AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​: ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿ ಸಮಯದಲ್ಲಿ 5 ತಿಂಗಳ ಮಗುವನ್ನು ವೈದ್ಯರು ರಕ್ಷಿಸಿದ್ದು ಹೇಗೆ?

ಉಕ್ರೇನ್​ ಮಕ್ಕಳ ಆಸ್ಪತ್ರೆಯ ಮೇಲೆ ಕ್ಷಿಪಣಿಗಳ ದಾಳಿ ನಡೆದಿದೆ, ಈ ಸಂದರ್ಭದಲ್ಲಿ ಐದು ತಿಂಗಳ ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿತ್ತು, ವೈದ್ಯರು ಆ ಮಗುವಿನ ಜೀವ ಉಳಿಸಲು ಯಾವ ರೀತಿ ಜೀವ ಪಣಕ್ಕಿಟ್ಟು ಹೋರಾಡಿದರು ಎನ್ನುವ ಮಾಹಿತಿ ಇಲ್ಲಿದೆ.

ಉಕ್ರೇನ್​: ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿ ಸಮಯದಲ್ಲಿ 5 ತಿಂಗಳ ಮಗುವನ್ನು ವೈದ್ಯರು ರಕ್ಷಿಸಿದ್ದು ಹೇಗೆ?
ಉಕ್ರೇನ್
ನಯನಾ ರಾಜೀವ್
|

Updated on: Jul 10, 2024 | 10:03 AM

Share

ಉಕ್ರೇನ್​ನ ಕೈವ್​ನಲ್ಲಿರುವ ಮಕ್ಕಳ ಆಸ್ಪತ್ರೆಗಳ ಮೇಲೆ ವೈಮಾನಿಕ ದಾಳಿ ನಡೆದಿದೆ. ಓಖ್ಮಾಟ್‌ಡಿಟ್ ಮಕ್ಕಳ ಆಸ್ಪತ್ರೆಗೆ ಕ್ಷಿಪಣಿ ಬಂದು ಅಪ್ಪಳಿಸಿತ್ತು. ವೈದ್ಯರು 5 ತಿಂಗಳ ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ವೇಳೆ ಕ್ಷಿಪಣಿ ದಾಳಿ ನಡೆದಿದೆ. ಗಾಜಿನ ಚೂರುಗಳು ವೈದ್ಯರು ಹಾಗೂ ಸಹೋದ್ಯೋಗಿಗಳ ದೇಹವನ್ನು ಹೊಕ್ಕಿತ್ತು.

ನೋಡನೋಡುತ್ತಿದ್ದಂತೆ ರಕ್ತ ಹರಿಯಲಾರಂಭಿಸಿತ್ತು. ಶಸ್ತ್ರ ಚಿಕಿತ್ಸೆಗೆ ಬಳಕೆ ಮಾಡುತ್ತಿದ್ದ ಉಪಕರಣಗಳೆಲ್ಲಾ ಛಿದ್ರಗೊಂಡಿದ್ದವು. ಒಮ್ಮೆ ಎಲ್ಲರೂ ಜೀವಂತವಾಗಿದ್ದಾರಾ ಎಂದು ವೈದ್ಯರು ಎಲ್ಲಾ ಕಡೆ ಕಣ್ಣು ಹಾಯಿಸಿದರು. ಮಗು ಮೇಜಿನ ಮೇಲೆ ಮಲಗಿದ್ದಲ್ಲೇ ಮಲಗಿತ್ತು.

ವೆಂಟಿಲೇಟರ್​ ಮುರಿದುಬಿದ್ದಿತ್ತು, ಕೂಡಲೇ ಅನಸ್ತೇಶಿಯಾ ತಜ್ಞರು ಕೈಯಿಂದ ಪುನರುಜ್ಜೀವನಗೊಳಿಸುವ ಯಂತ್ರವನ್ನು ಹಿಡಿದು ಇನ್ನೇನು ಹೊರಡಬೇಕು ಅನ್ನೊವಷ್ಟೊತ್ತಿಗೆ ಸೀಲಿಂಗ್ ಕುಸಿದಿದೆ. ಆತಂಕಗೊಂಡ ವೈದ್ಯರು ಕೂಡಲೇ ಮಗುವನ್ನು ಎತ್ತಿಕೊಂಡು ನೆಲಮಾಳಿಗೆಗೆ ಓಡಿದರು. ಹೇಗೋ ಮಗುವನ್ನು ರಕ್ಷಿಸಿ ಆಸ್ಪತ್ರೆಯಿಂದ ಹೊರ ಕರೆತರುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಓದಿ:Russia-Ukraine War: ಉಕ್ರೇನ್​ನ ಅಪಾರ್ಟ್​ಮೆಂಟ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ; 30 ಮಂದಿ ಸಾವು, 12 ಜನರ ಸ್ಥಿತಿ ಗಂಭೀರ

ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ಭೀಕರತೆಯನ್ನು ಅರಿತ ರೋಗಿಗಳು ಕೂಡಲೇ ನೆಲಮಹಡಿಗೆ ಓಡಿ ಹೋಗಿದ್ದಾರೆ. ಮೊದಲು ಆಸ್ಪತ್ರೆಯಾದರೂ ಮಕ್ಕಳು ಹಾಗೂ ವೃದ್ಧರಿಗೆ ಸುರಕ್ಷಿತ ಸ್ಥಳ ಎಂದುಕೊಂಡಿದ್ದೆವು ಆದರೆ ಉಕ್ರೇನ್​ನಲ್ಲಿ ಯಾವ ಸ್ಥಳವೂ ಸುರಕ್ಷಿತವಾಗಿಲ್ಲ ಎಂದು ಇವನೊವ್ ಎಂಬುವವರು ಹೇಳಿದ್ದಾರೆ.

ಮಗುವನ್ನು ಕೂಡಲೇ ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ಮಗು ಆರೋಗ್ಯವಾಗಿದೆ ಎಂಬುದು ತಿಳಿದುಬಂದಿದೆ.

ನೂರಾರು ಸ್ವಯಂಸೇವಕರು ಒಡೆದ ಗಾಜು, ಅವಶೇಷಗಳು ಮತ್ತು ಹಾನಿಗೊಳಗಾದ ಉಪಕರಣಗಳನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದರಿಂದ ಸ್ಫೋಟದ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಜನರು ಒಗ್ಗಟ್ಟಾಗಿರುವುದನ್ನು ಕಂಡು ಸಂತೋಷವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ