AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Burkina Faso: ಬುರ್ಕಿನಾ ಫಾಸೊದಲ್ಲಿ ಜಿಹಾದಿ ದಾಳಿ, 100ಕ್ಕೂ ಅಧಿಕ ಮಂದಿ ಸಾವು

ಉತ್ತರ ಬುರ್ಕಿನಾ ಫಾಸೊ(Burkina Faso) ದಲ್ಲಿರುವ ಜಿಹಾದಿ ಗುಂಪು ಮಿಲಿಟರಿ ನೆಲೆಗಳು ಮತ್ತು ಜಿಬೊ ನಗರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿದೆ.  ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಸೈನಿಕರಾಗಿದ್ದರು. ಬುರ್ಕಿನಾ ಫಾಸೊದ ಅತ್ಯಂತ ಹಾನಿಗೊಳಗಾದ ಪ್ರದೇಶದಲ್ಲಿರುವ ವ್ಯಕ್ತಿಯೊಬ್ಬರು ಮಿಲಿಟರಿ ನೆಲೆ ಮತ್ತು ಜಿಬೊ ನಗರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ಭಾನುವಾರ ಮುಂಜಾನೆ ದಾಳಿ ನಡೆದಿದೆ ಎಂದು ಹೇಳಿದರು. ಈ ದಾಳಿಯಲ್ಲಿ ತನ್ನ ತಂದೆ ಕೂಡ ಸಾವನ್ನಪ್ಪಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದ್ದಾಳೆ.

Burkina Faso: ಬುರ್ಕಿನಾ ಫಾಸೊದಲ್ಲಿ ಜಿಹಾದಿ ದಾಳಿ, 100ಕ್ಕೂ ಅಧಿಕ ಮಂದಿ ಸಾವು
ಬುರ್ಕಿನಾ ಫಾಸೊ Image Credit source: Moneycontrol
Follow us
ನಯನಾ ರಾಜೀವ್
|

Updated on: May 13, 2025 | 11:16 AM

ಬುರ್ಕಿನಾ ಫಾಸೊ, ಮೇ 13: ಉತ್ತರ ಬುರ್ಕಿನಾ ಫಾಸೊ(Burkina Faso) ದಲ್ಲಿರುವ ಜಿಹಾದಿ ಗುಂಪು ಮಿಲಿಟರಿ ನೆಲೆಗಳು ಮತ್ತು ಜಿಬೊ ನಗರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿದೆ.  ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಸೈನಿಕರಾಗಿದ್ದರು. ಬುರ್ಕಿನಾ ಫಾಸೊದ ಅತ್ಯಂತ ಹಾನಿಗೊಳಗಾದ ಪ್ರದೇಶದಲ್ಲಿರುವ ವ್ಯಕ್ತಿಯೊಬ್ಬರು ಮಿಲಿಟರಿ ನೆಲೆ ಮತ್ತು ಜಿಬೊ ನಗರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ಭಾನುವಾರ ಮುಂಜಾನೆ ದಾಳಿ ನಡೆದಿದೆ ಎಂದು ಹೇಳಿದರು. ಈ ದಾಳಿಯಲ್ಲಿ ತನ್ನ ತಂದೆ ಕೂಡ ಸಾವನ್ನಪ್ಪಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದ್ದಾಳೆ.

ಅಲ್-ಖೈದಾ ಸಂಬಂಧಿತ ಜಿಹಾದಿ ಸಂಘಟನೆ ಜಮಾತ್ ನಸ್ರ್ ಅಲ್-ಇಸ್ಲಾಂ ವಾಲ್-ಮುಸ್ಲಿಮೀನ್ ಅಥವಾ ಜೆಎನ್‌ಐಎಂ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ . ಈ ಸಂಸ್ಥೆ ಸಹೇಲ್ ಪ್ರದೇಶದಲ್ಲಿ ಸಕ್ರಿಯವಾಗಿದೆ.

ದೇಶದ ಜನಸಂಖ್ಯೆ 23 ಮಿಲಿಯನ್. ಈ ದೇಶವು ಆಫ್ರಿಕಾದ ಸಹೇಲ್ ಪ್ರದೇಶದಲ್ಲಿದೆ, ಇಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವು ಹೆಚ್ಚು ಪರಿಣಾಮ ಬೀರುತ್ತದೆ. ಹಿಂಸಾಚಾರವು 2022 ರಲ್ಲಿ ಎರಡು ದಂಗೆಗಳಿಗೆ ಕಾರಣವಾಯಿತು, ಬುರ್ಕಿನಾ ಫಾಸೊದ ಸರಿಸುಮಾರು ಅರ್ಧದಷ್ಟು ಭಾಗವು ಸರ್ಕಾರದ ನಿಯಂತ್ರಣದಿಂದ ಹೊರಗಿತ್ತು. ಭದ್ರತಾ ಪಡೆಗಳ ಮೇಲೂ ಕಾನೂನು ಬಾಹಿರ ಹತ್ಯೆಗಳ ಆರೋಪ ಹೊರಿಸಲಾಗಿದೆ.

ಭಾನುವಾರ ಬೆಳಗ್ಗೆ 6 ಗಂಟೆಗೆ ಅನೇಕ ಸ್ಥಳಗಳಲ್ಲಿ ದಾಳಿಗಳು ಏಕಕಾಲದಲ್ಲಿ ಪ್ರಾರಂಭವಾದವು ಎಂದು ವಿಶ್ಲೇಷಕ ಚಾರ್ಲಿ ವರ್ಬ್ ಹೇಳಿದ್ದಾರೆ. ಬುರ್ಕಿನಾ ಫಾಸೊದ ವಾಯುಪಡೆಯನ್ನು ಚದುರಿಸುವ ಪ್ರಯತ್ನದಲ್ಲಿ ಜೆಎನ್​ಐಎಂ ಹೋರಾಟಗಾರರು ಎಂಟು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ಜಿಬೊದಲ್ಲಿ ಅತಿದೊಡ್ಡ ದಾಳಿ ನಡೆದಿದ್ದು, ಅಲ್ಲಿ ಜೆಎನ್‌ಐಎಂ ಹೋರಾಟಗಾರರು ಮಿಲಿಟರಿ ಶಿಬಿರಗಳು ಮತ್ತು ಭಯೋತ್ಪಾದನಾ ನಿಗ್ರಹ ಘಟಕದ ಶಿಬಿರದ ಮೇಲೆ ದಾಳಿ ಮಾಡಿದರು.

ಇದಕ್ಕೂ ಮುನ್ನ, ಹೋರಾಟಗಾರರು ನಗರದ ಎಲ್ಲಾ ಪ್ರವೇಶ ಬಿಂದುಗಳನ್ನು ವಶಪಡಿಸಿಕೊಂಡರು. ಬುರ್ಕಿನಾ ಫಾಸೊ ಸೈನ್ಯದ ವಾಯು ಬೆಂಬಲವಿಲ್ಲದೆ ದಾಳಿಕೋರರು ಆ ಪ್ರದೇಶವನ್ನು ಹಲವಾರು ಗಂಟೆಗಳ ಕಾಲ ವಶಪಡಿಸಿಕೊಂಡರು ಎಂದು ವಿಶ್ಲೇಷಕ ವರ್ಬ್ ಹೇಳಿದ್ದಾರೆ. ಆದಾಗ್ಯೂ, ಜಿಬೊದಲ್ಲಿ ಅದೇ ಸ್ಥಳದಲ್ಲಿ ಹಿಂದಿನ ದಾಳಿಗಳಲ್ಲಿ, ಭದ್ರತಾ ಪಡೆಗಳು ಉಗ್ರಗಾಮಿಗಳನ್ನು ಹಿಮ್ಮೆಟ್ಟಿಸಿದ್ದವು.

ಮತ್ತಷ್ಟು ಓದಿ: Islamic State: ಭಾರತದ ಮೇಲೆ ದಾಳಿ ಮಾಡಲು ಒಂದಾಗಿ: ಏಷ್ಯಾ ಮುಸ್ಲಿಮರಿಗೆ ಕರೆ ನೀಡಿದ ಇಸ್ಲಾಮಿಕ್ ಸ್ಟೇಟ್ ವಕ್ತಾರರು

ವಾಸೆಮ್ ನಾರ್ಸ್​ ಮಾಡತನಾಡಿ,  ಬೆಳಗ್ಗೆ ನಡೆದ ದಾಳಿಯು ಬುರ್ಕಿನಾ ಫಾಸೊದಲ್ಲಿ JNIM ಎಂದಿಗಿಂತಲೂ ಹೆಚ್ಚು ಶಕ್ತಿಶಾಲಿ ಮತ್ತು ಸಕ್ರಿಯವಾಗಿದೆ ಎಂದು ತೋರಿಸಿದೆ ಎಂದು ಹೇಳಿದರು. ಜಿಬೋದಂತಹ ನಗರವನ್ನು ಗುರಿಯಾಗಿಸಿಕೊಂಡಿರುವುದು ಈ ಸಂಸ್ಥೆ ಈಗ ದೇಶದೊಳಗೆ ಸುಲಭವಾಗಿ ಚಲಿಸಬಹುದು ಎಂಬುದರ ಸೂಚನೆಯಾಗಿದೆ ಎಂದು ಅವರು ಹೇಳಿದರು. ತರಬೇತಿ ಪಡೆಯದ ನಾಗರಿಕರನ್ನು ಸೇನಾಪಡೆಗಳಿಗೆ ಸೇರಿಸಿಕೊಳ್ಳುವುದು ಸೇರಿದಂತೆ ಮಿಲಿಟರಿ ಜುಂಟಾದ ತಂತ್ರಗಳು ಅಂತರ-ಜನಾಂಗೀಯ ಉದ್ವಿಗ್ನತೆಯನ್ನು ಹೆಚ್ಚಿಸಿವೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!