AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಆತಂಕ: ಇರಾನ್​ನ ಹಿಟ್​ಲಿಸ್ಟ್​ನಲ್ಲಿ ಇದ್ದಾರಂತೆ ಟ್ರಂಪ್, ಮೆಲೋನಿ, ನೆತನ್ಯಾಹು ಅಲಿ ಪುತ್ರನ ಶಪಥ

ಇರಾನ್‌ನ ನೂತನ ನಾಯಕ ಮೊಜ್ತಬಾ ಖಮೇನಿ, ತಮ್ಮ ತಂದೆಯ ಸಾವಿಗೆ ಪ್ರತೀಕಾರವಾಗಿ ಟ್ರಂಪ್, ಮೆಲೋನಿ, ಮ್ಯಾಕ್ರನ್ ಸೇರಿದಂತೆ ಹಲವು ಜಾಗತಿಕ ನಾಯಕರನ್ನು ಗುರಿಯಾಗಿಸಿ ಹಿಟ್‌ಲಿಸ್ಟ್ ಬಿಡುಗಡೆ ಮಾಡಿದ್ದಾರೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಜಾಗತಿಕ ಭದ್ರತೆಗೆ ತೀವ್ರ ಆತಂಕ ಸೃಷ್ಟಿಸಿದೆ. ಪಾಶ್ಚಿಮಾತ್ಯ ದೇಶಗಳ ಭದ್ರತಾ ಸಂಸ್ಥೆಗಳಿಗೆ ಇದು ದೊಡ್ಡ ಸವಾಲಾಗಿದೆ.

ಜಾಗತಿಕ ಆತಂಕ: ಇರಾನ್​ನ ಹಿಟ್​ಲಿಸ್ಟ್​ನಲ್ಲಿ ಇದ್ದಾರಂತೆ ಟ್ರಂಪ್, ಮೆಲೋನಿ, ನೆತನ್ಯಾಹು ಅಲಿ ಪುತ್ರನ ಶಪಥ
ಜಾರ್ಜಿಯ ಮೆಲೋನಿ, ಬೆಂಜಮಿನ್ ನೆತನ್ಯಾಹು ಮತ್ತು ಡೊನಾಲ್ಡ್ ಟ್ರಂಪ್
ನಯನಾ ರಾಜೀವ್
| Edited By: |

Updated on:Jul 13, 2026 | 2:27 PM

Share

ಟೆಹ್ರಾನ್, ಜುಲೈ 13: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನಡುವೆಯೇ ಜಾಗತಿಕ ರಾಜಕಾರಣದಲ್ಲಿ ನೆತ್ತರು ಹೆಪ್ಪುಗಟ್ಟಿಸುವಂತಹ ರಣತಂತ್ರವೊಂದು ಬಯಲಾಗಿದೆ. ಇರಾನ್‌(Iran)ನ ಅತ್ಯುನ್ನತ ಧಾರ್ಮಿಕ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ರಾಷ್ಟ್ರಗಳ ಅಗ್ರ ನಾಯಕರನ್ನು ಒಳಗೊಂಡ ಹಿಟ್​ಲಿಸ್ಟ್​ ಅನ್ನು ಇರಾನ್‌ನ ಪ್ರಭಾವಿ ಸರ್ಕಾರಿ ಮಾಧ್ಯಮವೊಂದು ಪ್ರಕಟಿಸಿದೆ.

2026ರ ಫೆಬ್ರವರಿ 28 ರಂದು ನಡೆದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯ ಬೆನ್ನಲ್ಲೇ ಇರಾನ್‌ನ ನೂತನ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅವರ ಪುತ್ರ ಮೊಜ್ತಬಾ ಖಮೇನಿ, “ನಮ್ಮ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವುದು ನಮ್ಮ ರಾಷ್ಟ್ರದ ಇಚ್ಛೆಯಾಗಿದೆ. ಈ ಹಿಟ್ ಲಿಸ್ಟ್‌ನಲ್ಲಿರುವ ಅಪರಾಧಿಗಳು ತಮ್ಮ ಹಾಸಿಗೆಯ ಮೇಲೆ ಶಾಂತಿಯುತವಾಗಿ ಸಾಯುವ ಆಸೆಯನ್ನು ಸಮಾಧಿಗೆ ಕೊಂಡೊಯ್ಯಬೇಕಾಗುತ್ತದೆ” ಎಂದು ಭೀಕರ ಶಪಥ ಮಾಡಿದ್ದಾರೆ.

ಪತ್ರಿಕೆಯಲ್ಲಿ ಬಿಡುಗಡೆಯಾಯ್ತು 13 ಜಾಗತಿಕ ನಾಯಕರ ಫೋಟೋ

ಇರಾನ್ ರಾಜಧಾನಿ ಟೆಹ್ರಾನ್‌ನ ಅಧಿಕೃತ ಆಡಳಿತ ಮಂಡಳಿಯಿಂದ ಪ್ರಕಟವಾಗುವ ‘ಹಮ್ಶಹ್ರಿ’ (Hamshahri) ಎಂಬ ಸಂಪ್ರದಾಯವಾದಿ ಪತ್ರಿಕೆಯು ಮೊಜ್ತಬಾ ಅವರ ಈ ಎಚ್ಚರಿಕೆಯ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಇನ್ಫೋಗ್ರಾಫಿಕ್ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇರಾನ್ ಗುರಿಯಾಗಿಸಲಿರುವ ವಿಶ್ವದ 13 ಪ್ರಮುಖ ನಾಯಕರ ಫೋಟೋಗಳನ್ನು ಹಾಕಲಾಗಿದೆ.

ಇರಾನ್‌ನ ಹಿಟ್ ಲಿಸ್ಟ್‌ನಲ್ಲಿರುವ ಪ್ರಮುಖರು

ಡೊನಾಲ್ಡ್ ಟ್ರಂಪ್ (ಅಮೆರಿಕ ಅಧ್ಯಕ್ಷ)

ಬೆಂಜಮಿನ್ ನೆತನ್ಯಾಹು (ಇಸ್ರೇಲ್ ಪ್ರಧಾನಿ)

ಕೀರ್ ಸ್ಟಾರ್ಮರ್ (ಬ್ರಿಟನ್ ಪ್ರಧಾನಿ)

ಎಮ್ಯಾನುಯೆಲ್ ಮ್ಯಾಕ್ರನ್ (ಫ್ರಾನ್ಸ್ ಅಧ್ಯಕ್ಷ)

ಜಾರ್ಜಿಯಾ ಮೆಲೋನಿ (ಇಟಲಿ ಪ್ರಧಾನಿ)

ಫ್ರೆಡ್ರಿಕ್ ಮೆರ್ಜ್ (ಜರ್ಮನಿ ಚಾನ್ಸೆಲರ್)

ಮಾರ್ಕೊ ರೂಬಿಯೊ (ಅಮೆರಿಕದ ವಿದೇಶಾಂಗ ಕಾರ್ಯದರ್ಶಿ)

ಪೀಟ್ ಹೆಗ್ಸೆತ್ (ಅಮೆರಿಕದ ರಕ್ಷಣಾ ಕಾರ್ಯದರ್ಶಿ)

ಮತ್ತಷ್ಟು ಓದಿ: ನಾನೇ ನಂಬರ್ 1 ಟಾರ್ಗೆಟ್, ಇರಾನ್‌ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದ ಡೊನಾಲ್ಡ್ ಟ್ರಂಪ್

ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಇರಾನ್ ಕೆಂಡಾಮಂಡಲ

ಈ ಯುದ್ಧದಲ್ಲಿ ಕೇವಲ ಅಮೆರಿಕ ಮತ್ತು ಇಸ್ರೇಲ್ ಮಾತ್ರವಲ್ಲದೆ ಇಡೀ ಯುರೋಪ್ ತನ್ನ ವಿನಾಶಕ್ಕೆ ಕಾರಣ ಎಂದು ಇರಾನ್ ನಂಬಿದೆ. ಅಮೆರಿಕದ ಯುದ್ಧವಿಮಾನಗಳು ಇರಾನ್ ಮೇಲೆ ಬಾಂಬ್ ದಾಳಿ ಮಾಡಲು ತಮ್ಮ ವಾಯುಪ್ರದೇಶವನ್ನು ಬಳಸಲು ಮುಕ್ತ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಫ್ರಾನ್ಸ್, ಇಟಲಿ ಮತ್ತು ಜರ್ಮನಿಯ ನಾಯಕರನ್ನು ಇರಾನ್ ತೀವ್ರವಾಗಿ ದ್ವೇಷಿಸುತ್ತಿದೆ.

ಖುದ್ದಾಗಿ ಮೊಜ್ತಾಬಾ ಖಮೇನಿ ಕೂಡ ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಈಗ ರಹಸ್ಯ ಸ್ಥಳದಿಂದಲೇ ಜಾಗತಿಕ ನಾಯಕರ ಹತ್ಯೆಗೆ ಸ್ಕೆಚ್ ಹಾಕುತ್ತಿರುವುದು ಪಾಶ್ಚಿಮಾತ್ಯ ದೇಶಗಳ ಭದ್ರತಾ ಸಂಸ್ಥೆಗಳಿಗೆ ಭಾರಿ ತಲೆನೋವಾಗಿ ಪರಿಣಮಿಸಿದೆ.

ಜಾಗತಿಕ ಭದ್ರತೆಯ ಮೇಲಾಗುವ ಭೀಕರ ಪ್ರಭಾವ

ಇರಾನ್‌ನ ಈ ಅಧಿಕೃತ ಬೆದರಿಕೆಯು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ರಹಸ್ಯ ಕಮಾಂಡೋ ದಾಳಿಗಳ ಭೀತಿ: ಇರಾನ್ ಈ ಹಿಂದೆ ಜಾಗತಿಕವಾಗಿ ತನ್ನ ಶತ್ರುಗಳನ್ನು ಮಟ್ಟಹಾಕಲು ತನ್ನ ಪ್ರಸಿದ್ಧ ‘ಕುದ್ಸ್ ಫೋರ್ಸ್’ಮತ್ತು ಇಂಟರ್ನ್ಯಾಷನಲ್ ಸ್ಲೀಪರ್ ಸೆಲ್‌ಗಳನ್ನು ಬಳಸಿಕೊಂಡ ಇತಿಹಾಸ ಹೊಂದಿದೆ. ಈಗ ನೇರವಾಗಿ ದೇಶಗಳ ಪ್ರಧಾನಿಗಳನ್ನೇ ಟಾರ್ಗೆಟ್ ಮಾಡಿರುವುದರಿಂದ ಅಮೆರಿಕದ ಸೀಕ್ರೆಟ್ ಸರ್ವೀಸ್ ಸೇರಿದಂತೆ ಜಾಗತಿಕ ಕಮಾಂಡೋ ಪಡೆಗಳು ತಮ್ಮ ನಾಯಕರ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿವೆ.

ಯುದ್ಧ ಮತ್ತಷ್ಟು ಭೀಕರವಾಗುವ ಶಂಕೆ: ಇರಾನ್‌ನ ಇಂತಹ ಪ್ರಚೋದನಾಕಾರಿ ಹೇಳಿಕೆಗಳು ಶಾಂತಿ ಮಾತುಕತೆಯ ಹಾದಿಯನ್ನು ಸಂಪೂರ್ಣವಾಗಿ ಮುಚ್ಚಿಹಾಕುತ್ತವೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಈ ಹಿಟ್ ಲಿಸ್ಟ್‌ಗೆ ಪ್ರತಿಯಾಗಿ ಟೆಹ್ರಾನ್‌ನಲ್ಲಿರುವ ಇರಾನ್‌ನ ಮಿಲಿಟರಿ ಬಂಕರ್‌ಗಳ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಲು ಬ್ಲೂಪ್ರಿಂಟ್ ಸಿದ್ಧಪಡಿಸುತ್ತಿವೆ ಎನ್ನಲಾಗಿದೆ. ಜಾಗತಿಕ ಮಹಾಯುದ್ಧದ ಕಡೆಗೆ ಜಾರುತ್ತಿರುವ ಮಧ್ಯಪ್ರಾಚ್ಯದ ಪರಿಸ್ಥಿತಿ ಸದ್ಯ ಅತ್ಯಂತ ಕಠಿಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:22 pm, Mon, 13 July 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್