ಹೊಸ ಕೊವಿಡ್ ರೂಪಾಂತರಿ ಪತ್ತೆ? ಒಮಿಕ್ರಾನ್ ಉಪಪ್ರಭೇದ BA.2 ಬಗ್ಗೆ ಆತಂಕ; 426 ಪ್ರಕರಣಗಳು ವರದಿ
Coronavirus: ಭಾರತದಲ್ಲಿ ಕೂಡ ಕೊರೊನಾ ಸೋಂಕು ಮೂರನೇ ಅಲೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಹೊಸ ಪ್ರಭೇದ ಕಾಣಿಸಿಕೊಂಡಿರುವ ವಿಚಾರ ಬಹಿರಂಗವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಯುನೈಟೆಡ್ ಕಿಂಗ್ಡಮ್ನ ಆರೋಗ್ಯ ಅಧಿಕಾರಿಗಳು ಒಮಿಕ್ರಾನ್ ರೂಪಾಂತರಿ ಕೊವಿಡ್ ವೈರಸ್ನ ಉಪ ಪ್ರಭೇದ ಒಂದು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ರಾಯ್ಟರ್ಸ್ ಮಾಹಿತಿ ನೀಡಿದೆ. ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಈ ಪ್ರಭೇದವನ್ನು BA.2 ವೇರಿಯಂಟ್ ಎಂದು ಪ್ರತ್ಯೇಕಿಸಿದೆ. ವಿಶ್ವದಾದ್ಯಂತ ಕೊರೊನಾ ಪ್ರಕರಣಗಳು ಒಂದೆಡೆ ಏರಿಕೆ ಆಗುತ್ತಿವೆ. ಇತ್ತ ಭಾರತದಲ್ಲಿ ಕೂಡ ಕೊರೊನಾ ಸೋಂಕು ಮೂರನೇ ಅಲೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಹೊಸ ಪ್ರಭೇದ ಕಾಣಿಸಿಕೊಂಡಿರುವ ವಿಚಾರ ಬಹಿರಂಗವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
BA.2 ಆತಂಕ ಪಡಬೇಕಾದ ರೂಪಾಂತರಿ ವೈರಾಣು ಅಲ್ಲ ಎಂದು ಹೇಳಲಾಗಿದೆ. ಇದು ಒಮಿಕ್ರಾನ್ಗಿಂತ ವಿಶೇಷ ರೂಪಾಂತರ ಹೊಂದಿಲ್ಲ. ಹೀಗಾಗಿ ಡೆಲ್ಟಾ ರೂಪಾಂತರಿ ವೈರಾಣುವಿನಿಂದ ಇದನ್ನು ಖಚಿತವಾಗಿ ಪ್ರತ್ಯೇಕಿಸಿ ನೋಡಲು ಕಷ್ಟ ಎಂದು ಹೇಳಲಾಗಿದೆ. ಯುನೈಟೆಡ್ ಕಿಂಗ್ಡಮ್ ಈ ಪ್ರಭೇದದ 426 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಯುನೈಟೆಡ್ ಕಿಂಗ್ಡಮ್ ಮಾತ್ರ ಅಲ್ಲದೆ ಡೆನ್ಮಾರ್ಕ್, ಭಾರತ, ಸ್ವೀಡನ್ ಹಾಗೂ ಸಿಂಗಾಪುರದಲ್ಲಿ ಈ ಪ್ರಭೇದದ ಸೋಂಕು ಕಾಣಿಸಿಕೊಂಡಿದೆ. ಡೆನ್ಮಾರ್ಕ್ನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. UKHSA ಹೇಳಿಕೆಯಂತೆ ಮೇಲೆ ಹೇಳಿರುವ ದೇಶಗಳ ಜೊತೆಗೆ ಒಟ್ಟು 40 ದೇಶಗಳಲ್ಲಿ BA.2 ಉಪ ಪ್ರಭೇದದ ಸೋಂಕು ವರದಿ ಆಗಿದೆ.
BA.1 ಪ್ರಭೇದದ ಕೊರೊನಾ ಪ್ರಕರಣಕ್ಕೆ ತುತ್ತಾದವರು BA.2 ಗೆ ಅಷ್ಟು ಬೇಗ ತುತ್ತಾಗುವುದು ಸಾಧ್ಯ ಇಲ್ಲ ಎಂದು ಅಂದಾಜಿಸಲಾಗಿದೆ. ಏನೇ ಆದರೂ ಈ ಪ್ರಭೇದದ ಪ್ರಕರಣಗಳಲ್ಲಿ ಆಸ್ಪತ್ರೆಗೆ ಸೇರಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಭಯಪಡುವ ಅಗತ್ಯ ಇಲ್ಲ ಎಂದು ತಿಳಿಸಲಾಗಿದೆ.
ಭಾರತದಲ್ಲಿ ಲಸಿಕೆ ನೀಡಿಕೆ ಎಷ್ಟಾಗಿದೆ? ಕೊರೊನಾ ಪಾಸಿಟಿವಿಟಿ ದರ ಹೇಗಿದೆ?
ಭಾರತದಲ್ಲಿ ಇದುವರೆಗೆ ಒಟ್ಟು 161.16 ಕೋಟಿ ಡೋಸ್ ವ್ಯಾಕ್ಸಿನ್ ಅನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಇದುವರೆಗೆ ಒಟ್ಟು 71.34 ಕೋಟಿ ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,60,954 ಸ್ಯಾಂಪಲ್ ಪರೀಕ್ಷಿಸಲಾಗಿದೆ. ಭಾರತದಲ್ಲಿ ಪ್ರಸ್ತುತ ವಾರದ ಪಾಸಿಟಿವಿಟಿ ದರ ಶೇ.16.65 ಇದೆ.
ಇದನ್ನೂ ಓದಿ: Covid 19: ದೇಶದಲ್ಲಿ ತುಸು ಇಳಿಕೆ ಕಂಡ ಕೊರೊನಾ ಪ್ರಕರಣಗಳು, ಒಮಿಕ್ರಾನ್ ಕೇಸ್ಗಳಲ್ಲಿ ಏರಿಕೆ; ಪೂರ್ಣ ಮಾಹಿತಿ ಇಲ್ಲಿದೆ
ಇದನ್ನೂ ಓದಿ: Omicron: ಭಾರತದ ಮೆಟ್ರೋ ಸಿಟಿಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆ
Published On - 12:10 pm, Sat, 22 January 22