‘ಇತಿಹಾಸದಲ್ಲೇ ಅತಿ ಹೆಚ್ಚು ಜನರಿಗೆ ಇಂಧನ ಸೌಲಭ್ಯ ನೀಡಿದ ದೇಶ ಭಾರತ’; ಪ್ರಧಾನಿ ಮೋದಿ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಶ್ಲಾಘನೆ

ಭಾರತದಲ್ಲಿ ಇಂಧನನ ಸೌಲಭ್ಯವನ್ನು ಐತಿಹಾಸಿಕವಾಗಿ ಬೇರಾವ ದೇಶವೂ ನೀಡದ ರೀತಿಯಲ್ಲಿ ವಿಸ್ತರಿಸಿದ್ದಕ್ಕಾಗಿ ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮಾನವ ಇತಿಹಾಸದಲ್ಲೇ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತದ ಅತ್ಯಂತ ಹೆಚ್ಚು ಜನರು ಇಂಧನ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.

‘ಇತಿಹಾಸದಲ್ಲೇ ಅತಿ ಹೆಚ್ಚು ಜನರಿಗೆ ಇಂಧನ ಸೌಲಭ್ಯ ನೀಡಿದ ದೇಶ ಭಾರತ’; ಪ್ರಧಾನಿ ಮೋದಿ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಶ್ಲಾಘನೆ
Pm Modi With Australian Pm Anthony Albanese

Updated on: Sep 26, 2026 | 8:42 PM

ಮೆಲ್ಬೋರ್ನ್, ಸೆಪ್ಟೆಂಬರ್ 26: ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಮೋದಿಯವರ ನಾಯಕತ್ವದಲ್ಲಿ ಭಾರತದಲ್ಲಿ ಇಂಧನ ಸೌಲಭ್ಯವನ್ನು ವಿಸ್ತರಿಸಿದ ಪ್ರಮಾಣವು ಮಾನವ ಇತಿಹಾಸದ ಯಾವುದೇ ದಶಕ, ಪ್ರದೇಶ ಅಥವಾ ದೇಶಕ್ಕಿಂತಲೂ ಹೆಚ್ಚಿನದಾಗಿದೆ ಎಂದು ಬಣ್ಣಿಸಿದ್ದಾರೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರಕ್ಕೆ ಅಡಚಣೆ ಉಂಟಾಗಿ, ಜಾಗತಿಕ ಇಂಧನ ಮಾರುಕಟ್ಟೆ ತೀವ್ರ ಒತ್ತಡಕ್ಕೆ ಸಿಲುಕಿರುವ ಸಮಯದಲ್ಲಿಯೇ ಆಲ್ಬನೀಸ್ ಅವರ ಈ ಹೇಳಿಕೆಗಳು ಬಂದಿವೆ.

ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್, “ಪ್ರಧಾನಿ ಮೋದಿಯವರ ಸಾಧನೆಯನ್ನು ಗುರುತಿಸಲೇಬೇಕು. ಮಾನವನ ಇತಿಹಾಸದ ಯಾವುದೇ ದಶಕ, ಯಾವುದೇ ಪ್ರದೇಶ ಅಥವಾ ಯಾವುದೇ ದೇಶಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರಿಗೆ ಮೋದಿಯವರ ಆಡಳಿತಾವಧಿಯಲ್ಲಿ ಭಾರತದಲ್ಲಿ ಇಂಧನ ಸೌಲಭ್ಯವನ್ನು ಒದಗಿಸಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂಧನದ ಬಿಕ್ಕಟ್ಟಿಗೆ ಕಂಗೆಟ್ಟ ಪಾಕಿಸ್ತಾನ; ಅಧಿಕಾರಿಗಳ ವಿದೇಶ ಪ್ರವಾಸ ನಿಷೇಧ, ಮದುವೆಗೆ ಒಂದೇ ಖಾದ್ಯ

ಅಮೆರಿಕ ಮತ್ತು ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರಕ್ಕೆ ಅಡಚಣೆ ಉಂಟಾಗಿ, ಇಡೀ ವಿಶ್ವವೇ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಆಂಟೋನಿ ಆಲ್ಬನೀಸ್ ಅವರ ಈ ಹೇಳಿಕೆ ಭಾರತದ ಇಂಧನ ನೀತಿಯ ಮಹತ್ವವನ್ನು ಎತ್ತಿಹಿಡಿದಿದೆ. ಇದೇ ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಪ್ರಧಾನಿ ಮೋದಿ ಆಸ್ಟ್ರೇಲಿಯಾದ ಜೊತೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿರುವ ನಾಯಕರಾಗಿದ್ದಾರೆ ಎಂದಿದ್ದಾರೆ.


ಪಶ್ಚಿಮ ಏಷ್ಯಾದ ಸಂಘರ್ಷದ ನಂತರ ಜಾಗತಿಕ ಇಂಧನ ಭದ್ರತೆಯ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತವು ತನ್ನ ಇಂಧನ ಆಮದು ಮೂಲಗಳನ್ನು ವೈವಿಧ್ಯಗೊಳಿಸುವ ಮೂಲಕ ಪೂರೈಕೆಯ ಅಪಾಯಗಳನ್ನು ಕಡಿಮೆ ಮಾಡಲು ಮುಂದಾಗಿದೆ.

41 ದೇಶಗಳಿಗೆ ವಿಸ್ತರಣೆ:

ಈ ವರ್ಷದ ಆರಂಭದಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಳೆದ 11 ವರ್ಷಗಳಲ್ಲಿ ಭಾರತವು ಇಂಧನ ಆಮದು ಮಾಡಿಕೊಳ್ಳುವ ದೇಶಗಳ ಸಂಖ್ಯೆಯನ್ನು 27ರಿಂದ 41ಕ್ಕೆ ಹೆಚ್ಚಿಸಿದೆ ಎಂದು ತಿಳಿಸಿದ್ದರು. ಭಾರತವು ಈಗ 41 ದೇಶಗಳಿಂದ ಕಚ್ಚಾ ತೈಲ, ಎಲ್‌ಎನ್‌ಜಿ ಮತ್ತು ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜತೆಗಿನ ಮಹಿಳೆಯ ಮಾರ್ಫ್ ಫೋಟೋ ಡಿಲೀಟ್ ಮಾಡಲು ಹೈಕೋರ್ಟ್ ಆದೇಶ; ಸಿಜೆಪಿ ನಾಯಕರಿಗೂ ನೋಟಿಸ್!

ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಅಡೆತಡೆಗಳಿಗೆ ಪ್ರತಿಯಾಗಿ, ಭಾರತೀಯ ತೈಲ ಸಂಸ್ಕರಣಾಗಾರಗಳು ರಷ್ಯಾ ಮತ್ತು ಇತರ ಸಾಂಪ್ರದಾಯಿಕ ಪೂರೈಕೆದಾರರಿಂದ ತೈಲವನ್ನು ಪಡೆಯುವುದನ್ನು ಮುಂದುವರಿಸುವುದರ ಜೊತೆಗೆ ವೆನೆಜುವೆಲಾ, ಬ್ರೆಜಿಲ್, ಅಂಗೋಲಾ ಮತ್ತು ನೈಜೀರಿಯಾ ಸೇರಿದಂತೆ ಇತರ ದೇಶಗಳಿಂದ ಖರೀದಿಯನ್ನು ಹೆಚ್ಚಿಸಿವೆ.

ಪ್ರಧಾನಿ ಮೋದಿ ಮತ್ತು ಆಲ್ಬನೀಸ್ ಜುಲೈನಲ್ಲಿ ಮೆಲ್ಬೋರ್ನ್‌ನಲ್ಲಿ ‘3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ’ಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಉಭಯ ನಾಯಕರು ಇಂಧನ, ನಿರ್ಣಾಯಕ ಖನಿಜಗಳು, ರಕ್ಷಣೆ, ತಂತ್ರಜ್ಞಾನ ಮತ್ತು ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us