Viral News: ಲೈಂಗಿಕ ಕ್ರಿಯೆ ಮುನ್ನ ಹಣ ಕೇಳ್ತಿದ್ದ ಪತ್ನಿ; ಬೇಸತ್ತು ವಿಚ್ಛೇದನ ನೀಡಿದ ಪತಿ

ಲೈಂಗಿಕ ಕ್ರಿಯೆಗೂ ಮುನ್ನ ನನ್ನ ಪತ್ನಿ ಹಣ ಕೇಳುತ್ತಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊರ್ವ ವಿಚ್ಛೇದನ ನೀಡಿರುವ ಘಟನೆ ತೈವಾನ್‌ನಲ್ಲಿ ನಡೆದಿದೆ. ಇದೀಗ ಪತಿಯ ದೂರನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ನ್ಯಾಯಾಲಯ ಆತನಿಗೆ ಆತನ ಹೆಂಡತಿಯಿಂದ ಡೈವೋರ್ಸ್‌ ನೀಡಿದೆ.

Viral News: ಲೈಂಗಿಕ ಕ್ರಿಯೆ ಮುನ್ನ ಹಣ ಕೇಳ್ತಿದ್ದ ಪತ್ನಿ; ಬೇಸತ್ತು ವಿಚ್ಛೇದನ ನೀಡಿದ ಪತಿ
ಲೈಂಗಿಕ ಕ್ರಿಯೆ ಮುನ್ನ ಹಣ ಕೇಳ್ತಿದ್ದ ಪತ್ನಿ; ಬೇಸತ್ತು ವಿಚ್ಛೇದನ ನೀಡಿದ ಪತಿ

Updated on: Aug 09, 2024 | 3:20 PM

ತೈವಾನ್‌ನ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ವಿಚ್ಛೇದನವನ್ನು ಪಡೆದಿರುವ ಪ್ರಕರಣವೊಂದು ಎಲ್ಲೆಡೆ ಭಾರೀ ಸುದ್ದಿಯಲ್ಲಿದೆ. ವಿಚ್ಛೇದನ ಪಡೆಯುವುದರಲ್ಲಿ ಸುದ್ದಿಯಾಗುವಂತಹ ವಿಶೇಷತೆ ಏನಿದೆ ಅಂತ ನೀವು ಅಂದುಕೊಳ್ಳಬಹುದು. ಆದರೆ ವಿಚ್ಛೇದನಕ್ಕೆ ಪತಿ ನೀಡಿರುವ ಕಾರಣ ತಿಳಿದರೆ ನೀವು ಶಾಕ್​​​ ಆಗುವುದಂತೂ ಖಂಡಿತಾ. ಹೌದು, ಪ್ರತಿ ಬಾರಿ ಲೈಂಗಿಕ ಕ್ರಿಯೆಗೂ ಮುನ್ನ ಪತ್ನಿ ತನ್ನಿಂದ ಹಣದ ಬೇಡಿಕೆ ಇಡುತ್ತಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

2014 ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿದ್ದು, ಆದರೆ ವರ್ಷಗಳು ಕಳೆಯುತ್ತಿದ್ದಂತೆ ಪತಿ ಪತ್ನಿಯರಿಬ್ಬರ ನಡುವೆ ಮಾತುಕತೆ ಕಡಿಮೆಯಾಗಿದೆ. ಇದಲ್ಲದೇ ಪತಿ ದೈಹಿಕ ಸಂಪರ್ಕಕ್ಕಾಗಿ ಹತ್ತಿರ ಬಂದಾಗ ಪತ್ನಿ ದೂರವಾಗುತ್ತಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ಮಾತುಕತೆಯಿಂದ ಹಿಡಿದು ಲೈಂಗಿಕ ಕ್ರಿಯೆ ನಡೆಸಬೇಕಾದರೂ ಆಕೆ ಹಣದ ಬೇಡಿಕೆ ಇಡುತ್ತಿದ್ದಳು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಏಕಕಾಲದಲ್ಲಿ ಇಬ್ಬರು ವೈದ್ಯರನ್ನು ಪ್ರೀತಿಯ ಬಲೆಗೆ ಬೀಳಿಸಿದ ನರ್ಸ್; ವಿಷಯ ತಿಳಿದು ಐಸಿಯುಗೆ ದಾಖಲಾದ ಡಾಕ್ಟರ್ಸ್

ಇದೀಗ ಪತಿಯ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯ ಆತನಿಗೆ ಪತ್ನಿಯಿಂದ ಡೈವೋರ್ಸ್‌ ನೀಡಿದೆ. ಪ್ರತಿ ಬಾರಿ ಲೈಂಗಿಕತೆಯನ್ನು ಬಯಸಿದಾಗ ಅಥವಾ ಅವಳೊಂದಿಗೆ ಮಾತನಾಡಲು ಬಯಸಿದಾಗ ಆಕೆ NT$500 (Rs 1,260) ಬೇಡಿಕೆಯಿಡುತ್ತಿದ್ದಳು ಎಂದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us