಾನ್ ನಡುವೆ ಮಾತ್ರ ನಡೆದಿದೆ. ಇದರಲ್ಲಿ ಲೆಬನಾನ್​ ಸೇರ್ಪಡೆಯಾಗಿಲ್ಲ ಎಂದು ಹೇಳುವ ಮೂಲಕ ಇಸ್ರೇಲ್ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಇರಾನ್ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್ ಲೆಬನಾನ್ ಮೇಲೆ ದಾಳಿಯನ್ನು ಮುಂದುವರೆಸಿದರೆ ನಾವು ಕದನ ವಿರಾಮದ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ. ಅಲ್ಲದೆ, ಹಾರ್ಮುಜ್ ಸಂಚಾರವನ್ನು ಸ್ಥಗಿತಗೊಳಿಸುವುದಾಗಿಯೂ ಹೇಳಿದೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ಕದನ ವಿರಾಮದಿಂದ ಹಿಂದೆ ಸರಿಯುತ್ತೇವೆ; ಇರಾನ್ ಎಚ್ಚರಿಕೆ
Iran Protest

Updated on: Apr 08, 2026 | 10:29 PM

ಟೆಹ್ರಾನ್, ಏಪ್ರಿಲ್ 8: ಕದನ ವಿರಾಮ ಘೋಷಿಸಿದ ಕೆಲವು ಗಂಟೆಗಳ ನಂತರ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದೆ. ಈ ರೀತಿ ಕದನವಿರಾಮವನ್ನು ಉಲ್ಲಂಘಿಸುವುದನ್ನು ಮುಂದುವರಿಸಿದರೆ ಅಮೆರಿಕದ ಕದನವಿರಾಮ (Ceasefire) ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಇರಾನ್ (Iran) ಬೆದರಿಕೆ ಹಾಕಿದೆ.ಇಸ್ರೇಲಿ ಸೈನ್ಯವು 10 ನಿಮಿಷಗಳ ಅವಧಿಯಲ್ಲಿ ಲೆಬನಾನ್‌ನಾದ್ಯಂತ ಅನೇಕ ಸ್ಥಳಗಳಲ್ಲಿ 100 ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದಾಗ ಇರಾನ್‌ನಿಂದ ಈ ಹೇಳಿಕೆ ಬಂದಿದೆ.

“ಲೆಬನಾನ್‌ನಲ್ಲಿ ಇಸ್ರೇಲ್ ಮಾಡಿದ ಅಪರಾಧ ಮತ್ತು ಕದನ ವಿರಾಮ ನಿಯಮಗಳ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಇರಾನ್ ಇಸ್ರೇಲ್ ಅನ್ನು ಶಿಕ್ಷಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಅಥವಾ ಚೀನಾ, ಅಮೆರಿಕ-ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಿದ್ಯಾರು?

ಇರಾನ್ ಇಂದು ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮುಂದುವರಿಸಿದರೆ ಅಮೆರಿಕದ ಜೊತೆಗಿನ ಕದನ ವಿರಾಮದಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ. ಹಾರ್ಮುಜ್ ಮೂಲಕ ತೈಲ ಟ್ಯಾಂಕರ್‌ಗಳ ಸಾಗಣೆಯನ್ನು ನಿಲ್ಲಿಸಲಾಗಿದೆ ಎಂದು ಇರಾನ್‌ನ ಫಾರ್ಸ್ ನ್ಯೂಸ್ ವರದಿ ಮಾಡಿದೆ.

ಇರಾನ್ ವಿರುದ್ಧದ ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಬೆಂಬಲಿಸುತ್ತಿದ್ದರೂ ಹೆಜ್ಬೊಲ್ಲಾ ಸಂಘಟನೆಯಿಂದಾಗಿ ಕದನ ವಿರಾಮದ ನಿಯಮಗಳು ಮತ್ತು ಷರತ್ತುಗಳು ಲೆಬನಾನ್‌ಗೆ ಅನ್ವಯವಾಗುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಇದನ್ನೂ ಓದಿ: ಕದನವಿರಾಮದ ಬೆನ್ನಲ್ಲೇ ಇರಾನ್​ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಇರಾನ್ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್‌ನಿಂದ “ಕದನ ವಿರಾಮ ಉಲ್ಲಂಘನೆ” ಕುರಿತು ಚರ್ಚಿಸಲು ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿದ್ದ ಪಾಕಿಸ್ತಾನಕ್ಕೆ ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us