ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ಕರಾಚಿ ವಿಮಾನ ಪತನ!

ಕರಾಚಿ: ಕರಾಚಿಯಲ್ಲಿ ನಾಗರಿಕ ವಿಮಾನವೊಂದು ಪತನಗೊಂಡಿದೆ. ಕರಾಚಿ ಏರ್​ಪೋರ್ಟ್​ ಬಳಿ ಲ್ಯಾಂಡಿಂಗ್ ಮಾಡಲು ಒಂದೆರಡು ನಿಮಿಷ ಇರುವಾಗ ಪತನವಾಗಿದೆ. ತಾಂತ್ರಿಕ ದೋಷದಿಂದ ವಸತಿ ಪ್ರದೇಶದಲ್ಲಿ, ಮನೆಗಳ ಮೇಲೆ A320 ವಿಮಾನ ನೋಸ್ ಡೈವ್​ ಹೊಡೆದು ಬಿದ್ದಿದೆ. Black Friday, Corona Effect ಪಾಕಿಸ್ತಾನಕ್ಕೆ ಇಂದು ಕಪ್ಪು ಶುಕ್ರವಾರ ಆಗಿದೆ. ಇಂದು  ರಂಜಾನ್ ಮಾಸದ ಕೊನೆಯ ಶುಕ್ರವಾರ.  ಕೊರೊನಾ ವೈರಸ್​ ಕಾಟದಿಂದಾಗಿ ದೀರ್ಘಕಾಲದ ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ವಿಮಾನವೊಂದು ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ. ನತದೃಷ್ಟ PK-8303 flight ವಿಮಾನದಲ್ಲಿ […]

ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ಕರಾಚಿ ವಿಮಾನ ಪತನ!
ಸಾಧು ಶ್ರೀನಾಥ್​

Updated on: May 22, 2020 | 4:57 PM

ಕರಾಚಿ: ಕರಾಚಿಯಲ್ಲಿ ನಾಗರಿಕ ವಿಮಾನವೊಂದು ಪತನಗೊಂಡಿದೆ. ಕರಾಚಿ ಏರ್​ಪೋರ್ಟ್​ ಬಳಿ ಲ್ಯಾಂಡಿಂಗ್ ಮಾಡಲು ಒಂದೆರಡು ನಿಮಿಷ ಇರುವಾಗ ಪತನವಾಗಿದೆ. ತಾಂತ್ರಿಕ ದೋಷದಿಂದ ವಸತಿ ಪ್ರದೇಶದಲ್ಲಿ, ಮನೆಗಳ ಮೇಲೆ A320 ವಿಮಾನ ನೋಸ್ ಡೈವ್​ ಹೊಡೆದು ಬಿದ್ದಿದೆ.

Black Friday, Corona Effect
ಪಾಕಿಸ್ತಾನಕ್ಕೆ ಇಂದು ಕಪ್ಪು ಶುಕ್ರವಾರ ಆಗಿದೆ. ಇಂದು  ರಂಜಾನ್ ಮಾಸದ ಕೊನೆಯ ಶುಕ್ರವಾರ.  ಕೊರೊನಾ ವೈರಸ್​ ಕಾಟದಿಂದಾಗಿ ದೀರ್ಘಕಾಲದ ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ವಿಮಾನವೊಂದು ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ. ನತದೃಷ್ಟ PK-8303 flight ವಿಮಾನದಲ್ಲಿ ಐದು ಸಿಬ್ಬಂದಿಯ ಜೊತೆಗೆ 51 ಮಂದಿ ಪುರುಷರು, 31 ಮಹಿಳೆಯರು ಮತ್ತು 9 ಮಕ್ಕಳು ಪ್ರಯಾಣಿಸಿದ್ದರು.

ರಂಜಾನ್ ಆಚರಣೆ ಮೇಲೆ ಕರಿಛಾಯೆ:
ಪಾಕಿಸ್ತಾನ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಗೆ ಸೇರಿದ ಈ ವಿಮಾನವು (PIA) ಲಾಹೋರ್​ ಮತ್ತು ಕರಾಚಿ ನಡುವೆ ಸಂಚರಿಸುತ್ತಿತ್ತು. ಕರಾಚಿಯಲ್ಲಿ ಜಿನ್ನಾ ಗಾರ್ಡನ್ ಏರಿಯಾದಲ್ಲಿ ಲ್ಯಾಂಡಿಂಗ್​ಗೆ ಒಂದೆರಡು ನಿಮಿಷ ಇರುವಾಗ ಬಿದ್ದಿದೆ. ಬಹುತೇಕ ಪ್ರಯಾಣಿಕರು ರಂಜಾನ್ ಆಚರಣೆಗೆಂದು ತಮ್ಮ ತಮ್ಮ ಊರುಗಳಿಗೆ ತೆರಳಲು ಲಾಹೋರ್​ನಿಂದ ವಿಮಾನದ ಮೂಲಕ ಕರಾಚಿಗೆ ಬಂದಿಳಿಯಬೇಕಿತ್ತು. ಆದ್ರೆ ಅಷ್ಟರಲ್ಲಿ ವಿಧಿ ಬೇರೆಯದ್ದೇ ಆಟ ಆಡಿದೆ.

Published On - 4:16 pm, Fri, 22 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us