ಉಜ್ಬೇಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 18 ಸಾವು ಮತ್ತು 243 ಜನರಿಗೆ ಗಾಯ
ಸುಮಾರು ಮೂರೂವರೆ ಕೋಟಿ ಜನಸಂಖ್ಯೆಯ ಕೇಂದ್ರೀಯ ಏಷ್ಯಾ ದೇಶದಲ್ಲಿ ಕಳೆದ ಎರಡು ದಶಕಗಳಲ್ಲೇ ಇಷ್ಟು ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿರಲಿಲ್ಲ.
ಅಲ್ಮಾಟಿ: ಸೋವಿಯತ್ ಒಕ್ಕೂಟ (USSR) ಬೇರೆ ಬೇರೆ ದೇಶಗಳಾಗಿ ಛಿದ್ರಗೊಂಡ ಬಳಿಕ ವಿಶ್ವದ ರಾಜಕೀಯ ಚಿತ್ರಣವೇ ಬದಲಾಯಯಿತು. ಅಲ್ಲಿನ ಹಲವಾರು ದೇಶಗಳಲ್ಲಿ ರಾಜಕೀಯ ಸಮಸ್ಯೆಗಳಿವೆ, ರಾಜಕೀಯ ವಿಪ್ಲವಗಳು ಸಂಭವಿಸುತ್ತಿವೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ನಿಮಗೆ ಗೊತ್ತೇ ಇದೆ. ಈಗ ಉಜ್ಬೇಕಿಸ್ತಾನದ (Uzbekistan) ಕರಾಕಲ್ಪಾಕಸ್ತಾನ್ (Karakalpakstan) ಸ್ವಾಯತ್ತ ಪ್ರಾಂತ್ಯದಲ್ಲಿ ಕಳೆದ ವಾರ ತಲೆದೋರಿದ ದೊಂಬಿ, ಗಲಾಟೆ, ಹಿಂಸಾಚಾದಲ್ಲಿ ಕನಿಷ್ಟ 18 ಜನ ಸತ್ತಿದ್ದು 243 ಜನ ಗಾಯಗೊಂಡಿದ್ದಾರೆ. ಈ ಪ್ರಾಂತ್ಯದ ಸ್ವಾಯತ್ತತೆಯನ್ನು ಉಜ್ಬೇಕ್ ಸರ್ಕಾರ ಸೀಮಿತಗೊಳಿಸಿರುವುದಾಗಿ ಘೋಷಿಸಿದ ಬಳಿಕ ಅಲ್ಲಿ ಹಿಂಸಾಚಾರ ತಲೆದೋರಿದೆ.
ಕಳೆದ ಶುಕ್ರವಾರ ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಚದುರಿಸುವ ಸಂದರ್ಭದಲ್ಲಿ ಭದ್ರತಾ ದಳದವರು 516 ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಾದರೂ ಸೋಮವಾರದ ವೇಳೆಗೆ ಅವರಲ್ಲಿ ಬಹಳಷ್ಟು ಜನರನ್ನು ಬಿಡುಗಡೆ ಮಾಡಿದರು ಎಂದು ನ್ಯಾಶನಲ್ ಗಾರ್ಡ್ ಪತ್ರಿಕಾ ಕಚೇರಿಯಯ ಪ್ರಕಟಣೆಯೊಂದು ತಿಳಿಸಿದೆ.
ಉಜ್ಬೇಕಿಸ್ತಾದ ಆಧ್ಯಕ್ಷ ಶೌಕತ್ ಮಿರ್ಜಿಯುಯೆವ್ ಅವರು ಕರಾಕಲ್ಪಾಕಸ್ತಾನ್ ಸ್ವಾಯತ್ತತೆ ಮತ್ತು ಸ್ವತಂತ್ರ ಪ್ರಾಂತ್ಯವೆಂದು ಘೋಷಿಸಿಕೊಂಡಿರುವದಕ್ಕೆ ಸಂಬಂಧಪಟ್ಟಂತೆ ಸಂವಿಧಾನದಲ್ಲಿ ತಿದ್ದುಪಡಿ ತರುವ ನಿರ್ಧಾರಗಳನ್ನು ಕೈಬಿಟ್ಟಿದ್ದಾರೆ. ಅಲ್ಲದೆ ದೇಶದ ವಾಯುವ್ಯ ಭಾಗಕ್ಕಿರುವ ಈ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಪ್ರತಿಭಟನೆಕಾರರು, ಶುಕ್ರವಾರದಂದು ಪ್ರಾಂತ್ಯದ ರಾಜಧಾನಿಯಾಗಿರುವ ನುಕುಸ್ ದಲ್ಲಿ ಸರ್ಕಾರೀ ಕಟ್ಟಡಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಸುಮಾರು ಮೂರೂವರೆ ಕೋಟಿ ಜನಸಂಖ್ಯೆಯ ಕೇಂದ್ರೀಯ ಏಷ್ಯಾ ದೇಶದಲ್ಲಿ ಕಳೆದ ಎರಡು ದಶಕಗಳಲ್ಲೇ ಇಷ್ಟು ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿರಲಿಲ್ಲ.
ಅರಲ್ ಸಮುದ್ರ ತೀರಕ್ಕಿರುವ ಕರಾಕಲ್ಪಾಕಸ್ತಾನ್ ಜನಾಂಗೀಯ ಅಲ್ಪಸಂಖ್ಯಾತರಾಗಿರುವ ಕರಕಲ್ಪಾಕ್ ಗಳ ವಾಸಸ್ಥಳವಾಗಿದ್ದು, ಅವರಾಡುವ ಭಾಷೆ ಉಜ್ಬೇಕ್ ಗಿಂತ ಕಜಾಕ್ ಗೆ ಹೆಚ್ಚು ಹತ್ತಿರವಾಗಿದೆ.
ಕರಾಕಲ್ಪಾಕ್ ನಿಂದ ವಲಸೆ ಹೋಗಿರುವ ಅನೇಕ ಜನರಿಗೆ ಆಶ್ರಯ ಒದಗಿಸಿರುವ ಕಜಕಸ್ತಾನದ ಆಧ್ಯಕ್ಷ ಕಾಸಿಮ್-ಜೊಮಾರ್ಟ್ ಟೊಕಾಯೆವ್ ಅವರೊಂದಿಗೆ ಉಜ್ಬೇಜಿಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಜಿಯುಯೆವ್ ಸೋಮವಾರ ಮಾತುಕತೆ ನಡೆಸಿದರು. ಕರಾಕಲ್ಪಾಕಸ್ತಾನ್ ನಲ್ಲಿ ಸ್ಥಿರತೆ ತರಲು ತಾಷ್ಕೆಂಟ್ ನಡೆಸಿತ್ತಿರುವ ಪ್ರಯತ್ನಗಳನ್ನು ಟೊಕಾಯೆವ್ ಸ್ವಾಗತಿದ್ದಾರೆಂದು ಅವರ ಕಚೇರಿಯಿಂದ ಹೊರಬಿದ್ದಿರುವ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Vladimir Putin Health: ದೃಷ್ಟಿ ಕಳೆದುಕೊಳ್ಳುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್, ಮೂರೇ ವರ್ಷ ಆಯಸ್ಸು ಎಂದ ಗೂಢಚಾರಿ