Pakistan act against Terrorists: ದಕ್ಷಿಣ ವಜಿರಿಸ್ತಾನದ ಉಗ್ರತಾಣವೊಂದರ ಮೇಲೆ ಭದ್ರತಾ ದಳ ದಾಳಿ, 11 ಭಯೋತ್ಪಾದಕರ ಹತ್ಯೆ

ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಸ್ಥಳೀಯ ನಾಯಕ ಹಫೀಜ್ ಉಲ್ಲಾಹ್ ಸೇರಿದಂತೆ 11 ಉಗ್ರರನ್ನು ಭದ್ರತಾ ದಳಗಳು ಕೊಂದಿವೆ. ಅವರಲ್ಲಿ ಇಬ್ಬರು ಆತ್ಮಹತ್ಯೆ ಬಾಂಬರ್ ಗಳು ಕೂಡ ಸೇರಿದ್ದಾರೆ.

Pakistan act against Terrorists: ದಕ್ಷಿಣ ವಜಿರಿಸ್ತಾನದ ಉಗ್ರತಾಣವೊಂದರ ಮೇಲೆ ಭದ್ರತಾ ದಳ ದಾಳಿ, 11 ಭಯೋತ್ಪಾದಕರ ಹತ್ಯೆ
ಪಾಕಿಸ್ತಾನದ ಭದ್ರತಾ ಪಡೆಗಳಿಂದ ಉಗ್ರರ ವಿರುದ್ಧ ಕಾರ್ಯಾಚರಣೆ
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2023 | 12:39 PM

ಪಾಕಿಸ್ತಾನ ತಾನೇ ಆಶ್ರಯ ನೀಡಿದ ಭಯೋತ್ಪಾದಕರ (Terrorists) ವಿರುದ್ಧ ಕಾರ್ಯಾಚರಣೆ ಆರಂಭಿಸಿರುವುದು ಗಮನಾರ್ಹ ಸಂಗತಿ. ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ಮಟ್ಟಹಾಕುವುದಕ್ಕಾಗಿ ಗುಪ್ತಚರ ವಿಭಾಗ ನೀಡಿದ ಮಾಹಿತಿಯೊಂದನ್ನು ಆಧರಿಸಿ ಪಾಕಿಸ್ತಾನದದ ಭದ್ರತಾ ದಳಗಳು (security forces) ದಕ್ಷಿಣ ವಜಿರಿಸ್ತಾನಲ್ಲಿದ್ದ (South Waziristan) ಉಗ್ರರ ನೆಲೆಯೊಂದರ ಮೇಲೆ ದಾಳಿ ನಡೆಸಿ 11 ಭಯೋತ್ಪಾದಕರನ್ನು ಕೊಂದಿವೆ. ‘ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ವಜಿರಿಸ್ತಾನದ ಸಾಮಾನ್ಯ ಪ್ರದೇಶವೊಂದರ ಮೇಲೆ ನಮ್ಮ ಸಿಬ್ಬಂದಿ ದಳಗಳು ಆಕ್ರಮಣ ನಡೆಸಿ ಉನ್ನತ ಮಟ್ಟದ ಭಯೋತ್ಪಾದಕ ಚಟುವಟಿಕೆ ತಾಣವೊಂದನ್ನು ಧ್ವಂಸಗೊಳಿಸಿವೆ,’ ಎಂದು ಪಾಕಿಸ್ತಾನದ ಮಿಲಿಟರಿ ಮಾಧ್ಯಮವಾಗಿರುವ ಸಾರ್ವಜನಿಕ ಆಂತರಿಕ ಸೇವೆಗಳ ಸಂಸ್ಥೆಯ (ಐ ಎಸ್ ಪಿ ಅರ್) ಹೇಳಿಕೆಯನ್ನು ಆಧರಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.

ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಸ್ಥಳೀಯ ನಾಯಕ ಹಫೀಜ್ ಉಲ್ಲಾಹ್ ಸೇರಿದಂತೆ 11 ಉಗ್ರರನ್ನು ಭದ್ರತಾ ದಳಗಳು ಕೊಂದಿವೆ. ಅವರಲ್ಲಿ ಇಬ್ಬರು ಆತ್ಮಹತ್ಯೆ ಬಾಂಬರ್ ಗಳು ಕೂಡ ಸೇರಿದ್ದಾರೆ. ದಾಳಿ ನಡೆಸಿದ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಬರಾಮತ್ತು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಯೋಗಿ ಸರ್ಕಾರಕ್ಕೆ ಬಿಗ್ ರಿಲೀಫ್: OBC ಮೀಸಲಾತಿ ನೀಡದೆ ಸ್ಥಳೀಯ ಚುನಾವಣೆ ನಡೆಸಿ, ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

‘ಹತ್ಯೆಯಾಗಿರುವ ಉಗ್ರರು ಭಯೋತ್ಪದಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಮತ್ತು ದಕ್ಷಿಣ ವಜಿರಿಸ್ತಾನದ ಪೊಲೀಸ್ ಮತ್ತು ಭದ್ರತಾ ದಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರು,’ ಎಂದು ಐ ಎಸ್ ಪಿ ಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪಾಕಿಸ್ತಾನದ ನಿಷೇಧಿತ ಭಯೋತ್ಪಾದಕರ ಗುಂಪು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಕಳೆದ ವರ್ಷದ ನವೆಂಬರ್ ನಲ್ಲಿ ಕದನವಿರಾಮವನ್ನು ಉಲ್ಲಂಘಿಸಿದ ಬಳಿಕ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಿವೆ.

ತಾಲಿಬಾನ್ ಆಡಳಿತದ ಅಪಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ತನ್ನ ದೇಶದಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದ ಬಳಿಕ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಹಳಸಿವೆ.

ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಕೊಲೆಯಾದ ಮಹಿಳೆಯೇ ಪ್ರೇತಾತ್ಮವಾಗಿ ಹಂತಕನನ್ನು ಹಿಡಿದುಕೊಟ್ಟ ನಂಬಲಸದಳ ಕತೆಯಿದು!

ಡಾನ್ ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ದಕ್ಷಿಣ ವಜಿರಿಸ್ತಾನಲ್ಲಿ ಭಯೋತ್ಪಾದಕರು; ಭದ್ರತಾ ದಳ ಹಾಗೂ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಐ ಎಸ್ ಪಿ ಆರ್ ವರದಿ ಮಾಡಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ