AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್ ಬಿಟ್ಟು ಸಿನಿಮಾ ನೋಡಲು ಹೋದ ಪ್ರಭಾಸ್, ಪ್ರಶಾಂತ್ ನೀಲ್; ಯಾವುದು ಆ ಚಿತ್ರ?

ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ಬೇರೆ ಬೇರೆ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಕೂಡ ಬಿಡುವು ಮಾಡಿಕೊಂಡು ಅವರಿಬ್ಬರು ಸಿನಿಮಾ ವೀಕ್ಷಿಸಲು ತೆರಳಿದ್ದಾರೆ. ಹೈದರಾಬಾದ್​ನ ಮಲ್ಟಿಪ್ಲೆಕ್ಸ್​ಗೆ ತೆರಳಿದ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ಹಾಲಿವುಡ್ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

ಶೂಟಿಂಗ್ ಬಿಟ್ಟು ಸಿನಿಮಾ ನೋಡಲು ಹೋದ ಪ್ರಭಾಸ್, ಪ್ರಶಾಂತ್ ನೀಲ್; ಯಾವುದು ಆ ಚಿತ್ರ?
Prabhas, Prashanth Neel
ಮದನ್​ ಕುಮಾರ್​
|

Updated on: Jul 15, 2025 | 7:26 PM

Share

ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ನಡುವೆ ಉತ್ತಮ ಒಡನಾಟ ಬೆಳೆದಿದೆ. ‘ಸಲಾರ್’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ ಅವರು ಆತ್ಮೀಯ ಸ್ನೇಹಿತರಾಗಿದ್ದಾರೆ. ಬಿಡುವು ಸಿಕ್ಕಾಗ ಒಟ್ಟಿಗೆ ಸಮಯ ಕಳೆಯುತ್ತಾರೆ. ಅದಕ್ಕೆ ಈಗ ಲೇಟೆಸ್ಟ್ ಉದಾಹರಣೆ ಸಿಕ್ಕಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ (Prabhas) ಅವರು ಜೊತೆಯಾಗಿ ಸಿನಿಮಾ ನೋಡಲು ತೆರಳಿದ್ದಾರೆ. ತಮ್ಮ ತಮ್ಮ ಸಿನಿಮಾಗಳ ಕೆಲಸಗಳನ್ನು ಬದಿಗಿಟ್ಟು ಅವರು ಹಾಲಿವುಡ್ ಸಿನಿಮಾ ವೀಕ್ಷಿಸಿದ್ದಾರೆ. ಅಂದಹಾಗೆ, ಅವರು ನೋಡಿರುವುದು ‘ಎಫ್​1’ (F1 The Movie) ಸಿನಿಮಾ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಜೂನ್ 27ರಂದು ‘ಎಫ್​1’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಬ್ರಾಡ್ ಪಿಟ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಕಾರ್ ರೇಸಿಂಗ್ ಕುರಿತ ಕಹಾನಿ ಇರುವ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾವನ್ನು ನೋಡಲು ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ಕೂಡ ತೆರಳಿದ್ದಾರೆ. ಆ ಮೂಲಕ ಅವರು ಸುದ್ದಿ ಆಗಿದ್ದಾರೆ.

ಇದನ್ನೂ ಓದಿ
Image
ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ‘ಕಲ್ಕಿ 2898 ಎಡಿ’ ಟೀಂ
Image
ಪ್ರಭಾಸ್ ಜೊತೆಗೆ ಹೊಂಬಾಳೆಯ 4ನೇ ಸಿನಿಮಾ, ನಿರ್ದೇಶಕ ಯಾರು?
Image
ತಂದೆ ಮೃತಪಟ್ಟ ನೋವಲ್ಲೂ ಸಹಾಯ ಮಾಡೋದು ಮರೆತಿರಲಿಲ್ಲ ಪ್ರಭಾಸ್  
Image
ಪ್ರಭಾಸ್​ರ ಹೊಸ ಚಿತ್ರ ಶೂಟಿಂಗ್​ಗೆ ಮುಹೂರ್ತ ಫಿಕ್ಸ್, ಬಿಡುಗಡೆ ಯಾವಾಗ?

ಹೈದರಾಬಾದ್​ನ ಪ್ರಸಾದ್ ಮಲ್ಟಿಪ್ಲೆಕ್ಸ್​ನಲ್ಲಿ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಅವರು ಸಿನಿಮಾ ವೀಕ್ಷಿಸಿದ್ದಾರೆ. ಅವರಿಬ್ಬರು ಒಟ್ಟಿಗೆ ಕುಳಿತಿರುವಾಗ ಅಭಿಮಾನಿಗಳಿಗಳು ಫೋಟೋ ಕ್ಲಿಕ್ಕಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ‘ಭಾರತದ ದೊಡ್ಡ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ನಮ್ಮ ಪ್ರಶಾಂತ್ ನೀಲ್ ಅವರು ಎಫ್1 ಸಿನಿಮಾ ನೋಡುತ್ತಿದ್ದಾರೆ’ ಎಂಬ ಕ್ಯಾಪ್ಷನ್​ನೊಂದಿಗೆ ಫೋಟೋ ಹಂಚಿಕೊಳ್ಳಲಾಗಿದೆ.

ಅಷ್ಟಕ್ಕೂ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ‘ಎಫ್1’ ಸಿನಿಮಾವನ್ನು ನೋಡಲು ಏನಾದರೂ ನಿರ್ದಿಷ್ಟ ಕಾರಣ ಇರಬಹುದೇ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಮುಂದಿನ ಸಿನಿಮಾಗೆ ಏನಾದರೂ ಸ್ಫೂರ್ತಿ ಪಡೆಯುವ ಸಲುವಾಗಿ ಅವರಿಬ್ಬರು ಈ ಸಿನಿಮಾ ನೋಡಿರಬಹುದಾ ಎಂಬ ಅನುಮಾನ ಕೆಲವರಿಗೆ ಇದೆ.

ಇದನ್ನೂ ಓದಿ: ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಜೊತೆ ಕರೀನಾ ಕಪೂರ್ ಸ್ಪೆಷಲ್ ಸಾಂಗ್?

ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಡಿಸೆಂಬರ್ 5ರಂದು ಈ ಚಿತ್ರ ತೆರೆಕಾಣಲಿದೆ. ಇತ್ತ, ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್​ಟಿಆರ್ ಜೊತೆಗಿನ ಸಿನಿಮಾದಲ್ಲಿ ತೊಡಗಿಕೊಂಡಿದ್​ದಾರೆ. ಬಳಿಕ ಅವರು ‘ಸಲಾರ್ 2’ ಸಿನಿಮಾ ಮಾಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.