Global youth unemployment Rate: ಜಾಗತಿಕ ಯುವ ನಿರುದ್ಯೋಗ ದರವು 15 ವರ್ಷಗಳ ಅತ್ಯಂತ ಕಡಿಮೆ ಮಟ್ಟದಲ್ಲಿದೆ: ಯುಎನ್ ವರದಿ

2023 ರಲ್ಲಿ ವಿಶ್ವದಾದ್ಯಂತ ನಿರುದ್ಯೋಗಿ ಯುವಜನರ ಒಟ್ಟು ಸಂಖ್ಯೆ 64.9 ಮಿಲಿಯನ್. ಇದು ಸಹಸ್ರಮಾನದ ಆರಂಭದಿಂದಲೂ ಕನಿಷ್ಠ ಸಂಖ್ಯೆಯಾಗಿದೆ.  ನಿರುದ್ಯೋಗ ದರ 13 ಪ್ರತಿಶತ ಆಗಿದ್ದು, ಕಳೆದ ವರ್ಷ ಯುವ ನಿರುದ್ಯೋಗ ದರವು 15 ವರ್ಷಗಳಲ್ಲಿ ಅತೀ ಕಡಿಮೆ ಆಗಿದೆ. 2019 ರಲ್ಲಿ ಇದು13.8 ಪ್ರತಿಶತದಷ್ಟು ಆಗಿತ್ತು.

Global youth unemployment Rate: ಜಾಗತಿಕ ಯುವ ನಿರುದ್ಯೋಗ ದರವು 15 ವರ್ಷಗಳ ಅತ್ಯಂತ ಕಡಿಮೆ ಮಟ್ಟದಲ್ಲಿದೆ: ಯುಎನ್ ವರದಿ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Aug 12, 2024 | 3:01 PM

ಜಿನೀವಾ ಆಗಸ್ಟ್ 12 : ಜಾಗತಿಕ ಯುವ ನಿರುದ್ಯೋಗವು 15 ವರ್ಷಗಳ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ವಿಶ್ವಸಂಸ್ಥೆ (UN) ಸೋಮವಾರ ಹೇಳಿದೆ. ಆದಾಗ್ಯೂ, ಎಲ್ಲಾ ಪ್ರದೇಶಗಳು ಇನ್ನೂ ಕೋವಿಡ್ -19 (Covid 19) ಹೊಡೆತದಿಂದ ಚೇತರಿಸಿಕೊಂಡಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಉದ್ಯೋಗ, ಶಿಕ್ಷಣ ಅಥವಾ ತರಬೇತಿಯಲ್ಲಿ (NEET) ಇಲ್ಲದ 15 ರಿಂದ 24 ವರ್ಷ ವಯಸ್ಸಿನವರ ಸಂಖ್ಯೆ ಕಳವಳದಿಂದ ಕೂಡಿದೆ ಎಂದು ಯುಎನ್‌ನ ಕಾರ್ಮಿಕ ಸಂಸ್ಥೆ ಮಾಹಿತಿ ನೀಡಿದೆ. ಅದೇ  ವೇಳೆ ಕೋವಿಡ್-19 ನಂತರದ ಸಾಂಕ್ರಾಮಿಕ ಚೇತರಿಕೆಯು ಎಲ್ಲಾ ಪ್ರದೇಶಗಳಲ್ಲಿ ಒಂದೇ ರೀತಿ ಆಗಿಲ್ಲ ಎಂದು ಅದು ಹೇಳಿದೆ.

ಕೆಲವು ಪ್ರದೇಶಗಳಲ್ಲಿನ ಯುವಕರು ಮತ್ತು ಅನೇಕ ಯುವತಿಯರು ಆರ್ಥಿಕ ಚೇತರಿಕೆಯ ಪ್ರಯೋಜನಗಳನ್ನು ನೋಡುತ್ತಿಲ್ಲ ಎಂದು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಹೇಳಿದೆ.

ಯುಎನ್ ವರದಿಯ ಮುಖ್ಯಾಂಶಗಳು

2023 ರಲ್ಲಿ ವಿಶ್ವದಾದ್ಯಂತ ನಿರುದ್ಯೋಗಿ ಯುವಜನರ ಒಟ್ಟು ಸಂಖ್ಯೆ 64.9 ಮಿಲಿಯನ್. ಇದು ಸಹಸ್ರಮಾನದ ಆರಂಭದಿಂದಲೂ ಕನಿಷ್ಠ ಸಂಖ್ಯೆಯಾಗಿದೆ.  ನಿರುದ್ಯೋಗ ದರ 13 ಪ್ರತಿಶತ ಆಗಿದ್ದು, ಕಳೆದ ವರ್ಷ ಯುವ ನಿರುದ್ಯೋಗ ದರವು 15 ವರ್ಷಗಳಲ್ಲಿ ಅತೀ ಕಡಿಮೆ ಆಗಿದೆ. 2019 ರಲ್ಲಿ ಇದು13.8 ಪ್ರತಿಶತದಷ್ಟು ಆಗಿತ್ತು. ಆದಾಗ್ಯೂ ಇದು ಈ ವರ್ಷ ಮತ್ತು ಮುಂದಿನ ವರ್ಷ 12.8 ಶೇಕಡಾಕ್ಕೆ ಮತ್ತಷ್ಟು ಕುಸಿಯುವ ನಿರೀಕ್ಷೆಯಿದೆ.

ಆದಾಗ್ಯೂ ಇದು ಎಲ್ಲಾ ಪ್ರದೇಶಗಳಲ್ಲಿ ಒಂದೇ ಆಗಿರುವುದಿಲ್ಲ. ಅರಬ್ ರಾಜ್ಯಗಳು, ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ನಲ್ಲಿ, ಯುವ ನಿರುದ್ಯೋಗ ದರಗಳು 2019 ಕ್ಕಿಂತ 2023 ರಲ್ಲಿ ಹೆಚ್ಚಾಗಿದೆ.  ILO ದ ಯುವಕರಿಗಾಗಿ ಜಾಗತಿಕ ಉದ್ಯೋಗ ಪ್ರವೃತ್ತಿಗಳು 2024 ವರದಿಯು ಯುವಜನರಿಗೆ ಕೆಲಸ ಅಥವಾ ಉದ್ಯೋಗಗಳ ಪ್ರಕ್ರಿಯೆಯು ನಿಯಮಿತ ಅಥವಾ ಶಾಶ್ವತವಾಗುವ ಸಾಧ್ಯತೆ ಕಡಿಮೆದ ಬಗ್ಗೆ ಎಚ್ಚರಿಸಿದೆ.

ಹಲವಾರು ಯುವಕರು NEET (ಯುವಕರು ನಿರುದ್ಯೋಗಿಗಳಾಗಿರಬಹುದು ಅಥವಾ ನಿಷ್ಕ್ರಿಯರಾಗಿರಬಹುದು ಮತ್ತು ಶಿಕ್ಷಣ ಅಥವಾ ತರಬೇತಿಯಲ್ಲಿ ಭಾಗಿಯಾಗಿಲ್ಲ)ಆಗಿದ್ದಾರೆ. ಯೋಗ್ಯ ಉದ್ಯೋಗಗಳನ್ನು ಪ್ರವೇಶಿಸುವ ಅವಕಾಶಗಳು ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸೀಮಿತವಾಗಿವೆ.

2023 ರಲ್ಲಿ NEET ದರವು 20.4 ಪ್ರತಿಶತ ಇತ್ತು. ಮೂರು NEET ಗಳಲ್ಲಿ ಇಬ್ಬರು ಮಹಿಳೆಯರು. NEET ದರವು 2023 ರಲ್ಲಿ ಯುವತಿಯರಿಗೆ 28.1 ಶೇಕಡಾ ಮತ್ತು ಯುವಕರಿಗೆ 13.1 ಶೇಕಡಾ ಆಗಿದೆ. ಜಾಗತಿಕವಾಗಿ ಅರ್ಧಕ್ಕಿಂತ ಹೆಚ್ಚು ಯುವ ಕಾರ್ಮಿಕರು ಅನೌಪಚಾರಿಕ ಉದ್ಯೋಗದಲ್ಲಿದ್ದಾರೆ.

ಇದನ್ನೂ ಓದಿ: International Youth Day 2024 : ಯುವಕರಿಗೆ ಸ್ಫೂರ್ತಿ ನೀಡುವ ಮಹಾನ್ ವ್ಯಕ್ತಿಗಳ ನುಡಿ ಮುತ್ತುಗಳಿವು

ಹೆಚ್ಚಿನ ಮತ್ತು ಮೇಲ್ಮಧ್ಯಮ-ಆದಾಯದ ಆರ್ಥಿಕತೆಗಳಲ್ಲಿ ಮಾತ್ರ ಇಂದು ಹೆಚ್ಚಿನ ಯುವ ಕಾರ್ಮಿಕರು ನಿಯಮಿತ, ಸುರಕ್ಷಿತ ಕೆಲಸದಲ್ಲಿದ್ದಾರೆ. ವಿಶ್ವದಾದ್ಯಂತ ಲಕ್ಷಾಂತರ ಯುವಕರು ಯೋಗ್ಯವಾದ ಕೆಲಸವನ್ನು ಹೊಂದಿಲ್ಲದಿರುವಾಗ ಮತ್ತು ಪರಿಣಾಮವಾಗಿ, ಅಭದ್ರತೆಯ ಭಾವನೆ ಮತ್ತು ತಮ್ಮ ಮತ್ತು ಅವರ ಕುಟುಂಬಗಳಿಗೆ ಉತ್ತಮ ಜೀವನವನ್ನು ನಿರ್ಮಿಸಲು ಸಾಧ್ಯವಾಗದಿದ್ದಾಗ ನಮ್ಮಲ್ಲಿ ಯಾರೂ ಸ್ಥಿರವಾದ ಭವಿಷ್ಯವನ್ನು ಎದುರುನೋಡುವುದಿಲ್ಲ ಎಂದು ILO ಮುಖ್ಯಸ್ಥ ಗಿಲ್ಬರ್ಟ್ ಎಫ್ ಹೌಂಗ್ಬೊ ಹೇಳಿದ್ದಾರೆ.

ಶಾಂತಿಯುತ ಸಮಾಜಗಳು ಮೂರು ಪ್ರಮುಖ ಅಂಶಗಳನ್ನು ಅವಲಂಬಿಸಿವೆ. ಸ್ಥಿರತೆ, ಸೇರ್ಪಡೆ ಮತ್ತು ಸಾಮಾಜಿಕ ನ್ಯಾಯ, ಯುವಕರಿಗೆ ಯೋಗ್ಯವಾದ ಕೆಲಸ ಈ ಮೂರು ಅಂಶಗಳು ಎಂದು ಟೋಗೊದ ಮಾಜಿ ಪ್ರಧಾನಿ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ