ವಿಶ್ವಾಸ ಮತ ಕಳೆದುಕೊಂಡ ನೇಪಾಳ ಪ್ರಧಾನಿ ಪ್ರಚಂಡ ರಾಜೀನಾಮೆ; ಕೆಪಿ ಶರ್ಮಾ ಓಲಿ ಮುಂದಿನ ಪಿಎಂ

ನೇಪಾಳದ ಪ್ರಧಾನಮಂತ್ರಿ ಪ್ರಚಂಡ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಾಜಿ ಪ್ರಧಾನಿಗಳಾದ ಕೆ.ಪಿ ಶರ್ಮಾ ಓಲಿ ಮತ್ತು ಶೇರ್ ಬಹದ್ದೂರ್ ದೇವುಬಾ ಜುಲೈ 1ರಂದು ಮಧ್ಯರಾತ್ರಿ ಸಮ್ಮಿಶ್ರ ಒಪ್ಪಂದವನ್ನು ಮಾಡಿಕೊಂಡರು. ಆದರೆ, ಪ್ರಚಂಡ ರಾಜೀನಾಮೆ ನೀಡಲು ನಿರಾಕರಿಸಿದರು. ಅವರ ಸಿಪಿಎನ್-ಮಾವೋವಾದಿ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಯನ್ನು ಹೊಂದಿಲ್ಲದ ಕಾರಣ ಮತ್ತೊಂದು ವಿಶ್ವಾಸ ಮತಕ್ಕೆ ಕರೆ ನೀಡಿದ್ದರು.

ವಿಶ್ವಾಸ ಮತ ಕಳೆದುಕೊಂಡ ನೇಪಾಳ ಪ್ರಧಾನಿ ಪ್ರಚಂಡ ರಾಜೀನಾಮೆ; ಕೆಪಿ ಶರ್ಮಾ ಓಲಿ ಮುಂದಿನ ಪಿಎಂ
ಪ್ರಚಂಡ
Follow us
ಸುಷ್ಮಾ ಚಕ್ರೆ
|

Updated on: Jul 12, 2024 | 9:01 PM

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಅವರು ಇಂದು (ಶುಕ್ರವಾರ) ಸಂಸತ್ತಿನಲ್ಲಿ ತಮ್ಮ ವಿಶ್ವಾಸ ಮತವನ್ನು ಕಳೆದುಕೊಂಡಿದ್ದಾರೆ. ಇದು ಮುಂದಿನ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಲು ಕಮ್ಯುನಿಸ್ಟ್ ಪ್ರತಿಸ್ಪರ್ಧಿ ಕೆ.ಪಿ ಶರ್ಮಾ ಓಲಿ ಅವರಿಗೆ ದಾರಿ ಮಾಡಿಕೊಟ್ಟಿತು. ಹೀಗಾಗಿ, ಪ್ರಧಾನಿ ಸ್ಥಾನಕ್ಕೆ ಪ್ರಚಂಡ ಅವರು ರಾಜೀನಾಮೆ ನೀಡಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸ್‌ಸ್ಟ್ ಲೆನಿನಿಸ್ಟ್ (CPN-UML) ತನ್ನ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಮತ್ತು ನೇಪಾಳಿ ಕಾಂಗ್ರೆಸ್‌ನೊಂದಿಗೆ ತಡರಾತ್ರಿಯ ಸಮ್ಮಿಶ್ರ ಒಪ್ಪಂದವನ್ನು ಮಾಡಿಕೊಂಡ ನಂತರ ಪ್ರಚಂಡ ಅವರು ಐದನೇ ವಿಶ್ವಾಸ ಮತಕ್ಕೆ ಕರೆ ನೀಡಿದರು. ಅದರಲ್ಲಿ ಪ್ರಚಂಡ ಅವರಿಗೆ ಬಹುಮತ ಲಭ್ಯವಾಗಿಲ್ಲ.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (HOR) ನಲ್ಲಿ 69 ವರ್ಷದ ಪ್ರಚಂಡ 63 ಮತಗಳನ್ನು ಪಡೆದರು. ಈ ನಿರ್ಣಯದ ವಿರುದ್ಧ 194 ಮತಗಳು ಬಿದ್ದವು. ವಿಶ್ವಾಸಮತ ಗೆಲ್ಲಲು ಕನಿಷ್ಠ 138 ಮತಗಳ ಅಗತ್ಯವಿದೆ. ಪ್ರಚಂಡ ಅವರು ಡಿಸೆಂಬರ್ 25, 2022ರಂದು ಅಧಿಕಾರ ವಹಿಸಿಕೊಂಡಾಗಿನಿಂದ 4 ವಿಶ್ವಾಸ ಮತಗಳನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನ ಕರಾಳ ಘಟ್ಟ; ಸಂವಿಧಾನ ಹತ್ಯಾ ದಿನದ ಕುರಿತು ಪಿಎಂ ಮೋದಿ ಪ್ರತಿಕ್ರಿಯೆ

ದಹಾಲ್‌ನ ಸಿಪಿಎನ್-ಮಾವೋವಾದಿ ಕೇಂದ್ರವು ಸಂಸತ್ತಿನಲ್ಲಿ ಕೇವಲ 32 ಸದಸ್ಯರನ್ನು ಹೊಂದಿದೆ. ನೇಪಾಳಿ ಕಾಂಗ್ರೆಸ್ 89 ಸ್ಥಾನಗಳನ್ನು ಹೊಂದಿದ್ದರೆ, ಸಿಪಿಎನ್-ಯುಎಂಎಲ್ 78 ಸ್ಥಾನಗಳನ್ನು ಹೊಂದಿದೆ. ಅವರ ಒಟ್ಟು 167 ಬಲವು ಕೆಳಮನೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 138ಕ್ಕಿಂತ ಹೆಚ್ಚು. NC ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಈಗಾಗಲೇ ನೇಪಾಳದ ಮುಂದಿನ ಪ್ರಧಾನಿಯಾಗಿ ಓಲಿಯನ್ನು ಅನುಮೋದಿಸಿದ್ದಾರೆ.

ಇದನ್ನೂ ಓದಿ: ಸಂಸತ್​ನಲ್ಲಿ ವಿಶ್ವಾಸ ಮತ ಕಳೆದುಕೊಂಡ ನೇಪಾಳ ಪ್ರಧಾನಿ ಪ್ರಚಂಡ

ಸಂಸತ್ತಿನ ಪ್ರಮುಖ ಪಕ್ಷಗಳಾದ ನೇಪಾಳಿ ಕಾಂಗ್ರೆಸ್, ಸಿಪಿಎನ್-ಯುಎಂಎಲ್ ಮತ್ತು ಜನತಾ ಸಮಾಜವಾದಿ ಪಕ್ಷಗಳು ಇಂದು ಮಂಡನೆಯಾಗಲಿರುವ ವಿಶ್ವಾಸ ನಿರ್ಣಯದ ವಿರುದ್ಧ ನಿಲ್ಲುವಂತೆ ತನ್ನ ಶಾಸಕರಿಗೆ ವಿಪ್ ನೀಡಿವೆ. ಓಲಿ ನೇತೃತ್ವದ CPN-UML ನೇಪಾಳಿ ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದವನ್ನು ಮಾಡಿಕೊಂಡ ನಂತರ ಕಳೆದ ವಾರ ಪ್ರಚಂಡ ನೇತೃತ್ವದ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಂಡಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ