ತೈವಾನ್ಗೆ ತೆರಳುತ್ತಿದ್ದ ಕೊರಿಯನ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಮಾನ ಏಕಾಏಕಿ 30 ಸಾವಿರ ಅಡಿಯಿಂದ 9 ಸಾವಿರ ಅಡಿಗೆ ಇಳಿದಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು.
ಈಗಾಗಲೇ ಪ್ರಯಾಣಿಕರಿಗೆ ಆಕ್ಸಿಜನ್ ಮಾಸ್ಕ್ ಹಾಕಿಕೊಳ್ಳಲು ಸೂಚನೆ ನೀಡಲಾಗಿದ್ದರೂ ಕೂಡ, ಪ್ರಯಾಣಿಕರ ಕಿವಿ, ಹಾಗೂ ಮೂಗಿನಿಂದ ರಕ್ತಸ್ರಾವವನ್ನು ತಡೆಯಲು ಸಾಧ್ಯವಾಗಿಲ್ಲ. ಪೈಲಟ್ ಕೂಡಲೇ ವಿಮಾನವನ್ನು ಹಿಂದಕ್ಕೆ ತಿರುಗಿಸಲು ನಿರ್ಧರಿಸಿದರು, ಇಂಚೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ತಕ್ಷಣ 13 ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿಸಂಸ್ಥೆ ಪ್ರಕಾರ, ಶನಿವಾರ ಕೊರಿಯನ್ ಏರ್ ವಿಮಾನ ಕೆಇ-189 ಕ್ಯಾಬಿನ್ ಪ್ರೆಶರೈಸೇಷನ್ ಸಿಸ್ಟಮ್ನಲ್ಲಿ ಹಠಾತ್ ದೋಷ ಕಂಡು ಬಂದಿತ್ತು.
ವಿಮಾನ 30 ಸಾವಿರ ಅಡಿಯಿಂದ ಹಠಾತ್ 9 ಸಾವಿರ ಅಡಿಗೆ ಕುಸಿಯಿತು, ಇದರಿಂದ ಕೆಲವು ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಇಬ್ಬರು ಪ್ರಯಾಣಿಕರು ಎತ್ತರದಿಂದ ಹಠಾತ್ ಕುಸಿತ ಉಂಟಾಗಿದ್ದರಿಂದ ಕಿವಿ ಹಾಗೂ ಮೂಗಿನಲ್ಲಿ ರಕ್ತಸ್ರಾವವಾಯಿತು.
ಮತ್ತಷ್ಟು ಓದಿ: Bengaluru: ತಾಂತ್ರಿಕ ದೋಷ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ
ಇತರೆ 15 ಂಂದಿ ಕಿವಿ ನೋವು ಹಾಗೂ ಉಸಿರುಗಟ್ಟುವಿಕೆಯನ್ನು ಅನುಭವಿಸಿದರು. ಊಟ ನೀಡಿದ ಸ್ವಲ್ಪ ಸಮಯದಲ್ಲೇ ವಿಮಾನ ಕೆಳಕ್ಕೆ ವಾಲಿತು ಮತ್ತು ಕ್ಯಾಬಿನ್ನಲ್ಲಿ ಅವ್ಯವಸ್ಥೆ ಉಂಟಾಯಿತು ಎಂದು ತೈವಾನ್ ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ವಿಮಾನದಲ್ಲಿ ಮಕ್ಕಳು ಹೆದರಿ ಅಳುತ್ತಿದ್ದರು, ಘಟನೆ ಬಗ್ಗೆ ಕೊರಿಯನ್ ಏರ್ ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದೆ. ತಾಂತ್ರಿಕ ದೋಷದ ಕಾರಣಗಳ ಬಗ್ಗೆ ತನಿಖೆ ಪ್ರಾರಂಭಿಸಿದೆ. ಎಲ್ಲಾ ಅಗತ್ಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವಿಮಾನಯಾನ ಪ್ರಯಾಣಿಕರಿಗೆ ಭರವಸೆ ನೀಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 am, Tue, 25 June 24