ಇಸ್ರೇಲಿ ಕಮಾಂಡೋಗಳು ಹಮಾಸ್​​ ಭದ್ರಕೋಟೆಯಿಂದ ಒತ್ತೆಯಾಳುಗಳನ್ನು ರಕ್ಷಿಸಿದ್ದು ಹೇಗೆ?

ಹಮಾಸ್ ಸೆರೆಯಿಂದ ಇಸ್ರೇಲಿ ಪಡೆಗಳು ನಾಲ್ಕು ಇಸ್ರೇಲಿ ಒತ್ತೆಯಾಳುಗಳನ್ನು ರಕ್ಷಿಸಿದ ವಿಡಿಯೋವನ್ನು ಇಸ್ರೇಲ್​ ಹಂಚಿಕೊಂಡಿದೆ. ಈ ಕಾರ್ಯಾಚರಣೆಯು ಇಸ್ರೇಲಿ ಸೇನೆ (ಐಡಿಎಫ್) ಮತ್ತು ಅದರ ಗುಪ್ತಚರ ಸಂಸ್ಥೆಗಳ ಬಲವನ್ನು ಸಾಬೀತುಪಡಿಸಿದೆ. ವಿಶೇಷವೆಂದರೆ ಇಸ್ರೇಲ್ ಸೇನೆ ಹಗಲು ಹೊತ್ತಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ಇಸ್ರೇಲಿ ಕಮಾಂಡೋಗಳು ಹಮಾಸ್​​ ಭದ್ರಕೋಟೆಯಿಂದ ಒತ್ತೆಯಾಳುಗಳನ್ನು ರಕ್ಷಿಸಿದ್ದು ಹೇಗೆ?
Follow us
|

Updated on: Jun 10, 2024 | 10:43 AM

ಗಾಜಾದ ಹಮಾಸ್ ಭದ್ರಕೋಟೆ ಎಂದು ಪರಿಗಣಿಸಲಾದ ಪ್ರದೇಶದಲ್ಲಿ ಇಸ್ರೇಲ್(Israel) ಶನಿವಾರ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕ ಗುಂಪಿನ ವಶದಿಂದ ತನ್ನ ನಾಲ್ವರು ನಾಗರಿಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಕಾರ್ಯಾಚರಣೆಯು ಇಸ್ರೇಲಿ ಸೇನೆ (ಐಡಿಎಫ್) ಮತ್ತು ಅದರ ಗುಪ್ತಚರ ಸಂಸ್ಥೆಗಳ ಬಲವನ್ನು ಸಾಬೀತುಪಡಿಸಿದೆ. ವಿಶೇಷವೆಂದರೆ ಇಸ್ರೇಲ್ ಸೇನೆ ಹಗಲು ಹೊತ್ತಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ಕಾರ್ಯಾಚರಣೆಯನ್ನು ಸೀಡ್ಸ್ ಆಫ್ ಸಮ್ಮರ್ ಎಂದು ಹೆಸರಿಸಲಾಯಿತು. ಆದರೆ ನಂತರ ಇಸ್ರೇಲಿ ಕಮಾಂಡೋ ಅರ್ನಾನ್ ಝಮೊರಾ ನಂತರ ಆಪರೇಷನ್ ಅರ್ನಾನ್ ಎಂದು ಬದಲಿಸಿದೆ.

ಮೂವರು ಒತ್ತೆಯಾಳುಗಳನ್ನು ರಕ್ಷಿಸುವಾಗ ಹಮಾಸ್ ಗುಂಡಿನ ದಾಳಿಯಿಂದ ಅರ್ನಾನ್ ಝಮೋರಾ ಗಂಭೀರವಾಗಿ ಗಾಯಗೊಂಡರು ಬಳಿಕ ಸಾವನ್ನಪ್ಪಿದ್ದಾರೆ, ಈ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಏಕೈಕ ಇಸ್ರೇಲ್ ಸೈನಿಕ. ಇಸ್ರೇಲಿ ಮಿಲಿಟರಿ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು 1976 ರ ಎಂಟೆಬ್ಬೆ ಕಾರ್ಯಾಚರಣೆಯಂತೆಯೇ ವಿವರಿಸಿದ್ದಾರೆ.

ಎಂಟೆಬ್ಬೆ ಕಾರ್ಯಾಚರಣೆಯ ಭಾಗವಾಗಿ ಇಸ್ರೇಲಿ ಕಮಾಂಡೋಗಳು ಉಗಾಂಡಾದಲ್ಲಿ 100 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಿಸಿದರು. ಆಪರೇಷನ್ ಎಂಟೆಬ್ಬೆ ಸಮಯದಲ್ಲಿ, ಪ್ರಸ್ತುತ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹೋದರರಾಗಿದ್ದ ಇಸ್ರೇಲಿ ಸೇನೆಯ ಏಕೈಕ ಕಮಾಂಡೋ ಜೊನಾಥನ್ ನೆತನ್ಯಾಹು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಶನಿವಾರ ಬೆಳಿಗ್ಗೆ 11 ಗಂಟೆಗೆ, ಯಮಮ್ ಮತ್ತು ಶಿನ್ ಬೆಟ್ ಕಮಾಂಡೋಗಳು ಗಾಜಾದ ನುಸ್ರತ್‌ನಲ್ಲಿರುವ ಎರಡು ಪ್ರತ್ಯೇಕ ಬಹುಮಹಡಿ ಕಟ್ಟಡಗಳ ಮೇಲೆ ದಾಳಿ ನಡೆಸಿದರು. ಈ ಎರಡು ಕಟ್ಟಡಗಳಲ್ಲಿ ಹಮಾಸ್ ಒತ್ತೆಯಾಳುಗಳನ್ನು ಇರಿಸಿತ್ತು. ನುಸ್ರತ್ ಗಾಜಾದ ಕೆಲವು ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಇದುವರೆಗೂ ತಲುಪಿರಲಿಲ್ಲ.

ಮತ್ತಷ್ಟು ಓದಿ: ಕದನ ವಿರಾಮ: 12 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್, ಇಸ್ರೇಲ್​ನಿಂದ 30 ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆ

ಎರಡೂ ಕಟ್ಟಡಗಳು ಪರಸ್ಪರ 200 ಮೀಟರ್ ದೂರದಲ್ಲಿವೆ. ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಹಮಾಸ್ ಮತ್ತೊಂದು ಸ್ಥಳದಲ್ಲಿ ಒತ್ತೆಯಾಳುಗಳನ್ನು ಕೊಲ್ಲಬಹುದೆಂಬ ಕಾರಣಕ್ಕಾಗಿ ಏಕಕಾಲದಲ್ಲಿ ಎರಡೂ ದಾಳಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಪ್ರದೇಶವು ಸಶಸ್ತ್ರ ಭಯೋತ್ಪಾದಕರಿಂದ ತುಂಬಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.

ವಿಡಿಯೋ:

ಮೂವರು ಒತ್ತೆಯಾಳುಗಳು ಮತ್ತು ಝೊಮೊರೊ ಅವರನ್ನು ನುಸ್ರತ್‌ನಿಂದ ಹೊರಗೆ ಕರೆದೊಯ್ಯುವಾಗ, ವಾಹನದ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಪ್ರಾರಂಭವಾಗಿತ್ತು. ಇದರಿಂದಾಗಿ ಅವರೆಲ್ಲರೂ ಸಿಕ್ಕಿಬಿದ್ದಿದ್ದರು.

ರಕ್ಷಿಸಲು ಇತರ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಅವರನ್ನು ಗಾಜಾದಲ್ಲಿನ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ಹೆಲಿಕಾಪ್ಟರ್‌ನಲ್ಲಿ ಇಸ್ರೇಲ್‌ಗೆ ಕರೆದೊಯ್ಯಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ