ಮೈಸೂರಿನ ಅಭಿಷೇಕ್ ಅಂತ್ಯಕ್ರಿಯೆ ಅಮೆರಿಕದಲ್ಲಿ ನೆರವೇರಿತು

ಮೈಸೂರು: ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಮೈಸೂರು ಯುವಕ ಅಭಿಷೇಕ್​ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅಮೆರಿಕದ ಬಾಬಿಟ್ ಮೆಮೋರಿಯಲ್ ಚಾಪೆಲ್​ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಜರುಗಿದೆ. ಅಸ್ತಿ ಸಂಚಯ ಹಾಗೂ ಧಾರ್ಮಿಕ ಕ್ರಿಯೆಗಳು ಅಮೆರಿಕದ ಫೀನಿಕ್ಸ್​ನಲ್ಲಿರುವ ಪುತ್ತಿಗೆ ಮಠದಲ್ಲಿ ನಡೆಯಲಿದೆ. ನ. 28 ರಂದು ಅಮೆರಿಕದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಅಭಿಷೇಕ್(25) ಬಲಿಯಾಗಿದ್ದ. ಮೈಸೂರಿನ ಕುವೆಂಪು ನಗರದ ಯೋಗ ಶಿಕ್ಷಕ ಸುದೇಶ್ ಎಂಬುವವರ ಪುತ್ರ ಅಭಿಷೇಕ್. ಒಂದೂವರೆ ವರ್ಷದ ಹಿಂದೆ ಓದಲು ವಿದೇಶಕ್ಕೆ ತೆರಳಿದ್ದ. ಕ್ಯಾಲಿಫೋರ್ನಿಯಾ […]

ಮೈಸೂರಿನ ಅಭಿಷೇಕ್ ಅಂತ್ಯಕ್ರಿಯೆ ಅಮೆರಿಕದಲ್ಲಿ ನೆರವೇರಿತು
ಸಾಧು ಶ್ರೀನಾಥ್​

Updated on: Dec 07, 2019 | 11:04 AM

ಮೈಸೂರು: ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಮೈಸೂರು ಯುವಕ ಅಭಿಷೇಕ್​ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅಮೆರಿಕದ ಬಾಬಿಟ್ ಮೆಮೋರಿಯಲ್ ಚಾಪೆಲ್​ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಜರುಗಿದೆ. ಅಸ್ತಿ ಸಂಚಯ ಹಾಗೂ ಧಾರ್ಮಿಕ ಕ್ರಿಯೆಗಳು ಅಮೆರಿಕದ ಫೀನಿಕ್ಸ್​ನಲ್ಲಿರುವ ಪುತ್ತಿಗೆ ಮಠದಲ್ಲಿ ನಡೆಯಲಿದೆ.

ನ. 28 ರಂದು ಅಮೆರಿಕದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಅಭಿಷೇಕ್(25) ಬಲಿಯಾಗಿದ್ದ. ಮೈಸೂರಿನ ಕುವೆಂಪು ನಗರದ ಯೋಗ ಶಿಕ್ಷಕ ಸುದೇಶ್ ಎಂಬುವವರ ಪುತ್ರ ಅಭಿಷೇಕ್. ಒಂದೂವರೆ ವರ್ಷದ ಹಿಂದೆ ಓದಲು ವಿದೇಶಕ್ಕೆ ತೆರಳಿದ್ದ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಅಲ್ಲದೆ ಬಿಡುವಿನ ವೇಳೆ ಕ್ಯಾಲಿಫೋರ್ನಿಯಾ‌ ಬಳಿಯ ಸನ್ ಬೆರ್ನಾರ್ಡಿನೋ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us