
ಲಂಡನ್, ಸೆಪ್ಟೆಂಬರ್ 4: ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷದ ಆಚರಣೆಗಳ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ, ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಇಂದು ಲಂಡನ್‌ನಲ್ಲಿ ಪತ್ರಿಕಾಗೋಷ್ಠಿ ಮತ್ತು ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡರು. ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಅವರ ಯುಕೆ ಪ್ರವಾಸದ ಹಿನ್ನೆಲೆಯಲ್ಲಿ ಸುನಿಲ್ ಅಂಬೇಕರ್ ಲಂಡನ್‌ಗೆ ಆಗಮಿಸಿದ್ದು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
“ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರ ಯುಕೆ ಪ್ರವಾಸಕ್ಕೆ ಇದು ಸೂಕ್ತ ಸಂದರ್ಭವಾಗಿದೆ. ಅವರು ಈಗಾಗಲೇ ಸೆಪ್ಟೆಂಬರ್ 2ರಂದು ಬ್ರಿಟನ್‌ಗೆ ತಲುಪಿದ್ದಾರೆ. ಅವರ ಈ ಪ್ರವಾಸವು ಸೆಪ್ಟೆಂಬರ್ 7ವರೆಗೆ ನಡೆಯಲಿದೆ. ಈ ಪ್ರವಾಸವನ್ನು ಆರ್‌ಎಸ್‌ಎಸ್‌ನ ಶತಾಬ್ದಿ ವರ್ಷದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ” ಎಂದು ಸುನಿಲ್ ಅಂಬೇಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವವರು ಹಿಂದೂಗಳೇ ಅಲ್ಲ’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಇಂದಿನ ಜಾಗತಿಕ ಸಂಘರ್ಷಗಳಿಗೆ ಹಾಗೂ ಪರಿಸರ ಸವಾಲುಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಕುಟುಂಬ ಮೌಲ್ಯಗಳಲ್ಲಿ ಉತ್ತಮ ಪರಿಹಾರಗಳಿವೆ ಎಂದ ಸುನಿಲ್ ಅಂಬೇಕರ್, ಯೋಗ, ಸಾಮಾಜಿಕ ಸಾಮರಸ್ಯ ಮತ್ತು ‘ವಸುಧೈವ ಕುಟುಂಬಕಂ’ ನಿಲುವನ್ನು ವಿಶ್ವ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಆರ್‌ಎಸ್‌ಎಸ್ ಉತ್ಸುಕವಾಗಿದೆ ಎಂದರು. ಹಾಗೇ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಹಿಂದೂಗಳು ತಾವು ವಾಸಿಸುವ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಜೊತೆಗೆ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
VIDEO | London: Addressing a press conference, RSS Akhil Bharatiya Prachar Pramukh Sunil Ambekar says, “This is the occasion for the visit of RSS chief Dr. Mohan Bhagwat ji to the UK. He has already arrived in the UK on September 2. His tour will be from September 2 to 7… The… pic.twitter.com/MQKscIM2Ek
— Press Trust of India (@PTI_News) September 4, 2026
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಲಂಡನ್ ಭೇಟಿಯನ್ನು ಜಾಗತಿಕ ನಾಗರಿಕ ಸಂವಾದದ ಭಾಗವಾಗಿ ಬಿಂಬಿಸಲಾಗುತ್ತಿದೆ. ಈ ಪ್ರವಾಸದಲ್ಲಿ ಅವರು ಯುಕೆ ಮೂಲದ ಅನಿವಾಸಿ ಭಾರತೀಯರು, ಚಿಂತಕರು, ನೀತಿ ನಿರೂಪಕರು ಹಾಗೂ ವಿವಿಧ ಸಮುದಾಯಗಳ ನಾಯಕರೊಂದಿಗೆ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯ ಕುರಿತು ಲಂಡನ್‌ನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸುನಿಲ್ ಅಂಬೇಕರ್, ಭಾರತೀಯ ಸಂಸ್ಕೃತಿ ಮತ್ತು ಆರ್‌ಎಸ್‌ಎಸ್‌ನ ತತ್ವಶಾಸ್ತ್ರ, ವಿಶ್ವಬಂಧುತ್ವ ಹಾಗೂ ಭಾರತೀಯ ಜೀವನಪದ್ಧತಿಯ ಕುರಿತು ಮುಕ್ತ ಸಂವಾದ ನಡೆಸಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುವುದು ಎಂದಿದ್ದಾರೆ.
VIDEO | London: Addressing a press conference, RSS Akhil Bharatiya Prachar Pramukh Sunil Ambekar says, “…This outreach is aimed at communicating directly with the world. So, in this centenary year, we are trying to reach out to important public personalities, associations and… pic.twitter.com/8bhqB6cHXi
— Press Trust of India (@PTI_News) September 4, 2026
ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ ಆಗಸ್ಟ್ 29ರಂದು ಏಕತಾ ಆಚರಣೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ
ಅಮೆರಿಕ ಹಾಗೂ ಕೆನಡಾ ಪ್ರವಾಸಗಳ ನಂತರ ಮೋಹನ್ ಭಾಗವತ್ ಅವರು ಲಂಡನ್‌ಗೆ ಭೇಟಿ ನೀಡಿದ್ದಾರೆ. ಭಾರತದ ಹೊರಗಿನ ಸಮುದಾಯಗಳೊಂದಿಗೆ ಬಾಂಧವ್ಯವನ್ನು ಬಲಪಡಿಸುವುದು ಮತ್ತು ಆರ್‌ಎಸ್‌ಎಸ್ ಬಗ್ಗೆ ಇರುವ ಜಾಗತಿಕ ದೃಷ್ಟಿಕೋನವನ್ನು ಹಂಚಿಕೊಳ್ಳುವುದು ಈ ಅಂತಾರಾಷ್ಟ್ರೀಯ ಭೇಟಿಗಳ ಮುಖ್ಯ ಉದ್ದೇಶವಾಗಿದೆ. ಆರ್‌ಎಸ್‌ಎಸ್ ನಾಯಕರ ಈ ಜಾಗತಿಕ ಮಾತುಕತೆಯು ಲಂಡನ್ನಲ್ಲಿರುವ ಭಾರತೀಯ ಸಮುದಾಯ ಮತ್ತು ಜಾಗತಿಕ ಮಾಧ್ಯಮಗಳ ಗಮನ ಸೆಳೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ