ಆತ್ಮಹತ್ಯೆ ಪ್ರಮಾಣದಲ್ಲಿ ಗಣನೀಯ ಏರಿಕೆ; ಜಪಾನ್​ನಲ್ಲಿ ಒಂಟಿತನ ನಿವಾರಣೆಗೂ ಸಚಿವ

ಜಪಾನೀಸ್ ನೇಷನಲ್ ಪೊಲೀಸ್ ಏಜೆನ್ಸಿ ಮಾಹಿತಿಯ ಪ್ರಕಾರ 2020 ಅಕ್ಟೋಬರ್​ವರೆಗೆ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 1,765 ಮಾತ್ರ. ಆದರೆ, ಅಕ್ಟೋಬರ್ ತಿಂಗಳು ಒಂದರಲ್ಲೇ ಆತ್ಮಹತ್ಯೆಯಿಂದ ಮೃತಪಟ್ಟವರು ಬರೋಬ್ಬರಿ 2,153 ಜನ.

ಆತ್ಮಹತ್ಯೆ ಪ್ರಮಾಣದಲ್ಲಿ ಗಣನೀಯ ಏರಿಕೆ; ಜಪಾನ್​ನಲ್ಲಿ ಒಂಟಿತನ ನಿವಾರಣೆಗೂ ಸಚಿವ
ಜಪಾನ್ ದೇಶದಲ್ಲಿ ಒಂಟಿತನದ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತಿದೆ.
Follow us
TV9 Web
| Updated By: ganapathi bhat

Updated on:Apr 06, 2022 | 7:47 PM

ಜಪಾನ್ ದೇಶವು ಹೊಸ ಸಚಿವರನ್ನು ನೇಮಕಗೊಳಿಸಿದೆ. ಅದರಲ್ಲೇನು ವಿಶೇಷ? ಗೃಹ ಸಚಿವ, ಆರೋಗ್ಯ ಸಚಿವ, ಹಣಕಾಸು ಸಚಿವರಿದ್ದಂತೆ ಮತ್ತೊಂದು ಸಚಿವರು ಅಥವಾ ಸಚಿವಾಲಯ ಅಂದುಕೊಂಡರೆ ಇದು ಅಷ್ಟಕ್ಕೇ ಸೀಮಿತವಾದ ವಿಚಾರವಲ್ಲ. ಜಪಾನ್ ನೇಮಿಸಿರುವುದು ಒಂಟಿತನದ ಸಚಿವರನ್ನು. (Minister of Lonliness) ಒಂಟಿತನಕ್ಕೂ ಒಬ್ಬರು ಸಚಿವರು ಯಾಕೆ ಅಂದರೆ ಅದಕ್ಕೂ ಕಾರಣವಿದೆ. ಜಪಾನ್​ನಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿರುವುದರಿಂದ ಈ ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ. ಒಂಟಿತನದಿಂದ ಜನರು ನಡೆಸುತ್ತಿರುವ ಆತ್ಮಹತ್ಯೆ ಸಂಖ್ಯೆ ಕಡಿಮೆ ಮಾಡಲು ಈ ಸಚಿವರನ್ನು ನೇಮಕ ಮಾಡಲಾಗಿದೆ.

ಒಂಟಿತನದ ಸಚಿವರು (Minister of Lonliness) ಸಾಮಾಜಿಕ ವಾತಾವರಣದಿಂದ ಬೇರೆಯಾಗಿ ಒಬ್ಬಂಟಿಯಾಗಿರುವ ಅಥವಾ ಒಂಟಿತನದಿಂದ ಕಂಗಾಲಾಗಿರುವ ಜಪಾನ್ ಜನರ ಬಗ್ಗೆ ಕಾಳಜಿ ವಹಿಸಬೇಕಿದೆ. ಅಂಥಾ ಜನರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕಿದೆ.

ಕಳೆದ 11 ವರ್ಷಗಳಿಂದ ಜಪಾನ್ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಸನ್ನಿವೇಶವನ್ನು ಸರಿಪಡಿಸಲು ಜಪಾನ್ ಪ್ರಧಾನ ಮಂತ್ರಿ ಯೋಶಿಹಿಡೆ ಸುಗಾ, ತೆತ್ಸುಶೀ ಸಕಮೊಟೊರನ್ನು ಒಂಟಿತನದ ಸಚಿವರನ್ನಾಗಿ ನೇಮಿಸಿದೆ. ಸಕಮೊಟೊ ಜಪಾನ್​ನಲ್ಲಿ ಇಳಿಕೆಯಾಗುತ್ತಿರುವ ಜನನ ಪ್ರಮಾಣ ಹಾಗೂ ಪ್ರಾದೇಶಿಕ ಪುನರುಜ್ಜೀವನದ ಮಂತ್ರಿಯಾಗಿ ಈ ಮೊದಲೇ ಕೆಲಸ ಮಾಡುತ್ತಿದ್ದರು. ಈಗ ಜನರ ಒಂಟಿತನ ಮತ್ತು ಪ್ರತ್ಯೇಕತೆಯ ನೀತಿಗಳನ್ನು ಕೂಡ ಸಕಮೊಟೊ ನೋಡಿಕೊಳ್ಳಲಿದ್ದಾರೆ.

ಜಪಾನ್ ದೇಶದಲ್ಲಿ ಒಂಟಿತನದಿಂದ ಬಳಲುತ್ತಿರುವವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಾರೆ. ಜತೆಗೆ, ಆತ್ಮಹತ್ಯೆಯ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಕಾರಣಗಳಿಂದ ಸಕಮೊಟೊಗೆ ಹೊಸ ಜವಾಬ್ದಾರಿ ನೀಡಲಾಗಿದೆ ಎಂದು ಪ್ರಧಾನಿ ಸುಗಾ ಫೆಬ್ರವರಿ 12ರಂದು ತಿಳಿಸಿದ್ದಾರೆ. ಈ ಬಗ್ಗೆ ಜಪಾನ್ ಟೈಮ್ಸ್ ವರದಿ ಮಾಡಿದೆ.

‘ಒಂಟಿತನ, ಆತ್ಮಹತ್ಯೆಯ ಸಮಸ್ಯೆ ಮತ್ತು ಕಾರಣಗಳನ್ನು ನೀವು ಗುರುತಿಸುತ್ತೀರಿ. ಅದರಿಂದ ಹೊರಬರಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂಬ ನಂಬಿಕೆ ಇದೆ’ ಎಂದು ಸುಗಾ ಸಕಮೊಟೊ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.

ಒಂಟಿತನವು ಜಪಾನ್​ನ ದೀರ್ಘಾವದಿ ಸಮಸ್ಯೆಯಾಗಿತ್ತು. ಸಾಮಾಜಿಕ ವಾತಾವರಣದಿಂದ ಹೊರಗುಳಿದು ಒಂಟಿಯಾಗಿ ಬದುಕುವುದು ಜನರ ಕಷ್ಟವಾಗಿತ್ತು. ಈ ಸಮಸ್ಯೆಯಿಂದ ಹೊರಬರಲು ಹಲವು ಪರಿಹಾರಗಳನ್ನು ಜಪಾನ್ ಜನರು ಕಂಡುಕೊಂಡಿದ್ದರು. ಆದರೆ, ಅವ್ಯಾವುದೂ ಪೂರ್ಣ ಪ್ರಯೋಜನ ನೀಡಿರಲಿಲ್ಲ. ಜಪಾನ್ ಇಂಜಿನಿಯರ್​ಗಳು ಒಂಟಿಯಾಗಿರುವವರ ಕೈ ಹಿಡಿದು ಕುಳಿತುಕೊಳ್ಳಲು ರೋಬೋಟ್ ಒಂದನ್ನು ರಚಿಸಿದ್ದರು.

ಕೊವಿಡ್-19 ಸಂದರ್ಭ ಹೆಚ್ಚಾಯಿತು ಆತ್ಮಹತ್ಯೆಯ ಪ್ರಮಾಣ ಕೊರೊನಾ ಕಾಲದಲ್ಲಿ ಆತ್ಮಹತ್ಯೆಯ ಪ್ರಮಾಣ ಅತಿ ಹೆಚ್ಚಾಯಿತು. ಕಳೆದ 11 ವರ್ಷಗಳಲ್ಲೇ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸಿದವು. ಜಪಾನೀಸ್ ನ್ಯಾಷನಲ್ ಪೊಲೀಸ್ ಏಜೆನ್ಸಿ ಮಾಹಿತಿಯ ಪ್ರಕಾರ 2020 ಅಕ್ಟೋಬರ್​ವರೆಗೆ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 1,765 ಮಾತ್ರ. ಆದರೆ, ಅಕ್ಟೋಬರ್ ತಿಂಗಳು ಒಂದರಲ್ಲೇ ಆತ್ಮಹತ್ಯೆಯಿಂದ ಮೃತಪಟ್ಟವರು ಬರೋಬ್ಬರಿ 2,153 ಜನ. ಆತ್ಮಹತ್ಯೆಯಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಿದ್ದು, ಅಕ್ಟೋಬರ್ 2020ರಲ್ಲಿ 879 ಮಹಿಳೆಯರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. 2019ರ ಅಕ್ಟೋಬರ್​ಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಶೇ. 70ರಷ್ಟು ಹೆಚ್ಚಳವಾಗಿದೆ.

ಜಪಾನ್​ನಲ್ಲಿ ಹೆಚ್ಚು ಮಹಿಳೆಯರು ಒಂಟಿ ಜೀವನ ನಡೆಸುತ್ತಿದ್ದಾರೆ. ಅವರ ಬದುಕನ್ನು ಅವರೇ ನೋಡಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಏನಾದರೂ ಹೆಚ್ಚು ಕಡಿಮೆ ಆದಾಗ ಅದನ್ನು ಸಹಿಸಿಕೊಳ್ಳಲು ಅವರಿಗೆ ಶಕ್ತಿ ಇರುವುದಿಲ್ಲ ಎಂದು ಆತ್ಮಹತ್ಯೆ ಕುರಿತು ಅಧ್ಯಯನ ನಡೆಸಿರುವ ಜಪಾನಿ ಪ್ರೊಫೆಸರ್ ಮಿಚಿಕೊ ಉಯೆಡ ತಿಳಿಸಿದ್ದಾರೆ.

ಇದನ್ನೂ ಓದಿ: ಕಳೆದೊಂದು ತಿಂಗಳಲ್ಲಿ.. ಇಲ್ಲಿ ಕೊರೊನಾಕ್ಕೆ ಬಲಿಯಾದವರಿಗಿಂತ ಆತ್ಮಹತ್ಯೆಗೆ ಶರಣಾದವರೇ ಹೆಚ್ಚಂತೆ!

TikTok Star Suicide: ಟಿಕ್​ಟಾಕ್​ ಸ್ಟಾರ್​ ಸಮೀರ್​ ಗಾಯಕ್​ವಾಡ್​​ ಆತ್ಮಹತ್ಯೆ, 21 ವರ್ಷದ ಯುವಕನ ಸಾವಿಗೆ ಕಾರಣವೇನು?

Published On - 5:03 pm, Tue, 23 February 21

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ