AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಬೇಡದಿದ್ದರೂ ಸಂಭೋಗದ ವೇಳೆ ಸ್ಖಲನ ಮಾಡುವ ಗಂಡಸರಿಗೆ 8 ಲಕ್ಷ ರೂ.ವರೆಗೆ ದಂಡ!

ಮಗುವನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ಲೈಂಗಿಕ ಕ್ರಿಯೆಯ ವೇಳೆ ಸ್ಖಲನ ಮಾಡುವ ಪುರುಷರಿಗೆ 1 ಸಾವಿರ ಡಾಲರ್ (87,000 ರೂ.) ದಂಡ ವಿಧಿಸುವ ಮಸೂದೆಯನ್ನು ಮಂಡಿಸಲಾಗಿದೆ. ಕ್ರಮೇಣ ಈ ಮೊತ್ತವನ್ನು 10 ಸಾವಿರ ಡಾಲರ್​ಗೆ (8.66 ಲಕ್ಷ ರೂ.) ಹೆಚ್ಚಿಸಲಾಗುವುದು. ಓಹಿಯೋ ಶಾಸಕರು ಈ ಕರಡು ಮಸೂದೆಗೆ ಸಮ್ಮತಿ ಸೂಚಿಸಿದ್ದಾರೆ. ಈ ವಾರದ ಆರಂಭದಲ್ಲಿ ಓಹಿಯೋದಲ್ಲಿ ಬಿಡುಗಡೆಯಾದ ಕರಡು ಮಸೂದೆಯು ಮಗುವನ್ನು ಪಡೆಯಲು ಗರ್ಭ ಧರಿಸುವ ಉದ್ದೇಶವಿಲ್ಲದೆ ಸ್ಖಲನ ಮಾಡುವ ಪುರುಷರಿಗೆ ಭಾರೀ ದಂಡ ವಿಧಿಸುವ ಗುರಿಯನ್ನು ಹೊಂದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಮಗು ಬೇಡದಿದ್ದರೂ ಸಂಭೋಗದ ವೇಳೆ ಸ್ಖಲನ ಮಾಡುವ ಗಂಡಸರಿಗೆ 8 ಲಕ್ಷ ರೂ.ವರೆಗೆ ದಂಡ!
Relationship
TV9 Web
| Updated By: ಸುಷ್ಮಾ ಚಕ್ರೆ|

Updated on:Feb 14, 2025 | 6:45 PM

Share

ನ್ಯೂಯಾರ್ಕ್: ಅಮೆರಿಕದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಓಹಿಯೋ ಮಸೂದೆಯಡಿಯಲ್ಲಿ ಪುರುಷರು ಮಗುವನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ತಮ್ಮ ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಸ್ಖಲನ ಮಾಡಿದರೆ ಅವರು 1 ಸಾವಿರ ಡಾಲರ್​​ನಿಂದ 10,000 ಡಾಲರ್​​ವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ. ಪ್ರಸ್ತಾವಿತ ಮಸೂದೆಯ ಪ್ರಕಾರ, ಮಗುವನ್ನು ಗರ್ಭಧರಿಸುವ ಉದ್ದೇಶವಿಲ್ಲದೆ ಸ್ಖಲನ ಮಾಡಿದರೆ ಪುರುಷರು ಮೊದಲ ಬಾರಿಗೆ 1,000, ಡಾಲರ್ (87 ಸಾವಿರ ರೂ.) ಎರಡನೇ ಬಾರಿಗೆ 5,000 ಡಾಲರ್ ಮತ್ತು ನಂತರದ ಅಪರಾಧಕ್ಕಾಗಿ 10,000 ಡಾಲರ್ (8.66 ಲಕ್ಷ ರೂ.) ದಂಡ ತೆರಬೇಕಾಗುತ್ತದೆ.

ಓಹಿಯೋದ ಇಬ್ಬರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಶಾಸಕರು ಪ್ರಸ್ತಾಪಿಸಿದ ಮಸೂದೆಯು ಮಕ್ಕಳನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ಲೈಂಗಿಕ ಕ್ರಿಯೆಯ ವೇಳೆ ಮಹಿಳೆಯ ಯೋನಿಯೊಳಗೆ ಸ್ಖಲಿಸುವ ‘ಅಪರಾಧ’ಕ್ಕಾಗಿ ಪುರುಷನಿಗೆ 1000 ಅಮೆರಿಕನ್ ಡಾಲರ್ ದಂಡ ವಿಧಿಸಲು ಪ್ರಸ್ತಾಪಿಸಿದೆ. ಕ್ರಮೇಣ ಈ ದಂಡವನ್ನು 5000 ಡಾಲರ್ ಮತ್ತು ಅಂತಿಮವಾಗಿ 10,000 ಡಾಲರ್​ಗೆ ಹೆಚ್ಚಿಸಲಾಗುವುದು. ಡೆಮಾಕ್ರಟಿಕ್ ಪಕ್ಷದ ಶಾಸಕರಾದ ಅನಿತಾ ಸೋಮಾನಿ ಮತ್ತು ಟ್ರಿಸ್ಟಾನ್ ರೇಡರ್ ಅವರು ಈ ಮಸೂದೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇದನ್ನೂ ಓದಿ: ಚರಂಡಿಯಲ್ಲಿ ಪತ್ತೆಯಾಯ್ತು ಭ್ರೂಣ, ಅಪ್ರಾಪ್ತನೊಂದಿಗಿನ ಸಂಬಂಧದಿಂದ ಗರ್ಭಿಣಿಯಾಗಿದ್ದ ಬಾಲಕಿ

ಸಂತಾನೋತ್ಪತ್ತಿ ಹಕ್ಕುಗಳ ಕುರಿತು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಲು ಈ ಮಸೂದೆಯನ್ನು ಪರಿಚಯಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ. ಗರ್ಭಪಾತದಿಂದ ಮಹಿಳೆಯ ಶರೀರ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮಹಿಳೆ ಸ್ವಂತವಾಗಿ ಗರ್ಭಿಣಿಯಾಗುವುದಿಲ್ಲ. ಅದಕ್ಕೆ ಕಾರಣಕರ್ತನಾಗುವ ಪುರುಷನೂ ಆಕೆ ಗರ್ಭ ಧರಿಸದಿರುವ ಬಗ್ಗೆ ಎಚ್ಚರ ವಹಿಸಬೇಕು ಎಂಬ ಕಾರಣಕ್ಕೆ ಈ ದಂಡ ವಿಧಿಸಲಾಗುವುದು ಎಂದು ಅಮೆರಿಕದ ಶಾಸಕರು ತಿಳಿಸಿದ್ದಾರೆ.

ಇದನ್ನೂ ಓದಿ: 7 ವರ್ಷದ ಮಗುವನ್ನು ಕಚ್ಚಿ ದಾಳಿ ಮಾಡಿದ ಬೀದಿ ನಾಯಿಗಳು; ಗ್ವಾಲಿಯರ್​​ನಲ್ಲಿ ಶಾಕಿಂಗ್ ಘಟನೆ

2022ರಲ್ಲಿ ರೋ ವರ್ಸಸ್ ವೇಡ್ ತೀರ್ಪನ್ನು ರದ್ದುಗೊಳಿಸಿದ ನಂತರ ಗರ್ಭಪಾತವು ಅಮೆರಿಕದಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. ಈಗ, ಅತ್ಯಾಚಾರದ ಪರಿಣಾಮವಾಗಿ ಗರ್ಭ ಧರಿಸಿದಾಗಲೂ ಮಹಿಳೆ ಗರ್ಭಪಾತವನ್ನು ಮಾಡಿಸಿಕೊಳ್ಳುವುದು ಅಮೆರಿಕದ ಹಲವು ರಾಜ್ಯಗಳಲ್ಲಿ ಕಾನೂನುಬಾಹಿರವಾಗಿದೆ. ಹೀಗಾಗಿ, ಗರ್ಭಧಾರಣೆ, ಗರ್ಭಪಾತ, ಜನನ ನಿಯಂತ್ರಣ ಇತ್ಯಾದಿಗಳ ಬಗ್ಗೆ ಚರ್ಚೆಗಳು ಬಂದಾಗ ಪುರುಷರು ಸಂತಾನೋತ್ಪತ್ತಿಯ ವಿಷಯದಲ್ಲಿ ಸ್ವಲ್ಪ ಗಮನಹರಿಸಬೇಕು ಎಂದು ಈ ಮಸೂದೆ ಮಂಡಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Fri, 14 February 25