AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel-Iran war: ಇಸ್ರೇಲ್​ನ 1000 ಹಾಸಿಗೆಗಳ ಆಸ್ಪತ್ರೆಗೆ ಅಪ್ಪಳಿಸಿದ ಇರಾನಿನ ಕ್ಷಿಪಣಿ; ಕಂಗಾಲಾಗಿ ಓಡಿದ ರೋಗಿಗಳು

Israel-Iran Conflict: ಇಸ್ರೇಲ್-ಇರಾನ್ ಯುದ್ಧ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಇರಾನಿನ ಕ್ಷಿಪಣಿ ದಾಳಿಯ ನಂತರ ಸೊರೊಕಾ ಆಸ್ಪತ್ರೆಯೊಳಗೆ ಭೀತಿಯನ್ನು ತೋರಿಸುವ ವೀಡಿಯೊಗಳು ವೈರಲ್ ಆಗಿದೆ. ದಕ್ಷಿಣ ಇಸ್ರೇಲ್‌ನ 1000 ಹಾಸಿಗೆಗಳ ಆಸ್ಪತ್ರೆಗೆ ಇರಾನಿನ ಕ್ಷಿಪಣಿ ಅಪ್ಪಳಿಸುತ್ತಿದ್ದಂತೆ ಭಯದಿಂದ ರೋಗಿಗಳು ಓಡುತ್ತಿರುವ ಕ್ಷಣಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಕ್ಷಿಪಣಿ ದಾಳಿಯು ಆಸ್ಪತ್ರೆಯನ್ನೇ ಗುರಿಯಾಗಿರಿಸಿಕೊಂಡು ಅಲ್ಲ, ಸೊರೊಕಾ ಆಸ್ಪತ್ರೆಯ ಪಕ್ಕದಲ್ಲಿರುವ ಮಿಲಿಟರಿ ನೆಲೆಯನ್ನು ಗುರಿಯಾಗಿರಿಸಿಕೊಂಡಿದೆ ಎಂದು ಇರಾನಿನ ರಾಜ್ಯ ಮಾಧ್ಯಮ ವರದಿ ಮಾಡಿದೆ.

Israel-Iran war: ಇಸ್ರೇಲ್​ನ 1000 ಹಾಸಿಗೆಗಳ ಆಸ್ಪತ್ರೆಗೆ ಅಪ್ಪಳಿಸಿದ ಇರಾನಿನ ಕ್ಷಿಪಣಿ; ಕಂಗಾಲಾಗಿ ಓಡಿದ ರೋಗಿಗಳು
Israel Hospital Attack
ಸುಷ್ಮಾ ಚಕ್ರೆ
|

Updated on: Jun 19, 2025 | 3:42 PM

Share

ಜೆರುಸಲೇಂ, ಜೂನ್ 19: ಇಸ್ರೇಲ್‌ನ (Israel) ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಸೊರೊಕಾ ವೈದ್ಯಕೀಯ ಕೇಂದ್ರವನ್ನು (Soroka Hospital) ಇರಾನ್ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆ ವಿಪರೀತ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಇಸ್ರೇಲ್ ಮತ್ತು ಇರಾನ್ (Iran) ನಡುವಿನ ಮಿಲಿಟರಿ ಸಂಘರ್ಷವು ಇಂದು (ಗುರುವಾರ) ಏಳನೇ ದಿನಕ್ಕೆ ಕಾಲಿಟ್ಟಿತು. ಈ ಎರಡೂ ದೇಶಗಳು ಪರಸ್ಪರ ದೇಶಗಳ ಪ್ರದೇಶದ ಮೇಲೆ ದಾಳಿಗಳನ್ನು ಮುಂದುವರೆಸಿವೆ. ಇಂದು ಮುಂಜಾನೆ, ಇರಾನಿನ ಕ್ಷಿಪಣಿ ದಕ್ಷಿಣ ಇಸ್ರೇಲ್‌ನ ಸೊರೊಕಾ ವೈದ್ಯಕೀಯ ಕೇಂದ್ರದ ಮೇಲೆ ಅಪ್ಪಳಿಸಿತು. ಇದು ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಇಸ್ರೇಲ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಇರಾನ್ ಹೊಸ ದಾಳಿಯನ್ನು ಪ್ರಾರಂಭಿಸಿದಾಗ ಇಂದು (ಗುರುವಾರ) ಬೆಳಗ್ಗೆ ಕ್ಷಿಪಣಿ ಅಪ್ಪಳಿಸಿದ ನಂತರ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯಿಂದ ದಟ್ಟವಾದ ಹೊಗೆ ಹೊರಹೊಮ್ಮಿತು. ದಕ್ಷಿಣ ಇಸ್ರೇಲ್ ನಗರವಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆ ಬ್ಯಾಲಿಸ್ಟಿಕ್ ಕ್ಷಿಪಣಿಗೆ ಡಿಕ್ಕಿ ಹೊಡೆದಿದೆ. ಇರಾನಿನ ಈ ಕ್ಷಿಪಣಿ ದಾಳಿಯ ಪರಿಣಾಮವಾಗಿ ಇಸ್ರೇಲ್‌ನಾದ್ಯಂತ 47 ಜನರು ಗಾಯಗೊಂಡಿದ್ದಾರೆ ಎಂದು ಗುರುವಾರ ಹಲವಾರು ಪೀಡಿತ ಸ್ಥಳಗಳಿಗೆ ರಕ್ಷಣಾ ತಂಡಗಳು ಪ್ರತಿಕ್ರಿಯಿಸುತ್ತಿರುವುದನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ
Image
ಧಮ್ಕಿಯಿಂದ ಪ್ರಯೋಜನವಾಗಿಲ್ಲ, ಇರಾನ್ ವಿರುದ್ಧ ಯುದ್ಧಕ್ಕೆ ಸಿದ್ಧವಾದ ಟ್ರಂಪ್
Image
ಭಾರತದ ಕಡೆಯಿಂದ ಮೋದಿ ಯುದ್ಧ ನಿಲ್ಲಿಸಿದರು; ವರಸೆ ಬದಲಿಸಿದ ಟ್ರಂಪ್
Image
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
Image
ಇರಾನ್ ಶರಣಾಗುವುದಿಲ್ಲ, ಮಧ್ಯಪ್ರವೇಶಿಸಬೇಡಿ; ಟ್ರಂಪ್​ಗೆ ಖಮೇನಿ ಎಚ್ಚರಿಕೆ

ಇದನ್ನೂ ಓದಿ: Israel-Iran Conflict: ಇರಾನ್ ಶರಣಾಗುವುದಿಲ್ಲ, ಅಮೆರಿಕ ಮಧ್ಯಪ್ರವೇಶಿಸಿದರೆ ದೊಡ್ಡ ಹಾನಿಯಾಗುತ್ತದೆ; ಟ್ರಂಪ್‌ಗೆ ಖಮೇನಿ ಎಚ್ಚರಿಕೆ

ದೇಶಾದ್ಯಂತ ಇರಾನಿನ ದಾಳಿಗಳಿಂದ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯಾದ ಸೊರೊಕಾ ವೈದ್ಯಕೀಯ ಕೇಂದ್ರವು ಹಾನಿಗೊಳಗಾಗಿದೆ. ಇದರ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಸೊರೊಕಾ ಆಸ್ಪತ್ರೆಯ ಕಟ್ಟಡದೊಳಗೆ ಭೀತಿ ಹರಡುತ್ತಿದ್ದಂತೆ ಆಸ್ಪತ್ರೆಯಿಂದ ಒಡೆದ ಕಿಟಕಿಗಳು ಮತ್ತು ದಟ್ಟವಾದ ಕಪ್ಪು ಹೊಗೆ ಹೊರಬರುತ್ತಿರುವ ದೃಶ್ಯಗಳನ್ನು ಇಸ್ರೇಲಿ ಮಾಧ್ಯಮ ಪ್ರಸಾರ ಮಾಡಿತು. ಈ ಆಸ್ಪತ್ರೆಯೊಳಗಿನ ದಾಳಿಯ ಪರಿಣಾಮಗಳನ್ನು ಸೆರೆಹಿಡಿಯುವ ವೀಡಿಯೊವನ್ನು ಇಸ್ರೇಲ್ ವಿದೇಶಾಂಗ ಸಚಿವ ಶಾರೆನ್ ಹ್ಯಾಸ್ಕೆಲ್ ಹಂಚಿಕೊಂಡಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಮತ್ತು ನಾಗರಿಕರು ಹೊಗೆ ತುಂಬಿದ ಕಾರಿಡಾರ್‌ಗಳ ಮೂಲಕ ಓಡುತ್ತಿರುವುದನ್ನು ಕಾಣಬಹುದು. ಕಿಟಕಿಯ ಗಾಜಿನ ಚೂರುಗಳು ಮಹಡಿಗಳಲ್ಲಿ ಹರಡಿಕೊಂಡಿವೆ. ಮುರಿದ ಕಿಟಕಿಗಳು, ಬೆಂಚುಗಳು ಮತ್ತು ಕುರ್ಚಿಗಳ ಅವಶೇಷಗಳು ಆಸ್ಪತ್ರೆಯಾದ್ಯಂತ ಹರಡಿಕೊಂಡಿವೆ. “ಇರಾನಿನ ಆಡಳಿತವು ಬೀರ್‌ಶೆಬಾದ ಸೊರೊಕಾ ಆಸ್ಪತ್ರೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ಗುರಿಯಾಗಿಸಿಕೊಂಡಿತು. ನಮ್ಮ ದೇಶದ ಪ್ರಮುಖ ವೈದ್ಯಕೀಯ ಕೇಂದ್ರದ ಮೇಲೆ ದಾಳಿಯಾಗಿದೆ. ನಾವು ಸುಮ್ಮನಿರುವುದಿಲ್ಲ. ನಮ್ಮ ಜನರನ್ನು ರಕ್ಷಿಸಲು ನಾವು ಏನು ಮಾಡಬೇಕೋ ಅದನ್ನು ಮುಂದುವರಿಸುತ್ತೇವೆ”ಎಂದು ವಿದೇಶಾಂಗ ಸಚಿವಾಲಯ ನಿರ್ವಹಿಸುವ ಅಧಿಕೃತ ‘ಸ್ಟೇಟ್ ಆಫ್ ಇಸ್ರೇಲ್’ ಖಾತೆ ತಿಳಿಸಿದೆ.

ಇದನ್ನೂ ಓದಿ: ಇಸ್ರೇಲ್ ಇರಾನ್ ಯುದ್ಧಕ್ಕೂ ಅಮೆರಿಕದಲ್ಲಿ ಪಿಜ್ಜಾ ಆರ್ಡರ್ ಹೆಚ್ಚಳಕ್ಕೂ ಏನು ಸಂಬಂಧ? ಇಲ್ಲಿದೆ ಅಸಲಿ ವಿಚಾರ

ಇರಾನ್ ಗುರಿಯಾಗಿಸಿಕೊಂಡಿರುವ ಸೊರೊಕಾ ವೈದ್ಯಕೀಯ ಕೇಂದ್ರವು ಇಸ್ರೇಲ್‌ನ ದಕ್ಷಿಣದಲ್ಲಿರುವ ಪ್ರಮುಖ ಆಸ್ಪತ್ರೆಯಾಗಿದ್ದು, 1,000ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದೆ. ಇದು ಈತು ಪ್ರದೇಶದ ಸುಮಾರು 1 ಮಿಲಿಯನ್ ನಿವಾಸಿಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಹೊಸ ದಾಳಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, “ಇಂದು ಬೆಳಿಗ್ಗೆ, ಇರಾನ್‌ನ ಭಯೋತ್ಪಾದಕ ನಿರಂಕುಶಾಧಿಕಾರಿಗಳು ಬೀರ್ ಶೆಬಾದ ಸೊರೊಕಾ ಆಸ್ಪತ್ರೆಯಲ್ಲಿ ಮತ್ತು ಮಧ್ಯ ಇಸ್ರೇಲ್‌ನ ನಾಗರಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸಿದರು. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ